'ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೆ ಕೋವಿಡ್ ಅನಾಹುತ ತಪ್ಪಿಸಬಹುದಿತ್ತು; ಶಿವಣ್ಣನ ಜೊತೆ ಸ್ಕ್ರೀನ್ ಶೇರ್ ಮಾಡಲು ಕಾತುರನಾಗಿದ್ದೇನೆ'

ನಟ ನಿಖಿಲ್ ಕುಮಾರಸ್ವಾಮಿ ಕೋವಿಡ್ ಸಮಯದಲ್ಲಿ ಅಸಹಾಯಕರ ನೆರವಿಗೆ ನಿಂತಿದ್ದು, ಪರಿಹಾರ ಕಾರ್ಯಗಳಿಗೆ ಸಹಾಯ ಹಸ್ತ ಚಾಚಿದ್ದಾರೆ.
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ

ನಟ ನಿಖಿಲ್ ಕುಮಾರಸ್ವಾಮಿ ಕೋವಿಡ್ ಸಮಯದಲ್ಲಿ ಅಸಹಾಯಕರ ನೆರವಿಗೆ ನಿಂತಿದ್ದು, ಪರಿಹಾರ ಕಾರ್ಯಗಳಿಗೆ ಸಹಾಯ ಹಸ್ತ ಚಾಚಿದ್ದಾರೆ.

ಇದು ನನ್ನ ಕಡೆಯಿಂದ ಸಣ್ಣ ಸಹಾಯ, ಪರಿಸ್ಥಿತಿ ಸಹಜ ಸ್ಥಿತಿ ಬರಬೇಕೆಂದು ನಾನು ಬಯಸುತ್ತೇನೆ, ಈ ವರ್ಷದ ಆರಂಭದಲ್ಲಿ ಪರಿಸ್ಥಿತಿಯ ವಾಸ್ತವವನ್ನು ಅರಿಯದೇ ಕೆಟ್ಟ ಕಾಲ ಮುಗಿಯಿತು, ಒಳ್ಳೆ ಸಮಯ ಬರುತ್ತದೆಂದು ಊಹಿಸಿದ್ದೆ, ಆದರೆ ಅದು ಆಗಲಿಲ್ಲ ಎಂದು ಹೇಳಿದ್ದಾರೆ.

ಆರಂಭಿಕ ಹಂತದಲ್ಲೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೇ ಅಪಾಯಗಳನ್ನು ನಿಯಂತ್ರಿಸಬಹುದಿತ್ತು ಎಂದು ಹೇಳಿರುವ ಅವರು ಲಸಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ರೈಡರ್ ಚಿತ್ರದ ಶೂಟಿಂಗ್ ಲೇಹ್ ನಲ್ಲಿ ನಡೆದಿತ್ತು, ಈ ವೇಳೆ ನನಗೆ ಕೋವಿಡ್ ಸೋಂಕು ತಗುಲಿತ್ತು,  ಹೀಗಾಗಿ ನಾನು ವಿವಿಧ ಹಳ್ಳಿಗಳಿಗೆ ತೆರಳಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸುತ್ತೇನೆ ಎಂದು ಹೇಳಿದ್ದಾರೆ.

ನಾನು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ ಹಾಗೂ ನಿರ್ಮಾಪಕರು ಕರೆದ ಕೂಡಲೇ ಶೂಟಿಂಗ್ ಗೆ ತೆರಳುತ್ತೇನೆ ಎಂದು ಹೇಳಿದ್ದಾರೆ. ರೈಡರ್ ಸಿನಿಮಾ ನಮ್ಮ ಹೋಮ್ ಬ್ಯಾನರ್ ನಲ್ಲಿ ತಯಾರಾಗುತ್ತಿಲ್ಲ, ಒಬ್ಬ ನಟನಾಗಿ ನಿರ್ಮಾಪಕರ ನಿರ್ಧಾರಗಳಿಗೆ ಬದ್ಧನಾಗಿರುವುದು ನನ್ನ ಕರ್ತವ್ಯ,  ಕೋವಿಡ್ ಎರಡನೇ ಅಲೆಯ ತೀವ್ರತೆಯನ್ನು ಅರಿಯದ ಅವರು ಶೂಟಿಂಗ್ ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದರು ಎಂದು ಜಾಗ್ವಾರ್ ಹೀರೋ ತಿಳಿಸಿದ್ದಾರೆ.

ರೈಡರ್ ಸಿನಿಮಾ ಇನ್ನೂ 10 ದಿನಗಳ ಶೂಟಿಂಗ್ ಬಾಕಿ ಉಳಿದಿದೆ. ನಿಖಿಲ್ ಮತ್ತೊಮ್ಮೆ ತಾವು ಮಾಸ್ ಹೀರೋ ಎಂಬುದನ್ನು ಸಾಬೀತು ಪಡಿಸಿದ್ದಾರೆ. ರೈಡರ್ ಸಿನಿಮಾದಲ್ಲಿ ತಮ್ಮ ಡ್ಯಾನ್ಸ್ ಪ್ರತಿಭೆಯನ್ನು ಹೊರ ಹಾಕಿದ್ದಾರೆ. ಜುಲೈ ತಿಂಗಳಲ್ಲಿ ಚಿತ್ರತಂಡ ಶೂಟಿಂಗ್ ಪುನಾರಂಭಿಸಲು ಕಾಯುತ್ತಿದೆ. 

ರೈಡರ್ ಸಿನಿಮಾವನ್ನು ವಿಜಯ್ ಕುಮಾರ್ ಕೊಂಡ ನಿರ್ದೇಶಿಸುತ್ತಿದ್ದು, ಚಂದ್ರು ಮನೋಹರನ್ ನಿರ್ಮಾಣ ಮಾಡುತ್ದಿದ್ದಾರೆ. ರೈಡರ್ ನನ್ನ ಪ್ರಕಾರ ಒಂದು ಉತ್ತಮ ಸಿನಿಮಾಗಿದ್ದು, ಮಾಸ್ ಪ್ರೇಕ್ಷಕರಿಗೆ ಹಿಡಿಸಿಲಿದೆ, ಕಮರ್ಷಿಯಲ್ ಸಿನಿಮಾ ಎಂದು ತಿಳಿಸಿದ ನಿಖಿಲ್ ಸಿನಿಮಾ ರಿಲೀಸ್ ದಿನಾಂಕದ ಬಗ್ಗೆ ಹೇಳಲಿಲ್ಲ.

ನನ್ನ ಈ ಸಿನಿಮಾ ಪೂರ್ಣಗೊಳ್ಳುವವರೆಗೂ ಮುಂದಿನ ಚಿತ್ರ ಒಪ್ಪಿಕೊಳ್ಳುವುದಿಲ್ಲ, ಸಿನಿಮಾ ರಿಲೀಸ್ ಮಾಡುವುದು ಪ್ರೊಡಕ್ಷನ್ ಹೌಸ್ ನಿರ್ಧರಿಸುತ್ತದೆ. ಶಿವಣ್ಣ ಅವರ ಜೊತೆ ಸ್ಕ್ರೀನ್ ಶೇರ್ ಮಾಡಲು ನಾನು ಉತ್ಸುಕನಾಗಿದ್ದೇವೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com