ವಿಕ್ರಾಂತ್ ರೋಣ ಚಿತ್ರದ ಶೀರ್ಷಿಕೆ ಅನಾವರಣ: ದುಬೈನಲ್ಲಿ ಕಿಚ್ಚನಿಗೆ ಅದ್ದೂರಿ ಸ್ವಾಗತ

‘ವಿಕ್ರಾಂತ್ ರೋಣ’ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮಕ್ಕಾಗಿ ದುಬೈ ತಲುಪಿರುವ ನಟ ಕಿಚ್ಚ ಸುದೀಪ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೋರಲಾಗಿದೆ.

Published: 28th January 2021 12:24 PM  |   Last Updated: 28th January 2021 12:42 PM   |  A+A-


Sudeep

ಸುದೀಪ್ ಗೆ ಸ್ವಾಗತ

Posted By : Shilpa D
Source : UNI

ಬೆಂಗಳೂರು: ‘ವಿಕ್ರಾಂತ್ ರೋಣ’ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮಕ್ಕಾಗಿ ದುಬೈ ತಲುಪಿರುವ ನಟ ಕಿಚ್ಚ ಸುದೀಪ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೋರಲಾಗಿದೆ.

ಸುದೀಪ್‌ ಜನವರಿ 27ರಂದು ದುಬೈ ವಿಮಾನದಲ್ಲಿಳಿದ ಕ್ಷಣ, ಅಲ್ಲಿನ ಸಾಂಪ್ರದಾಯಿಕ ಶೈಲಿಯಲ್ಲಿ ಹೂವಿನ ಹಾರ ಹಾಕಿ, ಹೂಗುಚ್ಛ ಮತ್ತು ಉಡುಗೊರೆಗಳನ್ನು ನೀಡಿ ಸ್ವಾಗತಿಸಲಾಗಿದೆ. ಈ ವೇಳೆ ಸುದೀಪ್‌ ಪತ್ನಿ ಪ್ರಿಯಾ ಕೂಡ ಜೊತೆಗಿದ್ದರು. ವಿದೇಶಿ ನೆಲದಲ್ಲಿ ತಮ್ಮ ನೆಚ್ಚಿನ ನಟನಿಗೆ ಈ ಪರಿ ಗೌರವ ಸಿಗುತ್ತಿರುವುದನ್ನು ಕಂಡು ಫ್ಯಾನ್ಸ್‌ ಸಖತ್‌ ಖುಷಿ ಆಗಿದ್ದಾರೆ.

ಸುದೀಪ್‌ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳನ್ನು ಪೂರೈಸುತ್ತಿದ್ದಾರೆ. ಅಲ್ಲದೆ, 'ಫ್ಯಾಂಟಮ್‌' ಎಂದಿದ್ದ ಸಿನಿಮಾ ಹೆಸರು ಈಗ 'ವಿಕ್ರಾಂತ್‌ ರೋಣ' ಎಂದು ಬದಲಾಗಿದೆ. ಈ ಎರಡು ವಿಶೇಷ ಕಾರಣಗಳಿಗಾಗಿ ದುಬೈನ ಬುರ್ಜ್‌ ಖಲೀಫಾ ಕಟ್ಟಡದ ಮೇಲೆ ಜ.31ರಂದು ಸುದೀಪ್‌ ಅವರ ಕಟೌಟ್‌ ರಾರಾಜಿಸಲಿದೆ. 'ವಿಕ್ರಾಂತ್‌ ರೋಣ' ಟೈಟಲ್‌ ಲೋಗೋ ಲಾಂಜ್‌ ಆಗಲಿದೆ. ಈ ವೈಭೋಗವನ್ನು ಕಣ್ತುಂಬಿಕೊಳ್ಳಲು ಕಿಚ್ಚನ ಅಭಿಮಾನಿಗಳು ಕಾಯುತ್ತಿದ್ದಾರೆ.

ಟೈಟಲ್‌ ಲೋಗೋ ಜೊತೆಯಲ್ಲಿ 'ವಿಕ್ರಾಂತ್‌ ರೋಣ' ಸಿನಿಮಾದ ಸ್ನೀಕ್‌ ಪೀಕ್‌ ದೃಶ್ಯ ತುಣುಕು ಕೂಡ ಬುರ್ಜ್‌ ಖಲೀಫಾ ಕಟ್ಟಡದ ಮೇಲೆ ಬಿತ್ತರ ಆಗಲಿದೆ. ಟೀಸರ್‌ ಮಾದರಿಯಲ್ಲಿ ಇರುವ ಈ ವಿಡಿಯೋದ ಅವಧಿ ಮೂರು ನಿಮಿಷ ಆಗಿರಲಿದೆ. ಈಗಾಗಲೇ ಕೆಲವು ಪೋಸ್ಟರ್‌ ಮತ್ತು ಟೀಸರ್‌ಗಳ ಮೂಲಕ ನಿರ್ದೇಶಕ ಅನೂಪ್‌ ಭಂಡಾರಿ ಕೌತುಕ ಮೂಡಿಸಿದ್ದಾರೆ. ಜಾಕ್‌ ಮಂಜು ಮತ್ತು ಅಲಂಕಾರ್‌ ಪಾಂಡಿಯನ್‌ ಈ ಚಿತ್ರಕ್ಕೆ ಹಣ ಹೂಡುತ್ತಿದ್ದು, ನಿರೂಪ್‌ ಭಂಡಾರಿ ಮತ್ತು ನೀತಾ ಅಶೋಕ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp