ರವಿಚಂದ್ರನ್ ನಟನೆಯ 'ದೃಶ್ಯ-2' ಸಿನಿಮಾ ಶೂಟಿಂಗ್ ಆರಂಭ: ಹಿರಿಯ ನಟ ಅನಂತ್ ನಾಗ್ ಭಾಗಿ
2014 ರಲ್ಲಿ ತೆರೆಕಂಡು ಅಪಾರ ಮೆಚ್ಚುಗೆ ಪಡೆದುಕೊಂಡಿದ್ದ ಚಿತ್ರ “ದೃಶ್ಯ”. ಈಗ ಇದೇ ಚಿತ್ರದ ಮುಂದುವರೆದ ಭಾಗ ” ದೃಶ್ಯ ೨” ಎಂಬ ಹೆಸರಿನಿಂದ ನಿರ್ಮಾಣ ವಾಗುತ್ತಿದೆ.
Published: 13th July 2021 12:09 PM | Last Updated: 13th July 2021 12:27 PM | A+A A-

ದೃಶ್ಯ-2 ಸಿನಿಮಾ ದಲ್ಲಿ ರವಿಚಂದ್ರನ್-ಅನಂತ್ ನಾಗ್
2014 ರಲ್ಲಿ ತೆರೆಕಂಡು ಅಪಾರ ಮೆಚ್ಚುಗೆ ಪಡೆದುಕೊಂಡಿದ್ದ ಚಿತ್ರ “ದೃಶ್ಯ”. ಈಗ ಇದೇ ಚಿತ್ರದ ಮುಂದುವರೆದ ಭಾಗ 'ದೃಶ್ಯ-೨' ಎಂಬ ಹೆಸರಿನಿಂದ ನಿರ್ಮಾಣ ವಾಗುತ್ತಿದೆ. ನಿರ್ದೇಶಕ ಪಿ.ವಾಸು ಅವರ ಸಾರಥ್ಯದಲ್ಲಿ ಕನ್ನಡದಲ್ಲೂ ಚಿತ್ರೀಕರಣ ಆರಂಭವಾಗಿದೆ.
ಕ್ರೇಜಿಸ್ಟಾರ್ ರವಿಚಂದ್ರನ್. ವಿ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ವಿಶೇಷವೆಂದರೆ ಹಿರಿಯನಟ ಅನಂತನಾಗ್ ಚಿತ್ರತಂಡ ಸೇರಿಕೊಂಡಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭ ಸರಳವಾಗಿ ನೆರವೇರಿತು. ರವಿಚಂದ್ರನ್.ವಿ, ಅನಂತನಾಗ್, ಪಿ.ವಾಸು ಅವರು ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಪೂಜಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ದೃಶ್ಯ” ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ, ನವ್ಯ ನಾಯರ್ ಈ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ರವಿಚಂದ್ರನ್ ಅವರ ಪುತ್ರಿ ಪಾತ್ರದಲ್ಲಿ ಆರೋಹಿ ನಾರಾಯಣ್ ಕಾಣಿಸಿಕೊಳ್ಳುತ್ತಿದ್ದಾರೆ.ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ, ಕೃಷ್ಣ ಯಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಕೊರೋನಾ ಕಾರಣದಿಂದ ಹಿರಿಯ ನಟ ಅನಂತ್ ನಾಗ್ ಕಳೆದ 15 ತಿಂಗಳಿಂದ ಶೂಟಿಂಗ್ ನಲ್ಲಿ ಭಾಗವಹಿಸಿರಲಿಲ್ಲ, 15 ತಿಂಗಳ ನಂತರ ಮೊಟ್ಟ ಮೊದಲ ಬಾರಿಗೆ ಪಿ ವಾಸು ನಿರ್ದೇಶನದ ದೃಶ್ಯ ಸಿನಿಮಾದಲ್ಲಿ ಅನಂತ್ ನಾಗ್ ಕಾಣಸಿಕೊಳ್ಳುತ್ತಿದ್ದಾರೆ.
ಇ4 ಎಂಟರೈಟನ್ ಮೆಂಟ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸಿ.ವಿ.ಸಾರಥಿ. ಜೀತು ಜೋಸೆಫ್ ಕಥೆ ಬರೆದಿದ್ದು, ಪಿ.ವಾಸು ನಿರ್ದೇಶನ ಮಾಡುತ್ತಿದ್ದಾರೆ. ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನವಿದೆ. ದೃಶ್ಯಂ-2 ಮಲಯಾಳಂ ಸಿನಿಮಾ ಒಟಿಟಿ ಪ್ಲಾಟ್ ಫಾರಂ ನಲ್ಲಿ ರಿಲೀಸ್ ಆಗಿತ್ತು.