ಶೂಟಿಂಗ್ ಮುಗಿಸಿದ 'ಫ್ಯಾಮಿಲಿ ಫ್ಯಾಕ್': ಸಿನಿಮಾ ಸೆಟ್ ಗೆ ಪುನೀತ್ ದಂಪತಿ ಭೇಟಿ
ಪಿಆರ್ ಕೆ ಪ್ರೊಡಕ್ಷನ್ ಮುಂದಿನ ಸಿನಿಮಾ ಫ್ಯಾಮಿಲಿ ಪ್ಯಾಕ್ ಸೋಮವಾರ ಚಿತ್ರೀಕರಣ ಮುಗಿಸಿದೆ. ಸಿನಿಮಾ ಸೆಟ್ ಗೆ ನಟ ಪುನೀತ್ ದಂಪತಿ ಭೇಟಿ ನೀಡಿದ್ದರು. ಚಿತ್ರತಂಡದ ಜೊತೆ ಪುನೀತ್ ಪತ್ನಿ ಅಶ್ವಿನಿ ಸಮಯ ಕಳೆದರು.
Published: 21st July 2021 12:55 PM | Last Updated: 21st July 2021 12:55 PM | A+A A-

ಚಿತ್ರತಂಡದ ಜೊತೆ ಪುನೀತ್ ದಂಪತಿ
ಪಿಆರ್ ಕೆ ಪ್ರೊಡಕ್ಷನ್ ಮುಂದಿನ ಸಿನಿಮಾ ಫ್ಯಾಮಿಲಿ ಪ್ಯಾಕ್ ಸೋಮವಾರ ಚಿತ್ರೀಕರಣ ಮುಗಿಸಿದೆ. ಸಿನಿಮಾ ಸೆಟ್ ಗೆ ನಟ ಪುನೀತ್ ದಂಪತಿ ಭೇಟಿ ನೀಡಿದ್ದರು. ಚಿತ್ರತಂಡದ ಜೊತೆ ಪುನೀತ್ ಪತ್ನಿ ಅಶ್ವಿನಿ ಸಮಯ ಕಳೆದರು. ಫ್ಯಾಮಿಲಿ ಬ್ಯಾಕ್ ಸಿನಿಮಾದಲ್ಲಿ ಲಿಖಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ.
ಕಾಮಿಡಿ ಮನರಂಜನಾ ಸಿನಿಮಾವಾಗಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾವನ್ನು ಅರ್ಜುನ್ ಕುಮಾರ್ ನಿರ್ದಶಿಸಿದ್ದಾರೆ. ಅಮೃತಾ ಅಯ್ಯಂಗಾರ್ ನಾಯಕಿಯಾಗಿದ್ದಾರೆ. ರಂಗಾಯಣ ರಘು, ಅಚ್ಯುತ ಕುಮಾರ್, ದತ್ತಣ್ಣ, ಸಿಹಿಕಹಿ ಚಂದ್ರು, ಅಚ್ಯುತ ಕುಮಾರ್, ಪದ್ಮದಾ ರಾವ್ , ತಿಲಕ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಾಸ್ತಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಉದಯ್ ಲೀಲಾ ಸಿನಿಮಾಗೆ ಛಾಯಾಗ್ರಹಣ ನೀಡಿದ್ದಾರೆ.