90ಕ್ಕೂ ಹೆಚ್ಚು ಮೃತರ ಚಿತಾಭಸ್ಮವನ್ನು ಪವಿತ್ರ ಗಂಗೆಯಲ್ಲಿ ಬಿಡಲು ನಟ ಅರ್ಜುನ್ ಗೌಡ ಕಾಶಿಗೆ ಪ್ರಯಾಣ!

ಕೋವಿಡ್ ಸಂಕಷ್ಟ ಸಮಯದಲ್ಲಿ ರೋಗಿಗಳಿಗೆ ನೆರವಾಗಲು ಆಂಬ್ಯುಲೆನ್ಸ್ ಡ್ರೈವರ್ ಆಗಿ ಮಾರ್ಪಟ್ಟ ನಟ ಅರ್ಜುನ್ ಗೌಡ ಅವರು ಇದೀಗ ರೋಗದಿಂದ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಹಾಯ ಮಾಡಲು ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.
ಅರ್ಜುನ್ ಗೌಡ
ಅರ್ಜುನ್ ಗೌಡ

ಕೋವಿಡ್ ಸಂಕಷ್ಟ ಸಮಯದಲ್ಲಿ ರೋಗಿಗಳಿಗೆ ನೆರವಾಗಲು ಆಂಬ್ಯುಲೆನ್ಸ್ ಡ್ರೈವರ್ ಆಗಿ ಮಾರ್ಪಟ್ಟ ನಟ ಅರ್ಜುನ್ ಗೌಡ ಅವರು ಇದೀಗ ರೋಗದಿಂದ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಹಾಯ ಮಾಡಲು ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.

ಪವಿತ್ರ ಗಂಗಾ ನದಿಯಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದ 90ಕ್ಕೂ ಹೆಚ್ಚು ಜನರ ಚಿತಾಭಸ್ಮವನ್ನು ಬಿಡಲು ನಟ ಬುಧವಾರ ಕಾಶಿಗೆ ತೆರಳಿದರು.

ಸಿನಿಮಾ ಎಕ್ಸ್ ಪ್ರೆಸ್ ಗೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅರ್ಜುನ್ ಗೌಡ ಅವರು ತಾವು ಪರಮಾತ್ಮ ಶಿವನಲ್ಲಿ ಕಟ್ಟಾ ನಂಬಿಕೆ ಇಟ್ಟಿದ್ದು ಕಾಶಿಗೆ ಹಲವಾರು ಬಾರಿ ಭೇಟಿ ನೀಡಿದ್ದು ಅಲ್ಲಿನ ಸ್ಥಳ ಮತ್ತು ಅಲ್ಲಿನ ಜನರೊಂದಿಗೆ ಪರಿಚಿತರಾಗಿರುವುದಾಗಿ ಹೇಳಿದ್ದಾರೆ. 

ಇನ್ನು ಈ ನಿರ್ಧಾರ ಕೈಗೊಂಡಿರುವ ಬಗ್ಗೆ ಕೇಳಿದಾಗ, ಇದು ಮಾನವಕುಲದ ಸೇವೆ ಮಾಡಲು ಮತ್ತೊಂದು ಅವಕಾಶ ಎಂದು ಹೇಳಿದರು. ಕಳೆದ ಒಂದೂವರೆ ತಿಂಗಳಲ್ಲಿ ನಾನು ಆಂಬುಲೆನ್ಸ್ ಚಾಲಕನಾಗಿ 100ಕ್ಕೂ ಹೆಚ್ಚು ದೇಹಗಳನ್ನು ಅಂತ್ಯಸಂಸ್ಕಾರ ಮಾಡಿದ್ದೇನೆ. ಅವರಲ್ಲಿ ಕೆಲವರು ಚಿತಾಭಸ್ಮವನ್ನು ಮನೆಯಲ್ಲಿ ಇಡಲು ಸಿದ್ಧರಿರಲಿಲ್ಲ. ಹೀಗಾಗಿ ಹೆಚ್ಚಿನ ಚಿತಾಭಸ್ಮಗಳು ನನ್ನ ಬಳಿಯೇ ಇತ್ತು. ಕೊನೆಗೆ ಒಂದು ಆಲೋಚನೆ ಬಂದಿತು. ಹೀಗಾಗಿ ಚಿತಾಭಸ್ಮವನ್ನು ಗಂಗಾದಲ್ಲಿ ಬಿಡಲು ನಾನು ನಿರ್ಧರಿಸಿದೆ ಎಂದು ಅರ್ಜುನ್ ಗೌಡ ಹೇಳುತ್ತಾರೆ.

ನಾನು ವಿಭಿನ್ನ ಜನರ ಚಿತಾಭಸ್ಮವನ್ನು ಅಲ್ಪ ಪ್ರಮಾಣದಲ್ಲಿ ತೆಗೆದುಕೊಂಡು ಒಂದೇ ಪಾತ್ರೆಯಲ್ಲಿ ಇಡುತ್ತಿದ್ದೇನೆ. ಅದನ್ನು ಪೆಟ್ಟಿಗೆಯಲ್ಲಿ ಹಾಕಿ ಸಾಮಾನು ಸರಂಜಾಮುಗಳಾಗಿ ಸಾಗಿಸಲಾಗುತ್ತದೆ. ನಂತರ ಅದನ್ನು ಗಂಗೆಯಲ್ಲಿ ಬಿಡುತ್ತೇನೆ ಎಂದು ಗೌಡ ಹೇಳುತ್ತಾರೆ.

ಬೆಂಗಳೂರಿನಿಂದ ಬಹಳಷ್ಟು ಜನರು ಚಿತಾಭಸ್ಮವನ್ನು ವಾರಣಾಸಿಗೆ ಕೊಂಡೊಯ್ಯುತ್ತಾರೆ. ಚಿತಾಭಸ್ಮವನ್ನು ಗಂಗೆಯಲ್ಲಿ ಬಿಡುವುದರಿಂದ ಜೀವನ ಸಂಪೂರ್ಣವಾಗುತ್ತದೆ ಎಂಬ ಭಾವನೆ ಹಿಂದೂಗಳಲ್ಲಿದೆ. ಹೀಗಾಗಿ ಆ ಎಲ್ಲ ಮಾನವ ಆತ್ಮಗಳಿಗೆ ಕೊನೆಯ ಗೌರವವನ್ನು ನೀಡುತ್ತೇನೆ. ಮಾನವಕುಲದ ಸೇವೆ ಮಾಡಲು ಇದು ಮತ್ತೊಂದು ಅವಕಾಶ. ಅಲ್ಲದೆ ನಾನು ಶಿವನ ಪರಮ ಭಕ್ತ ಎಂದು ನಟ ಹೇಳುತ್ತಾರೆ.

ಅಲ್ಲದೆ ಚಿತಾಭಸ್ಮವನ್ನು ಬೇರೆಡೆ ಸಹ ಬಿಡಬಹುದು. ನಮ್ಮಲ್ಲಾದರೆ ಚಿತಾಭಸ್ಮವನ್ನು ಶ್ರೀರಂಗಪಟ್ಟಣ ಅಥವಾ ಹತ್ತಿರದ ಇತರ ಸ್ಥಳಗಳಲ್ಲಿ ಮುಳುಗಿಸಬಹುದಿತ್ತು. ಆದರೆ ನನ್ನ ಭಾವನೆ ಗಂಗಾಯಲ್ಲಿದೆ. ಮಂಡ್ಯ ಮೂಲದ ನಟ ಏಪ್ರಿಲ್ ಮಧ್ಯದಲ್ಲಿ ಪ್ರಾಜೆಕ್ಟ್ ಸ್ಮೈಲ್ ಟ್ರಸ್ಟ್‌ನೊಂದಿಗೆ ಆಂಬ್ಯುಲೆನ್ಸ್ ಡ್ರೈವ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com