ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿ ಬಿ.ಜಯಾ ನಿಧನ

ಕನ್ನಡ ಚಿತ್ರರಂಗ ಒಬ್ಬರಾದ ನಂತರ ಒಬ್ಬರಂತೆ ಹಿರಿಯ ನಟರನ್ನು ಕಳೆದುಕೊಳ್ಳುತ್ತಿದೆ. ಶಂಖನಾದ ಅರವಿಂದ್, ಕೃಷ್ಣೇಗೌಡ ನಂತರ ಇದೀಗ  ಹಿರಿಯ ಪೋಷಕ ನಟಿ  ಹಿರಿಯ ಪೋಷಕ ನಟಿ ಬಿ. ಜಯಾ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. 
ಹಿರಿಯ ನಟಿ ಬಿ. ಜಯಾ
ಹಿರಿಯ ನಟಿ ಬಿ. ಜಯಾ

ಬೆಂಗಳೂರು: ಕನ್ನಡ ಚಿತ್ರರಂಗ ಒಬ್ಬರಾದ ನಂತರ ಒಬ್ಬರಂತೆ ಹಿರಿಯ ನಟರನ್ನು ಕಳೆದುಕೊಳ್ಳುತ್ತಿದೆ. ಶಂಖನಾದ ಅರವಿಂದ್, ಕೃಷ್ಣೇಗೌಡ ನಂತರ ಇದೀಗ  ಹಿರಿಯ ಪೋಷಕ ನಟಿ  ಹಿರಿಯ ಪೋಷಕ ನಟಿ ಬಿ. ಜಯಾ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. 

ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯು ಸಿರೆಳೆದಿದ್ದಾರೆ.ಸುಮಾರು 6 ದಶಕಗಳಿಗೂ ಅಧಿಕ ಸಮಯ ಕನ್ನಡ ಚಿತ್ರರಂಗದಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದ ಅವರು 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಂಗಭೂಮಿ, ಕಿರುತೆರೆಯಲ್ಲೂ ಅವರು ಸಕ್ರಿಯರಾಗಿದ್ದರು. 

ಹಾಸ್ಯ ದಿಗ್ಗಜರಾದ ನರಸಿಂಹರಾಜು, ದ್ವಾರಕೀಶ್ ಮುಂತಾದವರೊಂದಿಗೆ ಜಯಾ ನಟಿಸಿದ ಹಾಸ್ಯ ದೃಶ್ಯಗಳು ಇಂದಿಗೂ ಜನಪ್ರಿಯ. 1958ರಲ್ಲಿ ತೆರೆಕಂಡ 'ಭಕ್ತ ಪ್ರಹ್ಲಾದ' ಸಿನಿಮಾ ಜಯಾ ಅವರು ಚೊಚ್ಚಲ ಸಿನಿಮಾ. ಅಂಬರೀಷ್ ನಟನೆಯ 'ಗೌಡ್ರು' ಚಿತ್ರದ ಅಭಿನಯಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದರು.

ಬಿ. ಜಯಾ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಸೇರಿದಂತೆ ಚಿತ್ರರಂಗ ಮತ್ತು ಸಿನಿಪ್ರಿಯರು ಸಂತಾಪ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com