ಥಿಯೇಟರ್ ಮಾಲೀಕರಿಗೆ ಗುಡ್ ನ್ಯೂಸ್! ರಾಜ್ಯಾದ್ಯಂತ ಚಿತ್ರಮಂದಿರಗಳ ಆಸ್ತಿ ತೆರಿಗೆ ಮನ್ನಾ ಮಾಡಿದ ರಾಜ್ಯ ಸರ್ಕಾರ

ಸಾಂಕ್ರಾಮಿಕ ರೋಗಗಳಿಂದಾಗಿ ನಿರಂತರವಾಗಿ ಲಾಕ್ ಆಗಿರುವ ಹಿನ್ನೆಲೆ ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಆಸ್ತಿ ತೆರಿಗೆಯನ್ನು ಮನ್ನಾ ಮಾಡಿದೆ. ಈ ನಿಟ್ಟಿನಲ್ಲಿ ಸರ್ಕಾರದ ಆದೇಶದ ಪ್ರಕಾರ, ಆಸ್ತಿ ತೆರಿಗೆ ಮನ್ನಾಕ್ಕೆ ರಾಜ್ಯ ಬೊಕ್ಕಸಕ್ಕೆ 9 ಕೋಟಿ ರೂ. ಹೊರೆ ಬೀಳಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾಂಕ್ರಾಮಿಕ ರೋಗಗಳಿಂದಾಗಿ ನಿರಂತರವಾಗಿ ಲಾಕ್ ಆಗಿರುವ ಹಿನ್ನೆಲೆ ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಆಸ್ತಿ ತೆರಿಗೆಯನ್ನು ಮನ್ನಾ ಮಾಡಿದೆ. ಈ ನಿಟ್ಟಿನಲ್ಲಿ ಸರ್ಕಾರದ ಆದೇಶದ ಪ್ರಕಾರ, ಆಸ್ತಿ ತೆರಿಗೆ ಮನ್ನಾಕ್ಕೆ ರಾಜ್ಯ ಬೊಕ್ಕಸಕ್ಕೆ 9 ಕೋಟಿ ರೂ. ಹೊರೆ ಬೀಳಲಿದೆ.

ಕೋವಿಡ್-19 ಮೊದಲ ಮತ್ತು ಎರಡನೆಯ ಅಲೆ  ಬಿಕ್ಕಟ್ಟಿನ ಅವಧಿಯಿಂದ ಒಂದು ವರ್ಷಕ್ಕೂ ಹೆಚ್ಚು ಕಾಲ ಮುಚ್ಚಲ್ಪಟ್ಟ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ತಮ್ಮ ಇಂಧನ ಬಿಲ್ ಮತ್ತು ತೆರಿಗೆಯನ್ನು ಪಾವತಿಸಲು ಸಾಧ್ಯವಾಗದೆ ಭಾರಿ ನಷ್ಟವನ್ನು ಅನುಭವಿಸಿದ್ದು ಚಿತ್ರಮಂದಿರಗಳ ಮಾಲೀಕರು ಸರ್ಕಾರ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪರಿಹಾರಕ್ಕಾಗಿ ಮೊರೆ ಇಟ್ಟಿದ್ದಾರೆ. ರಾಜ್ಯಾದ್ಯಂತ ಸುಮಾರು 630 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಈ ಕ್ರಮದಿಂದ ಪ್ರಯೋಜನ ಹೊಂದಲಿದೆ

ಕರ್ನಾಟಕ ಪ್ರದರ್ಶನಕಾರರ ಸಂಘದ ಮನವಿಯನ್ನು ಆಧರಿಸಿ ಬುಧವಾರ ರಾತ್ರಿ ಈ ಆದೇಶ ಹೊರಡಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಚಾರ ಇಲಾಖೆಯ ಮೂಲಗಳು ತಿಳಿಸಿದೆ. ವಿನಾಯಿತಿಯನ್ನು 2021-22ರ ಆರ್ಥಿಕ ವರ್ಷಕ್ಕೆ ವಿಸ್ತರಿಸಲಾಗಿದೆ. ಕೋವಿಡ್‌ನ ಮೊದಲ ಅಲೆಯ ಅನ್ ಲಾಕ್  ಮಾಡಿದ ನಂತರ ಚಿತ್ರಮಂದಿರಗಳು ಒಂದು ಅಥವಾ ಎರಡು ತಿಂಗಳು ತೆರೆಯಲಿಲ್ಲ. ಅವು ತೆರೆದಿದ್ದರೂ ಸಹ, ಅವು ಕೇವಲ 50 ಶೇಕಡಾ ಆಸನ ವ್ಯವಸ್ಥೆಯಡಿ ಕಾರ್ಯನಿರ್ವಹಿಸಿದ್ದವು. ಆದ್ದರಿಂದ, ಚಿತ್ರಮಂದಿರಗಳು ತಾವು ಅನುಭವಿಸಿದ ನಷ್ಟವನ್ನು ಭರಿಸಲಾರವು ಎಂದು ಸಂಘ ಹೇಳುತ್ತದೆ.

ಚಿತ್ರೋದ್ಯಮದ 22,000 ಉದ್ಯೋಗಿಗಳಿಗೆ ಕರ್ನಾಟಕ ಸರ್ಕಾರ ತಲಾ 3,000 ರೂ.ಗಳ ಪರಿಹಾರವನ್ನು ನೀಡಿದ್ದರೂ ಕೋವಿಡ್ ೧೯ ನಿರೀಕ್ಷಿತ ಮೂರನೇ ಅಲೆಯ ಕಾರಣ ವ್ಯವಹಾರದ ನಷ್ಟವನ್ನು  ಪರಿಗಣಿಸಿ ಆಸ್ತಿ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com