ಇದೀಗ ನಿರ್ಮಾಪಕರ ಜೀವನದ ಪ್ರಶ್ನೆಯಾಗಿದೆ: ಸಿನಿಮಾಗಳ ಒಟಿಟಿ ರಿಲೀಸ್ ಬಗ್ಗೆ ಶಿವಣ್ಣನ ಮಾತು

ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಇತರರಂತೆ, ಈ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಉಳಿಯದೆ ಅಗತ್ಯವಿದ್ದವರಿಗೆ ಕೋವಿಡ್ ಪರಿಹಾರವನ್ನು ನೀಡುತ್ತಿದ್ದಾರೆ. ಆಹಾರ ಕಿಟ್‌ಗಳನ್ನು ಒದಗಿಸುತ್ತಿದ್ದಾರೆ. ಪ್ರತಿದಿನ 500 ಕ್ಕೂ ಹೆಚ್ಚು ಜನರಿಗೆ "ಆಸರೆ" ಮೂಲಕ ಆಹಾರವನ್ನು ನೀಡುತ್ತಿದ್ದಾರೆ.
ಶಿವರಾಜ್‌ಕುಮಾರ್
ಶಿವರಾಜ್‌ಕುಮಾರ್

ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಇತರರಂತೆ, ಈ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಉಳಿಯದೆ ಅಗತ್ಯವಿದ್ದವರಿಗೆ ಕೋವಿಡ್ ಪರಿಹಾರವನ್ನು ನೀಡುತ್ತಿದ್ದಾರೆ. ಆಹಾರ ಕಿಟ್‌ಗಳನ್ನು ಒದಗಿಸುತ್ತಿದ್ದಾರೆ. ಪ್ರತಿದಿನ 500 ಕ್ಕೂ ಹೆಚ್ಚು ಜನರಿಗೆ "ಆಸರೆ" ಮೂಲಕ ಆಹಾರವನ್ನು ನೀಡುತ್ತಿದ್ದಾರೆ. ಲಾಕ್‌ಡೌನ್ ಅನ್ನು ತೆಗೆದುಹಾಕುವವರೆಗೆ ಈ ಉಪಕ್ರಮವನ್ನು ಮುಂದುವರಿಸುವುದಾಗಿ ಅವರು ಹೇಳಿದ್ದಾರೆ. ಅದಲ್ಲದೆ, ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಚಲನಚಿತ್ರೋದ್ಯಮದ ಕೆಲಸಗಾರರಿಗೂ ನಟ ಕೊಡುಗೆ ನೀಡಿದ್ದಾರೆ. “ಅವರಿಗೆ ಆಹಾರವನ್ನು ನೀಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಆಹಾರವು ಇಂದಿನ ಅವಶ್ಯಕತೆಯಾಗಿದೆ” ಎಂದು ಅವರು ಹೇಳುತ್ತಾರೆ.

ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿರುವುದರಿಂದ ಮುಂದಿನ 10 ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಸುಧಾರಿಸಲಿದೆ ಎಂಬ ಭರವಸೆಯನ್ನು ಶಿವರಾಜ್‌ಕುಮಾರ್ ಹೊಂದಿದ್ದಾರೆ. ಇದು ಚಿತ್ರರಂಗ ಮತ್ತೆ ಮೊದಲಿನ ಹಾದಿಗೆ ಮರಳಲು ಅನುವು ಮಾಡಿಕೊಡಲಿದೆ ಎಂದರು. 

“ನನ್ನ ಸಿನಿಮಾ ನಿರ್ಮಾಪಕರು ಮತ್ತು ಇತರ ನಿರ್ಮಾಪಕರು ಫೋನ್‌ನಲ್ಲಿ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯವನ್ನು ಅನ್ ಲಾಕ್ ಮಾಡಲು ಸರ್ಕಾರ ಯೋಜಿಸುತ್ತಿರುವುದರಿಂದ, ನಿಧಾನವಾಗಿ ಮನರಂಜನಾ ಚಟುವಟಿಕೆಗಳನ್ನು ಪುನಃ ತೆರೆಯುವ ಯೋಜನೆ ಇದೆ. ಚಿತ್ರಮಂದಿರಗಳನ್ನು ತೆರೆಯುವುದರಿಂದ ಉದ್ಯಮವನ್ನು ಉಳಿಸಿಕೊಳ್ಳಲು ಬಹು ಮುಖ್ಯ ಸಹಾಯವಾಗಲಿದೆ" ಎಂದು ಶಿವಣ್ಣ ಹೇಳುತ್ತಾರೆ. ಚಿತ್ರರಂಗದ ಪ್ರತಿಯೊಬ್ಬರೂ ತಮ್ಮ ಲಸಿಕೆ ಡೋಸ್ ಪಡೆಯುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು, ವರ್ಷದ ಆರಂಭದಲ್ಲಿ ಸಾಮಾನ್ಯ ಪರಿಸ್ಥಿತಿ ಇದೆ ಎಂಬಂತಿತ್ತು., ಆದರೆ ಎರಡನೇ ಅಲೆ ಚಿತ್ರೋದ್ಯಮವನ್ನು ಅತ್ಯಂತ ಕೆಟ್ಟ ಸ್ಥಿತಿಗೆ ತಳ್ಳಿದೆ ಎಂದರು.

"ಎಲ್ಲವೂ ಸರಿಯಾಗಲಿದೆ ಎಂದು ನಾನು ಭಾವಿಸುತ್ತೇನೆ ಮತ್ತು ಉದ್ಯಮವು ಸಹಜ ಸ್ಥಿತಿಗೆ ಮರಳುತ್ತದೆ ಎಂಬ ವಿಶ್ವಾಸವಿದೆ”ಎಂದು ಅವರು ಹೇಳುತ್ತಾರೆ. ಸ್ಯಾಂಡಲ್ ವುಡ್ ನ ಅತ್ಯಂತ ಬಿಡುವುಲ್ಲದ ನಟರಲ್ಲಿ ಒಬ್ಬರಾದ ಶಿವಣ್ಣ ಭಜರಂಗಿ 2 ಬಿಡುಗಡೆಗಾಗಿ ಕಾಯುತ್ತಿದ್ದಾರೆ, ಮತ್ತು ವಿಜಯ್ ಮಿಲ್ಟನ್ ಅವರ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಏತನ್ಮಧ್ಯೆ, ನಟ ತಮ್ಮ ಮುಂದಿನ ಯೋಜನೆಯನ್ನು ನಿರ್ದೇಶಕ ರಾಮ್ ಧುಲಿಪುಡಿಯೊಂದಿಗೆ ಪ್ರಾರಂಭಿಸಲು ಯೋಜಿಸಿದ್ದಾರೆ.

125 ನೇ ಸಿನಿಮಾದಲ್ಲಿ ಶಿವಣ್ಣ, ಎ ಹರ್ಷ ಅವರ ಜತೆಯಾಗಲಿದ್ದಾರೆ. ಆ ಚಿತ್ರಕ್ಕೆ ವೇದ ಎಂದು ಹೆಸರಿಡಲಾಗಿದೆ.  ಅಲ್ಲದೆ ಅವರು ತಮ್ಮ ಯೋಜನೆಗಾಗಿ ನಿರ್ದೇಶಕ ನಂದ ಕಿಶೋರ್ ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. 

ಥಿಯೇಟರ್ ಪುನರಾರಂಭವು ಮುಖ್ಯವೆಂದು ಭಾವಿಸುವ ಶಿವಣ್ಣ, ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮುಂದಿನ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ನಾವು ಒಟಿಟಿ ಕಡೆಗೆ ಸಹ ನೋಡಬೇಕಾಗಿದೆ, ಮುಖ್ಯವಾಗಿ ಇದು ನಿರ್ಮಾಪಕರ ಉಳಿವಿನ ಪ್ರಶ್ನೆಯಾಗಿದೆ. ಇದು ಯಾವ ರೀತಿಯ ಸಿನಿಮಾಗಳು ಬರಲಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ವಿವಿಧ ಸ್ಟ್ರೀಮಿಂಗ್ ಚಾನೆಲ್‌ಗಳಲ್ಲಿ ಬರುವ ಬಿಗ್-ಸ್ಟಾರ್ ಚಲನಚಿತ್ರಗಳನ್ನು ನಾನು ಗಮನಿಸುತ್ತಿದ್ದೇನೆ. ಇದು ಕೆಟ್ಟ ಆಲೋಚನೆಯಲ್ಲ. ನಾವು ಕಾಯಬೇಕು ಮತ್ತು ಸರಿಯಾದ ಸಮಯದಲ್ಲಿ ನಿರ್ಧರಿಸಬೇಕು" ಎಂದರು.

ಹಾಗಿದ್ದರೆ ಜಯಣ್ಣ ಕಂಬೈನ್ಸ್ ಅಡಿಯಲ್ಲಿ ಹರ್ಷ ನಿರ್ದೇಶನದ ಅವರ ಮುಂಬರುವ ಚಿತ್ರ ಭಜರಂಗಿ 2 ಒಟಿಟಿನಲ್ಲಿ ತೆರೆ ಕಾಣಲಿದೆಯೆ ಎಂಬುದರ ಬಗ್ಗೆ ಕೇಳಲು "ಇನ್ನೂ ಏನನ್ನೂ ಯೋಜಿಸಲಾಗಿಲ್ಲ" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com