ಅನ್ಯಾ ರಂಗಸ್ವಾಮಿ ಜೊತೆ ನಟ ಹಾಗೂ ಕಾಮಿಡಿಯನ್ ಡ್ಯಾನಿಶ್ ಸೇಠ್ ಸರಳ ವಿವಾಹ!

ಖ್ಯಾತ ನಟ ಹಾಗೂ ಕಾಮಿಡಿಯನ್ ಡ್ಯಾನಿಶ್ ಸೇಠ್ ಅವರು ಅನ್ಯಾ ರಂಗಸ್ವಾಮಿ ಜೊತೆ ಗುರುವಾರ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Published: 10th June 2021 07:34 PM  |   Last Updated: 10th June 2021 07:56 PM   |  A+A-


Danish Sait-Anya Rangaswami

ಡ್ಯಾನಿಶ್ ಸೇಠ್ ಮತ್ತು ಅನ್ಯಾ ರಂಗಸ್ವಾಮಿ

Posted By : Srinivasamurthy VN
Source : The New Indian Express

ಬೆಂಗಳೂರು: ಖ್ಯಾತ ನಟ ಹಾಗೂ ಕಾಮಿಡಿಯನ್ ಡ್ಯಾನಿಶ್ ಸೇಠ್ ಅವರು ಅನ್ಯಾ ರಂಗಸ್ವಾಮಿ ಜೊತೆ ಗುರುವಾರ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಾಮಿಡಿಯನ್ ಹಾಗೂ ನಟ ಡ್ಯಾನಿಶ್​ ಸೇಠ್​ ಮತ್ತು ಅನ್ಯಾ ರಂಗಸ್ವಾಮಿ ಸರಳವಾಗಿ ರಿಜಿಸ್ಟಾರ್ ಕಚೇರಿಯಲ್ಲಿ ಸಹಿ ಮಾಡುವ ಮೂಲಕ ಮದುವೆಯಾಗಿದ್ದಾರೆ. ಜೂನ್​ 9ರಂದು ಅಂದರೆ ನಿನ್ನೆ ಮದುವೆ ನೋಂದಣಿ ಮಾಡಿಸಿಕೊಂಡಿದ್ದು,  ಜೂನ್​ 10ರಂದು ಆಪ್ತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ. 


ಈ ಬಗ್ಗೆ ಡ್ಯಾನಿಶ್​ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ‘ನಾನು ಮತ್ತು ಅನ್ಯಾ ನಮ್ಮ ಕುಟುಂಬದವರು ಹಾಗೂ ಆಪ್ತರು ಎನಿಸಿಕೊಂಡ 15 ಜನರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡೆವು. ಜೂನ್​ 9ರಂದು ನಾವು ಮದುವೆ ನೋಂದಣಿ ಮಾಡಿಕೊಂಡಿದ್ದೆವು. ನಮ್ಮನ್ನು ನೀವು ಆಶೀರ್ವದಿಸಿ’  ಎಂದು ಬರೆದುಕೊಂಡಿದ್ದಾರೆ.  

ಇನ್ನು, ಈ ಪೋಸ್ಟ್​ ನೋಡಿದ ಅನೇಕರು ಈ ಜೋಡಿಗೆ ಶುಭಾಶಯಗಳ ತಿಳಿಸುತ್ತಿದ್ದು, ಅನೇಕ ಸೆಲೆಬ್ರಿಟಿಗಳು ಕೂಡ ಇವರ ವೈವಾಹಿಕ ಜೀವನಕ್ಕೆ ಶುಭ ಹರಸಿದ್ದಾರೆ.

2020ರ ಡಿಸೆಂಬರ್​ 11ರಂದು ದಾನಿಶ್​ ತಮ್ಮ ರಿಲೇಶನ್​ಶಿಪ್​ ಬಗ್ಗೆ ಹೇಳಿಕೊಂಡಿದ್ದರು. ‘ಅವಳು ಯೆಸ್​ ಎಂದಳು. ನಿನ್ನ ಉಳಿದ ಜೀವನವನ್ನು ನನ್ನ ಜತೆ ಕಳೆಯೋಕೆ ನಿರ್ಧರಿಸಿದ್ದಕ್ಕೆ ಧನ್ಯವಾದಗಳು’ ಎಂದು ಅನ್ಯಾ ರಂಗಸ್ವಾಮಿ ಫೋಟೋವನ್ನು ಡ್ಯಾನಿಶ್​ ಪೋಸ್ಟ್​ ಮಾಡಿದ್ದರು.

ಅನ್ಯಾ ವೃತ್ತಿಯಲ್ಲಿ ಗ್ರಾಫಿಕ್​ ಡಿಸೈನರ್ ಆಗಿದ್ದು, ಮುಂಬೈನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಸಧ್ಯ ಡ್ಯಾನಿಶ್​, ಕನ್ನಡದ ಎರಡು ಚಿತ್ರಗಳಲ್ಲಿ ನಟಿಸಿದ್ದು, ಅವರ ಫ್ರೆಂಚ್ ಬಿರಿಯಾನಿ ಚಿತ್ರದಲ್ಲಿ ನಟಿಸಿ ಸಾಕಷ್ಟು ಖ್ಯಾತಿ ಗಳಿಸದ್ದರು. ಅಂತೆಯೇ ಹಂಬಲ್ ಪೊಲಿಟಿಷಿಯನ್ ನೊಗರಾಜ್ ಮೂಲಕ ಡ್ಯಾನಿಶ್ ಸಿನಿಮಾ  ರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇದಕ್ಕೂ ಮೊದಲು ಡ್ಯಾನಿಷ್ ಆರ್​ಸಿಬಿ ತಂಡದ ಇನ್​ಸೈಡರ್​ ಆಗಿಯೂ ಸಾಕಷ್ಟು ಖ್ಯಾತಿ ಗಳಿಸಿದ್ದರು. ಆರ್ ಸಿಬಿ ಆಟಗಾರರ ಕಾಲೆಳೆಯುತ್ತ ಅವರ ಸಂದರ್ಶನ ಮಾಡುತ್ತಲೇ ಡ್ಯಾನಿಶ್ ಸಾಕಷ್ಟು ಮನರಂಜನೆ ನೀಡಿದ್ದರು. 

ಇನ್ನು ಪ್ರಸ್ತುತ ಡ್ಯಾನಿಷ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 
 


Stay up to date on all the latest ಸಿನಿಮಾ ಸುದ್ದಿ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp