ಯೋಗಿ ಅಭಿನಯದ 'ಲಂಕೆ' ಬಿಡುಗಡೆ ದಿನಾಂಕ ಫಿಕ್ಸ್

ಜುಲೈ 19 ರಿಂದ ಕರ್ನಾಟಕ ಸರ್ಕಾರವು ಸಿನೆಮಾ ಥಿಯೇಟರ್ ಗಳನ್ನು ಶೇಕಡಾ 50 ರಷ್ಟು ಸಾಮರ್ಥ್ಯದೊಡನೆ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ, ಇದು ಅಂತಿಮವಾಗಿ ಸಿನಿ ನಿರ್ಮಾಪಕರಿಗೆ ಅಲ್ಪ ಪ್ರಮಾಣದ ರಿಲೀಫ್ ನೀಡಿದೆ.

Published: 20th July 2021 11:21 AM  |   Last Updated: 20th July 2021 01:04 PM   |  A+A-


ಲಂಕೆ ಚಿತ್ರದ ದೃಶ್ಯ

Posted By : Raghavendra Adiga
Source : The New Indian Express

ಜುಲೈ 19 ರಿಂದ ಕರ್ನಾಟಕ ಸರ್ಕಾರವು ಸಿನೆಮಾ ಥಿಯೇಟರ್ ಗಳನ್ನು ಶೇಕಡಾ 50 ರಷ್ಟು ಸಾಮರ್ಥ್ಯದೊಡನೆ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ, ಇದು ಅಂತಿಮವಾಗಿ ಸಿನಿ ನಿರ್ಮಾಪಕರಿಗೆ ಅಲ್ಪ ಪ್ರಮಾಣದ ರಿಲೀಫ್ ನೀಡಿದೆ.

ರಾಮ್ ಪ್ರಸಾದ್ ನಿರ್ದೇಶನದ ಯೋಗಿ ಅಭಿನಯದ "ಲಂಕೆ" ಚಿತ್ರವು ಆಗಸ್ಟ್ 20 ರಂದು ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಥಿಯೇಟರ್ ಗಳಿಗೆ ಬರಲಿದೆ.

ಸಿನಿ ಎಕ್ಸ್ ಪ್ರೆಸ್ ಜತೆಗೆ ಬಿಡುಗಡೆಯ ದಿನಾಂಕವನ್ನು ದೃಢಪಡಿಸಿದ ನಿರ್ದೇಶಕರು, “ನಾವು ಚಿತ್ರದೊಡನೆ ಸಿದ್ದವಾಗಿದ್ದೇವೆ. ಸಿನೆಮಾ ಥಿಯೇಟರ್ ಗಳು ಮತ್ತೆ ತೆರೆಯಲು ಕಾಯುತ್ತಿದ್ದೇವೆ. ಈ ಚಿತ್ರವು ವರಮಹಾಲಕ್ಷ್ಮಿ ಹಬ್ಬದ ವೇಳೆ  ಬಿಡುಗಡೆಯಾಗುತ್ತಿರುವುದರಿಂದ ಇದು ವಿಶೇಷವಾಗಿದೆ” ಎಂದರು. ಪಟೇಲ್ ಶ್ರೀನಿವಾಸ್ ಮತ್ತು ಸುರೇಖಾ ರಾಮ್ ಪ್ರಸಾದ್ ನಿರ್ಮಿಸಿದ ಈ ಚಿತ್ರ ಹಿಂದೂ ಮಹಾಕಾವ್ಯ ರಾಮಾಯಣಕ್ಕೆ ಆಧುನಿಕ ತಿರುವು ನೀಡುವ ಕಥೆ ಒಳಗೊಂಡಿದೆ.

ಯೋಗಿ ರಾಮನ ಪಾತ್ರದಲ್ಲಿ ನಟಿಸುತ್ತಿದ್ದರೆ, ಕಾವ್ಯಾ ಶೆಟ್ಟಿ ಪ್ರಮುಖ ನಾಯಕಿಯಾಗಿದ್ದಾರೆ."ನಾನು ಮತ್ತು ಗುಂಡ" ನಿರ್ದೇಶಕ ಕಾರ್ತಿಕ್ ಶರ್ಮಾ ಅವರು ಚಿತ್ರಕ್ಕೆ ಸಂಗೀತ  ಸಂಯೋಜಿಸಿದ್ದಾರೆ, ಮತ್ತು ಇದರಲ್ಲಿ ರಮೇಶ್ ಬಾಬು ಚಾಯಾಗ್ರಹಣ ನಿರ್ವಹಿಸಿದ್ದಾರೆ.

"ಲಂಕೆ" ಕೃಷಿ ತಾಪಂಡ ಮತ್ತು ಸ್ಟರ್ ನೊರೊನ್ಹಾ ಅವರನ್ನೂ ತೆರೆ ಮೇಲೆ ತರುತ್ತಿದೆ. ಅಲ್ಲದೆ ದಿವಂಗತ ನಟ ಸಂಚಾರಿ ವಿಜಯ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp