ಅಂದು ಸಣ್ಣ ಗಲಾಟೆ ಆಗಿದ್ದು ನಿಜ, ದರ್ಶನ್ ಹಲ್ಲೆ ಮಾಡಿಲ್ಲ, ದಯವಿಟ್ಟು ಇದನ್ನು ಇಲ್ಲಿಗೇ ಬಿಟ್ಟುಬಿಡಿ: ಸಂದೇಶ್ ನಾಗರಾಜ್ ಪುತ್ರ

ಕೋವಿಡ್ ಎರಡನೇ ಅಲೆಯ ಲಾಕ್ ಡೌನ್ ಗಿಂತ ಮುನ್ನ ನಟ ದರ್ಶನ್ ಮತ್ತು ಅವರ ಸುಮಾರು 20 ಮಂದಿ ಸ್ನೇಹಿತರು ನಮ್ಮ ಹೊಟೇಲ್ ಗೆ ರಾತ್ರಿ ಬಂದಿದ್ದರು, ಆ ವೇಳೆ ಸಪ್ಲೈಯಲ್ಲಿ ಏನೋ ಸಮಸ್ಯೆಯಾಗಿ ಸಣ್ಣ ಗಲಾಟೆಯಾಗಿದ್ದು ನಿಜ. ಆಗ ನಾನೇ ಹೋಗಿ ಇದನ್ನು ದೊಡ್ಡದು ಮಾಡುವುದು ಬೇಡ, ಏನೋ ನಮ್ಮ ಕಾರ್ಮಿಕರಿಂದ ತೊಂದರೆಯಾಗಿದೆ ಎಂದರು, ಆಗ ಅವರೂ ಸುಮ್ಮನಾದರು, ನಟ ದರ್ಶನ್ ಅವರು ನಮ್ಮ ಸಿಬ
ನಿರ್ಮಾಪಕ ಹಾಗೂ ಉದ್ಯಮಿ ಸಂದೇಶ್ ಮತ್ತು ನಟ ದರ್ಶನ್(ಸಂಗ್ರಹ ಚಿತ್ರ)
ನಿರ್ಮಾಪಕ ಹಾಗೂ ಉದ್ಯಮಿ ಸಂದೇಶ್ ಮತ್ತು ನಟ ದರ್ಶನ್(ಸಂಗ್ರಹ ಚಿತ್ರ)

ಬೆಂಗಳೂರು: ಕೋವಿಡ್ ಎರಡನೇ ಅಲೆಯ ಲಾಕ್ ಡೌನ್ ಗಿಂತ ಮುನ್ನ ನಟ ದರ್ಶನ್ ಮತ್ತು ಅವರ ಸುಮಾರು 20 ಮಂದಿ ಸ್ನೇಹಿತರು ನಮ್ಮ ಹೊಟೇಲ್ ಗೆ ರಾತ್ರಿ ಬಂದಿದ್ದರು, ಆ ವೇಳೆ ಸಪ್ಲೈಯಲ್ಲಿ ಏನೋ ಸಮಸ್ಯೆಯಾಗಿ ಸಣ್ಣ ಗಲಾಟೆಯಾಗಿದ್ದು ನಿಜ. ಆಗ ನಾನೇ ಹೋಗಿ ಇದನ್ನು ದೊಡ್ಡದು ಮಾಡುವುದು ಬೇಡ, ಏನೋ ನಮ್ಮ ಕಾರ್ಮಿಕರಿಂದ ತೊಂದರೆಯಾಗಿದೆ ಎಂದರು, ಆಗ ಅವರೂ ಸುಮ್ಮನಾದರು, ನಟ ದರ್ಶನ್ ಅವರು ನಮ್ಮ ಸಿಬ್ಬಂದಿಗೆ ಬೈದರಷ್ಟೆ, ಹಲ್ಲೆ ಮಾಡಿಲ್ಲ ಎಂದು ಸಂದೇಶ್ ನಾಗರಾಜ್ ಅವರ ಪುತ್ರ ಸಂದೇಶ್ ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಸಣ್ಣ ಜಗಳ ಆಗಿದ್ದು ನಿಜ, ಆದರೆ ಹೊಡೆದಿಲ್ಲ ಬೈದಿದ್ದಾರೆ ಅಷ್ಟೆ. ಅಂದು ನಾನು ಕೂಡ ಇದ್ದೆ. ಬೈಬೇಡಪ್ಪ ನಮ್ಮ ಕಾರ್ಮಿಕರಿಗೆ. ನಮಗೆ ಕೆಲಸಗಾರರು ಸಿಗುವುದಿಲ್ಲ. ನೀನು ಯಾವುದೋ ಟೆನ್ಶನ್ ನಲ್ಲಿ ನಮ್ಮವರಿಗೆ ಯಾಕೆ ಬೈತೀಯಾ ಎಂದಿದ್ದೆ. ಅದಕ್ಕೆ ಅವನು ಕೋಪ ಕೂಡ ಮಾಡಿಕೊಂಡಿದ್ದ ಎಂದರು.

ನಾವು ಹೊಟೇಲ್ ನಡೆಸುತ್ತಿರುವವರು, ಸರ್ವಿಸ್ ಇಂಡಸ್ಟ್ರಿ ಇದು, ಗ್ರಾಹಕರೇ ನಮಗೆ ಅನ್ನದಾತರು, ಅವರ ಹಿತ ಕಾಯುವುದೇ ನಮಗೆ ಮುಖ್ಯ, ಕೋವಿಡ್ ಬಂದ ಮೇಲೆ ಹೊಟೇಲ್ ಇಂಡಸ್ಟ್ರಿಗೆ ಮತ್ತು ಚಿತ್ರೋದ್ಯಮಕ್ಕೆ ಎಷ್ಟು ಕಷ್ಟವಾಗಿದೆ ಎಂದು ಜನರಿಗೆಲ್ಲಾ ಗೊತ್ತಿದೆ, ಅಂದು ಸರ್ವಿಸ್ ಕೊಡುವ ವಿಚಾರದಲ್ಲಿ ನಟ ದರ್ಶನ್ ಮತ್ತು ಮಹಾರಾಷ್ಟ್ರ ಮೂಲದ ಸಪ್ಲೈಯರ್ ಮಧ್ಯೆ ಏನೋ ಸಣ್ಣ ಗಲಾಟೆಯಾಯಿತು, ದರ್ಶನ್ ಅವರು ಬೈದಿದ್ದು ಹೌದು, ಆದರೆ ಕಾರ್ಮಿಕನ ಮೇಲೆ ಹಲ್ಲೆ ಮಾಡಿಲ್ಲ, ಅದನ್ನು ಹೊರಗೆ ಹೇಳಿಕೊಂಡು ಬರುವಷ್ಟು ದೊಡ್ಡ ಗಲಾಟೆಯಾಗಿಲ್ಲ ಎಂದರು.

ಒಂದೂವರೆ ತಿಂಗಳ ಹಿಂದೆ ನಡೆದ ಪ್ರಕರಣವಿದು, ಆ ಸಮಯದಲ್ಲಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ದರ್ಶನ್ ಅವರ ಜೊತೆ ಸುಮಾರು 20 ಮಂದಿ ಹೊಟೇಲ್ ಗೆ ಬಂದಿದ್ದರು, ಊಟದ ವೇಳೆ ಏನೋ ವ್ಯತ್ಯಾಸವಾಗಿ ಸಣ್ಣ ಗಲಾಟೆ ನಡೆಯಿತು, ಆಗ ನಾನೇ ಹೋಗಿ ದರ್ಶನ್ ಅವರಲ್ಲಿ ಮಾತನಾಡಿ ಇತ್ಯರ್ಥಪಡಿಸಿದೆ, ನಂತರ ಮರುದಿನ ಎಂದಿನಂತೆ ನಾವಿದ್ದೆವು,  ಹೊಟೇಲ್ ನಲ್ಲಿ ರಾತ್ರಿ ವೇಳೆ ಗ್ರಾಹಕರು ಈ ರೀತಿ ಸ್ವಲ್ಪ ಜಾಸ್ತಿ ಕುಡಿದುಬಿಟ್ಟು ಗಲಾಟೆ ಮಾಡುವುದು ಸಾಮಾನ್ಯ, ದರ್ಶನ್ ಕುಡಿದಾಗ ಈ ರೀತಿ ಕೆಲವೊಂದು ಸಲ ಆಡುತ್ತಾರೆ, ಹಾಗೆಯೇ ಇದು ಆಗಿತ್ತು ಎಂದರು.

ನಮ್ಮ ಸಿಬ್ಬಂದಿಗೆ ಏನೂ ಆಗಿಲ್ಲ, ಆಗಿದ್ದರೆ ನಾನು ನನ್ನ ಕಾರ್ಮಿಕನನ್ನು ಬಿಟ್ಟುಬಿಡುತ್ತಿರಲಿಲ್ಲ, ದರ್ಶನ್ ಮತ್ತು ನಮ್ಮ ಮಧ್ಯೆ ಪಾರ್ಟಿ ವಿಚಾರದಲ್ಲಿ, ಸಿನೆಮಾ ಕೆಲಸ ವೇಳೆ ಹೆಚ್ಚು ಕಡಿಮೆ ಆಗಿ ಗಲಾಟೆ ಆಗುತ್ತಿರುತ್ತದೆ, ಇನ್ನು ಈ ಗಲಾಟೆ ಬಗ್ಗೆ ನನ್ನ ತಂದೆ ಚಿತ್ರ ನಿರ್ಮಾಪಕ, ರಾಜಕೀಯ ವ್ಯಕ್ತಿ ಸಂದೇಶ್ ನಾಗರಾಜ್ ಅವರಿಗೆ ಏನೂ ಗೊತ್ತಿಲ್ಲ, ಈ ಹೊಟೇಲ್ ನ ವ್ಯವಹಾರಗಳನ್ನೆಲ್ಲಾ ನಾನೇ ನೋಡಿಕೊಳ್ಳುವುದು ಎಂದು ಸ್ಪಷ್ಟಪಡಿಸಿದರು.

ನಾವು ಶೂಟಿಂಗ್ ನಲ್ಲೂ ಜಗಳ ಆಡುತ್ತೇವೆ. ನಾನು ತಪ್ಪು ಮಾಡಿದಾಗ ಅವನು ಹೇಳುತ್ತಾನೆ, ಅವನು ತಪ್ಪು ಮಾಡಿದಾಗ ನಾನು ಹೇಳ್ತೇನೆ. ಫ್ರೆಂಡ್ ಶಿಪ್ ನಲ್ಲಿ ಇದೆಲ್ಲ ಮಾಮೂಲಿ. ಆದರೆ ಗಲಾಟೆ ಸಂಬಂಧ ತೋಟದಲ್ಲಿ ಏನೇನು ಆಗಿದೆ ಎಂದು ಗೊತ್ತಿಲ್ಲ. ನನ್ನ ಕಾರ್ಮಿಕರಿಗೆ ಏನಾದರೂ ಆದರೆ ನಾನು ಬಿಡ್ತೀನಾ ಎಂದು ಸಂದೇಶ್ ಪ್ರಶ್ನಿಸಿದರು.

ಹೊಟ್ಟೆಪಾಡಿಗಾಗಿ ಹೋಟೆಲ್ ಮಾಡಿದ್ದೇವೆ. ಹೀಗಾಗಿ ಯಾರೇ ಅತಿಥಿಗಳು ಬಂದು ಏನೇ ಮಾತಾಡಿದ್ರೂ ನಾವು ಸಹಿಸಿಕೊಳ್ಳಬೇಕು. ಅಲ್ಲದೆ ಅವರು ಏನೇ ಬೈದ್ರೂ ಸಹಿಸಿಕೊಳ್ಳಬೇಕಾಗುತ್ತದೆ. ಹೋಟೆಲ್ ಅಂದ್ರೆ ಸರ್ವಿಸ್ ಇಂಡಸ್ಟ್ರಿ. ಒಟ್ಟಿನಲ್ಲಿ ಇಲ್ಲಿ ನಮಗೆ ಗ್ರಾಹಕರೇ ದೇವರಾಗಿರುತ್ತಾರೆ. ನಿಯಮಗಳ ಪ್ರಕಾರ ಅವರು ಏನು ಹೇಳ್ತಾರೆ ಅದನ್ನು ನಾವು ಕೊಡಬೇಕಾಗುತ್ತದೆ ಎಂದು ಸಂದೇಶ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com