ವರಮಹಾಲಕ್ಷ್ಮಿ ಹಬ್ಬಕ್ಕೆ ದುನಿಯಾ ವಿಜಯ್ ನಟನೆಯ 'ಸಲಗ' ಸಿನಿಮಾ ರಿಲೀಸ್
ವರಮಹಾಲಕ್ಷ್ಮಿ ಹಬ್ಬಕ್ಕೆ ವಿಜಿ ಅಭಿಮಾನಿಗಳಿಗೆ ಸಂತೋಷದ ಸುದ್ದಿಯೊಂದನ್ನು ಅನೌನ್ಸ್ ಮಾಡಲಾಗಿದೆ. ದುನಿಯಾ ವಿಜಯ್ ನಟನೆಯ 'ಸಲಗ' ಸಿನಿಮಾ ಇದೇ ಅಗಸ್ಟ್ 20ರಂದು ರಿಲೀಸ್ ಆಗುತ್ತಿದೆ.
Published: 22nd July 2021 11:31 AM | Last Updated: 22nd July 2021 11:31 AM | A+A A-

ದುನಿಯಾ ವಿಜಯ್
ವರಮಹಾಲಕ್ಷ್ಮಿ ಹಬ್ಬಕ್ಕೆ ವಿಜಿ ಅಭಿಮಾನಿಗಳಿಗೆ ಸಂತೋಷದ ಸುದ್ದಿಯೊಂದನ್ನು ಅನೌನ್ಸ್ ಮಾಡಲಾಗಿದೆ. ದುನಿಯಾ ವಿಜಯ್ ನಟನೆಯ 'ಸಲಗ' ಸಿನಿಮಾ ಇದೇ ಅಗಸ್ಟ್ 20ರಂದು ರಿಲೀಸ್ ಆಗುತ್ತಿದೆ.
ಇಷ್ಟು ದಿನಗಳ ಕಾಲ ತೆರೆ ಮೇಲೆ ನಾಯಕನಾಗಿ ಮಿಂಚುತ್ತಿದ್ದ ವಿಜಯ್ 'ಸಲಗ' ಚಿತ್ರದ ಮೂಲಕ ನಿರ್ದೇಶಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಸಂಜಯ್ ಆನಂದ್ ನಾಯಕಿಯಾಗಿದ್ದಾರೆ.
ಕೊರೋನಾ ಎರಡನೇ ಅಲೆ ಲಾಕ್‌ಡೌನ್‌ಗೂ ಮುನ್ನವೇ ಸಲಗ ಚಿತ್ರದ ಪ್ರಮೋಷನ್ ಸಾಂಗ್ ಚಿತ್ರೀಕರಣ ಮಾಡಲಾಗಿತ್ತು. ದುಬಾರಿ ಸೆಟ್ ಹಾಕುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಏಪ್ರಿಲ್ 15 ರಂದು ಸಿನಿಮಾ ರಿಲೀಸ್ ಮಾಡಲು ಚಿತ್ರ ತಂಡ ನಿರ್ಧರಿಸಿತ್ತು, ಆದರೆ ಕೊರೋನಾ ಲಾಕ್ ಡೌನ್ ಕಾರಣ ರಿಲೀಸ್ ಮೂಂದೂಡಲಾಗಿತ್ತು. ಅಚ್ಯುತ ಕುಮಾರ್, ರಂಘಾಯಣ ರಘು ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸಿದ್ದಾರೆ.