ಮುಸ್ತಫಾ ರಾಜ್ -ಪ್ರಿಯಾಮಣಿ ಮದುವೆ ಅಸಿಂಧು; ನನಗಿನ್ನೂ ವಿಚ್ಛೇದನ ನೀಡಿಲ್ಲ: ಮೊದಲ ಪತ್ನಿಯಿಂದ ಕೇಸ್ ದಾಖಲು

ಉದ್ಯಮಿ ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ವಿರುದ್ಧ ಮುಸ್ತಫಾ ರಾಜ್ ಅವರ ಮೊದಲ ಪತ್ನಿ ಆಯೆಷಾ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರೆ

Published: 22nd July 2021 01:19 PM  |   Last Updated: 22nd July 2021 02:04 PM   |  A+A-


Priyamani and mustafa raj

ಮುಸ್ತಫಾ ರಾಜ್ -ಪ್ರಿಯಾಮಣಿ

Posted By : Shilpa D
Source : Online Desk

ಉದ್ಯಮಿ ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ವಿರುದ್ಧ ಮುಸ್ತಫಾ ರಾಜ್ ಅವರ ಮೊದಲ ಪತ್ನಿ ಆಯೆಷಾ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರೆ. ''ಮುಸ್ತಫಾ ರಾಜ್ ನನಗೆ ಈವರೆಗೂ ಕಾನೂನಾತ್ಮಕವಾಗಿ ವಿಚ್ಛೇದನ ನೀಡಿಲ್ಲ. ಹೀಗಾಗಿ, ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ಮದುವೆ ಅಸಿಂಧು'' ಎಂಬುದು ಆಯೆಷಾ ಹೇಳಿದ್ದಾರೆ. 

'ಇ ಟೈಮ್ಸ್' ಮಾಡಿರುವ ವರದಿ ಪ್ರಕಾರತ ಕಾನೂನು ಪ್ರಕಾರ ಮುಸ್ತಫಾ ರಾಜ್ ಈಗಲೂ ನನ್ನ ಪತಿಯೇ. ನಾವಿನ್ನೂ ವಿಚ್ಛೇದನಕ್ಕೆ ಅರ್ಜಿಯೇ ಹಾಕಿಲ್ಲ. ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ಮದುವೆ ಅಮಾನ್ಯವಾಗಿದೆ. ಪ್ರಿಯಾಮಣಿ ಅವರನ್ನು ಮದುವೆಯಾಗುವಾಗ, ತಾವು ಬಾಚ್ಯುಲರ್ ಎಂದು ಕೋರ್ಟ್‌ನಲ್ಲಿ ಮುಸ್ತಫಾ ರಾಜ್ ಘೋಷಿಸಿಕೊಂಡಿದ್ದರು'' ಎಂದು ಮುಸ್ತಫಾ ರಾಜ್ ಮೊದಲ ಪತ್ನಿ ಆಯೆಷಾ ಹೇಳಿದ್ದಾರೆ.

ಮುಸ್ತಫಾ ರಾಜ್ ವಿರುದ್ಧ ಕೌಟುಂಬಿಕ ಹಿಂಸಾಚಾರದ ಪ್ರಕರಣವನ್ನೂ ಆಯೆಷಾ ದಾಖಲಿಸಿದ್ದಾರೆ. ಮುಸ್ತಫಾ ರಾಜ್ ಹಾಗೂ ಆಯೆಷಾ ದಾಂಪತ್ಯದ ಫಲವಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ. 

ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ಮದುವೆ ಸಂದರ್ಭದಲ್ಲಿ ಆಯೆಷಾ ಸುಮ್ಮನೆ ಇದ್ದದ್ದು ಯಾಕೆ? ಎಂದು ಪ್ರಶ್ನೆ ಮಾಡಿದಾಗ, ಇಬ್ಬರು ಮಕ್ಕಳ ತಾಯಿಯಾಗಿ ನಾನೇನು ತಾನೆ ಮಾಡಲಿ? ಸೌಹಾರ್ದಯುತವಾಗಿ ಪರಿಹಾರ ಮಾಡಿಕೊಳ್ಳಲು ಪ್ರಯತ್ನ ಪಟ್ಟೆ. ಆದರೆ ಅದು ಕಾರ್ಯರೂಪಕ್ಕೆ ಬಾರದಿದ್ದಾಗ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲೇಬೇಕಾಗುತ್ತದೆ ಎಂದು ಆಯೆಷಾ ಹೇಳಿದ್ದಾರೆ. ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ವಿರುದ್ಧ ಆಯೆಷಾ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp