ಆಧ್ಯಾತ್ಮದ ಹಾದಿ ಹಿಡಿದ ನಟಿ ಚೈತ್ರ ಕೊಟ್ಟೂರು; ಹೆಸರು ಬದಲಿಸಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ!

ಮದುವೆ ವಿಚಾರದಲ್ಲಿ ಕೋಲಾಹಲ, ಆರೋಪ ಪ್ರತ್ಯಾರೋಪಗಳಿಂದ ಬೇಸತ್ತಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರ ಕೊಟ್ಟೂರು ಅವರು ದಿಢೀರ್ ಅಂತಾ ಆಧ್ಯಾತ್ಮದ ಹಾದಿ ಹಿಡಿದಿದ್ದು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.

Published: 22nd July 2021 03:58 PM  |   Last Updated: 22nd July 2021 04:41 PM   |  A+A-


Chaitra Kotoor

ಚೈತ್ರಾ ಕೊಟ್ಟೂರು

Posted By : Vishwanath S
Source : Online Desk

ಬೆಂಗಳೂರು: ಮದುವೆ ವಿಚಾರದಲ್ಲಿ ಕೋಲಾಹಲ, ಆರೋಪ ಪ್ರತ್ಯಾರೋಪಗಳಿಂದ ಬೇಸತ್ತಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರ ಕೊಟ್ಟೂರು ಅವರು ದಿಢೀರ್ ಅಂತಾ ಆಧ್ಯಾತ್ಮದ ಹಾದಿ ಹಿಡಿದಿದ್ದು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.

ಹೌದು ಸಿನಿಮಾ, ಸಾಹಿತ್ಯ ಮತ್ತು ರಿಯಾಲಿಟಿ ಶೋ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಚೈತ್ರ ಕೊಟ್ಟೂರು ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದರು. ಆದರೆ ಇದೀಗ ತಾವು ಆಧ್ಯಾತ್ಮದ ಹಾದಿ ಹಿಡಿದಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬೆಳಗ್ಗೆ ಮದುವೆ, ಸಂಜೆ ದೂರ ದೂರ: ನನಗೆ ಚೈತ್ರ ಕೊಟ್ಟೂರು ಬೇಡ ಅನ್ನುತ್ತಿರುವುದೇಕೆ ವರ!

ಚೈತ್ರಾ ಕೊಟ್ಟೂರು ಸದ್ಯ ಓಶೋ ಧ್ಯಾನ ಶಿಬಿರ ಸೇರಿಕೊಂಡಿದ್ದಾರೆ. ಆಧ್ಯಾತ್ಮ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಚೈತ್ರಾ ಭಾಗವಹಿಸುತ್ತಿದ್ದಾರೆ. ಇನ್ನು ತಮ್ಮ ಹೆಸರನ್ನು ಬದಲಿಸಿಕೊಂಡಿರುವ ಅವರು ಮಾ ಪ್ರಗ್ಯಾ ಭಾರತಿ ಆಗಿದ್ದಾರೆ.

ಚೈತ್ರಾ ಅವರು ಸ್ವಾಮಿ ಗೋಪಾಲ ಭಾರತಿ ಅವರೊಂದಿಗಿನ ಫೋಟೋವನ್ನು ಶೇರ್ ಮಾಡಿದ್ದು ಅದಕ್ಕೆ ಪ್ರೀತಿಯ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಅವರೊಂದಿಗೆ ಮಾ ಪ್ರಗ್ಯಾ ಭಾರತಿ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಕಳೆದ ಮಾರ್ಚ್ ನಲ್ಲಿ ಚೈತ್ರಾ ಕೊಟ್ಟೂರು ಗೆಳೆಯ ನಾಗಾರ್ಜುನ್ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಕೆಲ ಗಂಟೆಗಳಲ್ಲಿ ಎರಡು ಕುಟುಂಬದವರ ನಡುವೆ ದೊಡ್ಡ ಜಟಾಪಟಿ ಶುರುವಾಗಿತ್ತು. ಅಲ್ಲದೆ ಪ್ರಕರಣ ಪೊಲೀಸ್ ಠಾಣಾ ಮೆಟ್ಟಿಲೇರಿತ್ತು.


Stay up to date on all the latest ಸಿನಿಮಾ ಸುದ್ದಿ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp