ಚಿತ್ರಮಂದಿರಕ್ಕೆ ಬನ್ನಿ ಎಂದು ನಾವು ಪ್ರೇಕ್ಷಕರನ್ನು ಹೇಗೆ ಕರೆಯೋದು: ಕೆಜಿಎಫ್ 2 ನಿರ್ದೇಶಕ ಪ್ರಶಾಂತ್ ನೀಲ್

ಕೆಜಿಎಫ್-2 ಸಿನಿಮಾ ನಿಸ್ಸಂದೇಹವಾಗಿ ಭಾರತೀಯ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಸಿನಿಮಾವಾಗಿದೆ. ಸಿನಿಮಾ ವಿಳಂಬವಾಗುತ್ತಿರುವುದನ್ನು ನಿರ್ದೇಶಕ ಪ್ರಶಾಂತ್ ನೀಲ್ ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ. 
ಪ್ರಶಾಂತ್ ನೀಲ್
ಪ್ರಶಾಂತ್ ನೀಲ್

ಕೆಜಿಎಫ್-2 ಸಿನಿಮಾ ನಿಸ್ಸಂದೇಹವಾಗಿ ಭಾರತೀಯ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಸಿನಿಮಾವಾಗಿದೆ. ಸಿನಿಮಾ ವಿಳಂಬವಾಗುತ್ತಿರುವುದನ್ನು ನಿರ್ದೇಶಕ ಪ್ರಶಾಂತ್ ನೀಲ್ ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ. 

ಜೂನ್ 4 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರುವ ಪ್ರಶಾಂತ್ ನೀಲ್ ಈ ಸಮಯ ನಾವು ಬಯಸಿದ್ದಲ್ಲ, ಆದರು ನಾವು ಇದನ್ನು ಹೊಂದಬೇಕು,  ಏನು ಇದೆಯೋ, ಏನಾಗಿದೆಯೋ ಅದರಿಂದ ಉತ್ತಮವಾದದ್ದನ್ನು ನಾವು ಪಡೆಬೇಕು ಎಂದು ಹೇಳಿದ್ದಾರೆ.

ಕೆಜಿಎಫ್ -2 ಸಿನಿಮಾ ಜೊತೆಗೆ ಪ್ರಶಾಂತ್ ನೀಲ್ ಪ್ರಭಾಸ್ ನಟನೆಯ ಸಾಲಾರ್ ಸಿನಿಮಾ ನಿರ್ದೇಶಿಸಲಿದ್ದಾರೆ.

ಇಡೀ ಪ್ರಪಂಚವೇ ಕೊರೋನಾ ಸಾಂಕ್ರಾಮಿಕ ರೋಗದಿಂದ ನರಳುತ್ತಿದೆ, ಎಲ್ಲಾ ಕಡೆ ಕಂಡು ಕೇಳರಿಯದ ಸಾವು ನೋವು ಸಂಭವಿಸುತ್ತಿದೆ, ಸಿನಿಮಾ ವಿಳಂಬವಾಗುತ್ತಿರುವುದು ಅಷ್ಟು ದೊಡ್ಡ ವಿಷಯವಲ್ಲ ಎಂದಿದ್ದಾರೆ.

ಶೂಟಿಂಗ್ ವಿಳಂಬದಿಂದ ಕಲಾವಿದರು ಮತ್ತೆ ಮರಳದಿರುವುದು, ಬೇಸರ ಮಾಡಿಕೊಳ್ಳುವುದು ಸಾಮಾನ್ಯ, ಆದರೆ, ಈಗ ಪರಿಸ್ಥಿತಿಯೇ ಬೇರೆಯಿದೆ, ನಾವು ಫ್ಯಾಂಟಸಿ ಪ್ರಪಂಚದಲ್ಲಿ ಬದುಕುತ್ತಿದ್ದೇವೆ, ನಾವು ಮನರಂಜನೆಯ ಒಂದು ಭಾಗವಷ್ಟೆ. 

ನಾವು ಕೇವಲ ಐಷಾರಾಮ ಬಯಸಿ ನಿರಾಶೆಗೊಂಡು ತಾಳ್ಮೆ ಕಳೆದುಕೊಳ್ಳಬಾರದು, ಇಡೀ ಪ್ರಪಂಚವೇ ಅತಿ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ, “ಪ್ರತಿಯೊಬ್ಬ ವ್ಯಕ್ತಿಯಂತೆ, ನಾವು ನಮ್ಮ ಬಗ್ಗೆ ಮತ್ತು ನಮ್ಮ ಕುಟುಂಬಗಳ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದೇವೆ ಮತ್ತು ವೈರಸ್ ನಮಗೆ ತಗುಲದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಇಂಥಹ ಸಂದರ್ಭದಲ್ಲಿ  ಜನರನ್ನು ಚಿತ್ರಮಂದಿರಗಳಿಗೆ ಬರಲು ನಾವು ಹೇಗೆ ಕೇಳಬಹುದು? ಇದು ಜಗತ್ತಿನ ಪ್ರತಿಯೊಬ್ಬರಿಗೂ ಅಸಾಧಾರಣವಾದ ಸನ್ನಿವೇಶವಾಗಿದೆ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

ಭಾರತ ಮತ್ತು ಪ್ರಪಂಚದಾದ್ಯಂತದ ಅಭಿಮಾನಿಗಳು ಯಶ್-ನಟನೆಯ ಕೆಜಿಎಫ್ ಚಿತ್ರವನ್ನು ನೋಡಲು ಎದುರು ನೋಡುತ್ತಿದ್ದಾರೆ, ಬಿಡುಗಡೆಯ ಯಾವುದೇ ಹಂತದಲ್ಲಿ ಚಿತ್ರ ಹೊಸದಾಗಿರುತ್ತದೆ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ. ಕಥೆ ಸಾರ್ವತ್ರಿಕವಾದುದು, ವರ್ತಮಾನಕ್ಕೆ ಅನುಗುಣವಾಗಿರದ ಕಾರಣ, ಅದು ಬಿಡುಗಡೆಯಾದಾಗ ಪ್ರೆಶ್ ಆಗಿರುತ್ತದೆ ಎಂದು ತಿಳಿಸಿದ್ದಾರೆ. 

ಪ್ರಶಾಂತ್ ನೀಲ್ ಹುಟ್ಟುಹಬ್ಬದಂದು ಹೊಂಬಳೆ ಫಿಲ್ಮ್ಸ್ಪ್ರೊಡಕ್ಷನ್ ಹೌಸ್ ಅಚ್ಚರಿಯ ಟೀಸರ್ ರಿಲೀಸ್ ಮಾಡಿದೆ. ಟೀಸರ್ ನಲ್ಲಿ ಅವರನ್ನು ‘ಪಯೋನೀರ್ ಫಿಲ್ಮ್ ಮೇಕರ್’ ಎಂದು ಟ್ಯಾಗ್ ಮಾಡಲಾಗಿದೆ. ನಾನು ಎಲ್ಲರಂತೆ ಕಥೆಗಾರನಾಗಿದ್ದೇನೆ, ಮತ್ತು ಜನರು ಇಷ್ಟಪಡುವ ವಿಭಿನ್ನ ರೀತಿಯ ಕಥೆ ಹೇಳುವಿಕೆ ನನಗೆ ಸಹಜವಾಗಿ ಬಂದಿದೆ ಎಂದು ಹೇಳಿದ್ದಾರೆ.

ಪ್ರಶಾಂತ್ ನೀಲ್ ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕರೆಂದು ಗುರುತಿಸಿಕೊಂಡಿದ್ದಾರೆ, ಆದರೆ ನಾನು ಹಾಗೆ ಭಾವಿಸುವುದಿಲ್ಲ. ಆದರೆ ನನ್ನ ಪಾಕೆಟ್ ನಲ್ಲಿ ಎಷ್ಟು ಹಣ ಇದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ ಎಂದು ತಿಳಿಸಿದ್ದಾರೆ.

ಉಗ್ರಂ ಸಿನಿಮಾ ಮೂಲಕ ನಿರ್ದೇಶನಕ್ಕಿಳಿದ ಪ್ರಶಾಂತ್ ನೀಲ್ ಕೆಜಿಎಫ್ ಸಿನಿಮಾ ನಂತರ ಪ್ರಭಾಸ್ ನಟನೆಯ ಸಾಲಾರ್ ಹಾಗೂ ಜ್ಯೂನಿಯರ್ ಎನ್ ಟಿ ಆರ್ ಸಿನಿಮಾ ಕೂಡ ನಿರ್ದೇಶಿಸಲಿದ್ದಾರೆ. ಆದರೆ ನಾನು ಯಾರನ್ನೂ ಆಯ್ಕೆ ಮಾಡಿಕೊಳ್ಳುವುದಿಲ್ಲ, ಅವರೆಲ್ಲಾ ಹಿರಿಯ ನಟರು, ನಾನು ಸಿನಿಮಾ ರಂಗಕ್ಕೆ ಬರುವ ಮೊದಲು, ದಶಕಗಳಿಂದ ಸಿನಿಮಾದಲ್ಲಿದ್ದಾರೆ, ಅವರು ನನಗೆ ಅವಕಾಶ ನೀಡುತ್ತಿದ್ದಾರೆ, ಇವುಗಳಲ್ಲಿ ಕೆಲವು ಪ್ರಾಜೆಕ್ಟ್ ಗಳನ್ನು ನಾನು ಅತಿ ಹೆಚ್ಚು ಬಜೆಟ್ ನಲ್ಲಿ ತಯಾರಿಸುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com