ಡ್ರಗ್ಸ್ ಪ್ರಕರಣದಲ್ಲಿ ತಿಮಿಂಗಿಲಗಳಿಗೆ ಬಲೆ ಬೀಸಬೇಕಿದೆ: ಇಂದ್ರಜಿತ್ ಲಂಕೇಶ್

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಮೂಲ ಶೋಧಿಸಬೇಕಿದೆ. ಬಲೆಗೆ ಬಿದ್ದಿರುವುದು ಚಿಕ್ಕ ಮೀನುಗಳಷ್ಟೆ, ತಿಮಿಂಗಿಲಗಳನ್ನು ಹಿಡಿಯಬೇಕಿದೆ ಎಂದು ನಟ, ನಿರ್ದೇಶಕ,ಪತ್ರಕರ್ತ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

Published: 28th January 2021 01:34 PM  |   Last Updated: 28th January 2021 01:35 PM   |  A+A-


Film director Indrajit Lankesh

ಇಂದ್ರಜಿತ್ ಲಂಕೇಶ್

Posted By : Srinivas Rao BV
Source : UNI

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಮೂಲ ಶೋಧಿಸಬೇಕಿದೆ. ಬಲೆಗೆ ಬಿದ್ದಿರುವುದು ಚಿಕ್ಕ ಮೀನುಗಳಷ್ಟೆ, ತಿಮಿಂಗಿಲಗಳನ್ನು ಹಿಡಿಯಬೇಕಿದೆ ಎಂದು ನಟ, ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ನಗರದ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿ ಬಳಿ ಈ ಕುರಿತು ಮಾತನಾಡಿದ ಅವರು, ರಾಜಕಾರಣಿಗಳು, ನಿರ್ಮಾನಪಕ, ನಿರ್ದೇಶಕರು ಸೇರಿದಂತೆ ದೊಡ್ಡವರು ಎಂದು ಗುರುತಿಸಿಕೊಂಡಿರುವ ಮಕ್ಕಳ ಲಿಂಕ್ ಇದೆ. ವೈಯಕ್ತಿಕವಾಗಿ ಯಾರ ವಿರುದ್ಧವೂ ಆರೋಪಿಸುತ್ತಿಲ್ಲ. ಈ ಸಂಬಂಧ ವಿಪಕ್ಷ ನಾಯಕರು ಮೌನವಾಗಿರದೆ, ಚರ್ಚೆಗೆ ಬರಬೇಕಿದೆ ಎಂದರು.

ಸ್ಯಾಂಡಲ್‌ವುಡ್‌ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೆ ಸಮನ್ಸ್ ನೀಡಿದ್ದ ಹಿನ್ನೆಲೆಯಲ್ಲಿ ಮಾಹಿತಿದಾರರಾಗಿ ಗುರುವಾರ ವಿಚಾರಣೆಗೆ ಆಗಮಿಸಿದ್ದ ಇಂದ್ರಜಿತ್, ಪ್ರಕರಣದಲ್ಲಿ ಸಾಕಷ್ಟು ಜನರು ಭಾಗಿಯಾಗಿದ್ದು, ಆರಾಮವಾಗಿ ಓಡಾಡಿಕೊಂಡಿದ್ದಾರೆ. ಈ ಬಗ್ಗೆ ನಾವು ಮಾಹಿತಿ ನೀಡಬಹುದಷ್ಟೆ. ಮುಂದಿನ ಕೆಲಸ ಸಿಸಿಬಿ ಮೊದಲಾದ ಕಾನೂನು ಸಂಸ್ಥೆಗಳಿಗೆ ಸಂಬಂಧಿಸಿದೆ. ಕೇವಲ ಇಬ್ಬರು ನಟಿಯರು ಹಾಗೂ ಕೆಲ ಡ್ರಗ್ಸ್ ಪೆಡ್ಲರ್ ಗಳಷ್ಟೇ ಆರೋಪಿಗಳಲ್ಲ ಎಂದು ತಿಳಿಸಿದರು.

ಇಂದ್ರಜಿತ್ ಲಂಕೇಶ್ ಅವರು ಈ ಹಿಂದೆಯೂ ಸಹ ಸಿಸಿಬಿ ಪೊಲೀಸರ ವಿಚಾರಣೆ ಎದುರಿಸಿದ್ದರು. ಡ್ರಗ್ಸ್ ಪ್ರಕರಣದ ಆರಂಭದಲ್ಲಿ ತಮಗೆ ಸ್ಯಾಂಡಲ್‌ವುಡ್‌ನಲ್ಲಿ ಯಾರಿಗೆ ಮಾದಕ ದ್ರವ್ಯ ವ್ಯಸನವಿದೆ ಎಂಬುದು ಗೊತ್ತಿದೆ. ಅವರ ಪಟ್ಟಿ ನೀಡುತ್ತೇನೆ ಎಂದಿದ್ದರು. ಡ್ರಗ್ಸ್ ಪ್ರಕರಣದ ಮುಖ್ಯ ಆರೋಪಿಗಳಲ್ಲಿ ಇಬ್ಬರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಗೆ ಜಾಮೀನು ದೊರೆತ ನಂತರ ಈಗ ಮತ್ತೆ ಇಂದ್ರಜಿತ್ ಲಂಕೇಶ್‌ಗೆ ಸಮನ್ಸ್ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕೆಲವು ದಿನಗಳ ಹಿಂದೆ ತಮ್ಮ ಸಿನಿಮಾ 'ಶಕೀಲಾ'ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಇಂದ್ರಜಿತ್ ಲಂಕೇಶ್, ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ತನಿಖೆ ತಮಗೆ ತೃಪ್ತಿ ತಂದಿಲ್ಲ ಎಂದಿದ್ದರು. ಕೇವಲ ನಟಿಯರನ್ನಷ್ಟೆ ಟಾರ್ಗೆಟ್ ಮಾಡಲಾಗಿದೆ. ಡ್ರಗ್ಸ್ ಚಟವುಳ್ಳ ನಟರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದರು ಇಂದ್ರಜಿತ್ ಲಂಕೇಶ್. ಇದೀಗ ಇದೇ ವಿಷಯಕ್ಕೆ ಕುರಿತಂತೆ ಪ್ರಶ್ನೆ ಮಾಡಲು ಇಂದ್ರಜಿತ್ ಲಂಕೇಶ್ ಅವರನ್ನು ಸಿಸಿಬಿ ವಿಚಾರಣೆಗೆ ಕರೆದಿದೆ ಎನ್ನಲಾಗುತ್ತಿದೆ. 

ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ರಾಗಿಣಿ ದ್ವಿವೇದಿ ಹಾಗೂ ನಟಿ ಸಂಜನಾ ಗಲ್ರಾನಿ ಅವರಿಗೆ ಈಗಾಗಲೇ ಜಾಮೀನು ದೊರೆತಿದೆ.

Stay up to date on all the latest ಸಿನಿಮಾ ಸುದ್ದಿ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp