ಹಿಂದಿ ಸಿನಿರಂಗದ ಹಿರಿಯ ನಟ ದಿಲೀಪ್ ಕುಮಾರ್ ಇಂದು ತಮ್ಮ 98ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಬಾಲಿವುಡ್, ದಕ್ಷಿಣ ಚಿತ್ರೋದ್ಯಮ ಅವರ ನಿಧನಕ್ಕೆ ಅಪಾರ ಶೋಕ ವ್ಯಕ್ತಪಡಿಸಿದೆ. ಇದರ ನಡುವೆ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ವರನಟ ಡಾ. ರಾಜ್ಕುಮಾರ್ ಹಾಗೂ ದಿಲೀಪ್ ಕುಮಾರ್ ಅವರು ಜತೆಯಾಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
"ದಿಲೀಪ್ ಕುಮಾರ್ . ಅವರನ್ನು ಎರಡು ಸಂದರ್ಭಗಳಲ್ಲಿ ಭೇಟಿಯಾಗಿದ್ದೆ, . ಅಪ್ಪಾಜಿ ಮತ್ತು ದಿಲೀಪ್ ಸರ್ ಇಬ್ಬರೂ ಪರಸ್ಪರ ಗೌರವವನ್ನು ಹೊಂದಿದ್ದರು. . ಅಪ್ಪಾಜಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸುವಾಗ ಅವರನ್ನು ಭೇಟಿಯಾದದ್ದು ನನಗೆ ನೆನಪಿದೆ, ಇಂದು ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಅದ್ಭುತ ಕೊಡುಗೆಯನ್ನು ನೆನಪಿಸಿಕೊಳ್ಳಲಾಗುತ್ತಿದೆ RIP @TheDilipKumar" ಎಂದು ನಟ ಪುನೀತ್ ಟ್ವೀಟ್ ಮಾಡಿದ್ದಾರೆ.
ಇನ್ನು ಕಿಚ್ಚ ಸುದೀಪ್ ಸಹ ಹಿರಿಯ ನಟನಿಗೆ ಗೌರವ ಸಲ್ಲಿಸಿದ್ದು "ಜಗತ್ತು ಅವರನ್ನು ಸಾರ್ವಕಾಲಿಕ ಶ್ರೇಷ್ಠ ನಟ, ಅದ್ಭುತ ವಾಗ್ಮಿ ಮತ್ತು ಸರಳತೆಯ ಸಾಕಾರ ಎಂದು ಶ್ಲಾಘಿಸಿದೆ.ಅವರು ಅನೇಕ ತಲೆಮಾರಿನ ನಟರಿಗೆ ಸ್ಫೂರ್ತಿಯಾಗಿ ಮತ್ತು ನನಗೆ ಒಂದು ಎನಿಗ್ಮಾ ಆಗಿ ಉಳಿಯುತ್ತಾರೆ. ದಂತಕಥೆ ಸದಾ ಜೀವಂತವಿರುತ್ತದೆ!! RIP DilipKumarJi" ಎಂದು ಟ್ವೀಟ್ ಮಾಡಿದ್ದಾರೆ.
Advertisement