ಕಾರ್ತಿಕ್ ಸುಬ್ಬರಾಜು- ವಿಕ್ರಮ್ ನಟನೆಯ ತಮಿಳು ಸಿನಿಮಾದಲ್ಲಿ ನಟಿಸಲ್ಲ: ಶಿವರಾಜ್ ಕುಮಾರ್

ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅವರು ಕಾಲಿವುಡ್‌ಗೆ ಹೋಗಲಿದ್ದಾರೆ ಎನ್ನುವ ಸುದ್ದಿಗಳು ಜೋರಾಗಿ ಕೇಳಿ ಬರುತ್ತಿತ್ತು, ಕಾರ್ತಿಕ್ ಸುಬ್ಬರಾಜು ನಿರ್ದೇಶನದ ನಟ ವಿಕ್ರಮ್‌ ಚಿತ್ರದಲ್ಲಿ ಶಿವಣ್ಣ ಶಿವರಾಜ್ ಕುಮಾರ್ ನಟಿಸದಿರಲು ನಿರ್ಧರಿಸಿದ್ದಾರೆ.

Published: 28th January 2021 11:04 AM  |   Last Updated: 28th January 2021 12:41 PM   |  A+A-


Shivarajukumar

ಶಿವರಾಜ್ ಕುಮಾರ್

Posted By : Shilpa D
Source : The New Indian Express

ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅವರು ಕಾಲಿವುಡ್‌ಗೆ ಹೋಗಲಿದ್ದಾರೆ ಎನ್ನುವ ಸುದ್ದಿಗಳು ಜೋರಾಗಿ ಕೇಳಿ ಬರುತ್ತಿತ್ತು, ಕಾರ್ತಿಕ್ ಸುಬ್ಬರಾಜು ನಿರ್ದೇಶನದ ನಟ ವಿಕ್ರಮ್‌ ಚಿತ್ರದಲ್ಲಿ ಶಿವಣ್ಣ ಶಿವರಾಜ್ ಕುಮಾರ್ ನಟಿಸದಿರಲು ನಿರ್ಧರಿಸಿದ್ದಾರೆ.

ಹಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವ ಶಿವಣ್ಣ ಡೇಟ್ ಹೊಂದಾಣಿಕೆಯಾಗದ ಕಾರಣ ತಮಿಳು ಪ್ರಾಜೆಕ್ಟ್ ಡ್ರಾಪ್ ಮಾಡಿದ್ದಾರೆ.  ಸದ್ಯ ವಿಜಯ್ ಮಿಲ್ಟನ್ ನಿರ್ದೇಶನದ ಶಿವಪ್ಪ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.

ಒಂದು ವಾರದ ಹಿಂದೆಯಷ್ಟೆನಿರ್ದೇಶಕ ಕಾರ್ತಿಕ್‌ ಸುಬ್ಬರಾಜು ಅವರು ಬಂದು ಕತೆ ಹೇಳಿದರು. ಒಳ್ಳೆಯ ಕತೆ ಮಾಡಿಕೊಂಡಿದ್ದಾರೆ. ನನಗೂ ಖುಷಿ ಆಯಿತು ಕತೆ ಕೇಳಿ. ಈ ಚಿತ್ರದಲ್ಲಿ ನಟಿಸುವಂತೆ ಕಾರ್ತಿಕ್‌ ಸುಬ್ಬರಾಜು ಅವರೇ ಕೇಳಿದ್ದರು.

ನಾನು ಒಂದು ವಾರ ಸಮಯ ತೆಗೆದುಕೊಂಡಿದ್ದೆ. ಯಾಕೆಂದರೆ ಈಗಾಗಲೇ ನಾನು ಒಪ್ಪಿಕೊಂಡಿರುವ ಚಿತ್ರಗಳ ಶೂಟಿಂಗ್‌ ಯಾವಾಗ ಮುಗಿಯುತ್ತವೆ, ನನ್ನ ಕಮಿಟ್‌ಮೆಂಟ್‌ ಏನು ಎಂಬುದು ಇನ್ನೂ ಗೊತ್ತಿರಲಿಲ್ಲ, ಡೇಟ್ಸ್ ಹೊಂದಾಣಿಕೆಯಾಗದ ಕಾರಣ ತಮಿಳು ಸಿನಿಮಾದಲ್ಲಿ ನಟಿಸದಿರಲು ನಿರ್ಧರಿಸಿದ್ದಾರೆ. 

ನನ್ನ ಪಾತ್ರದ ಬಗ್ಗೆ ವಿಸ್ತೃತವಾದ ವಿವರ ಸಿಕ್ಕಿಲ್ಲ, ಹೀಗಾಗಿ ನಾನು ಈ ಸಿನಿಮಾದಲ್ಲಿ ನಟಿಸದಿರಲು ನಿರ್ಧರಸಿದ್ದಾರೆ. ಸದ್ಯ ಹರ್ಷ ನಿರ್ದೇಶದನ ಭಜರಂಗಿ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp