ಅಭಿಮಾನಿಗಳಿಗಾಗಿ ಅದ್ಬುತ ಆಲೋಚನೆ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ!
ತೆಲುಗು ಚಿತ್ರರಂಗದಲ್ಲಿ ತನ್ನ ಕೆಲಸದಿಂದಲೇ ಸಾಕಷ್ಟು ಖ್ಯಾತಿಯಾಗಿರುವ, 'ಮಿಷನ್ ಮಜ್ನು ಮೂಲಕ ಬಾಲಿವುಡ್ ಪ್ರವೇಶಿಸಿರುವ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ, ತನ್ನ ಅಭಿಮಾನಿಗಳನ್ನು ಹುರಿದುಬಂದಿಸಲು ಬುಧವಾರ ಟ್ವಿಟರ್ ನಲ್ಲಿ ಅವರು ಸುಂದರವಾದ ಆಲೋಚನೆಯೊಂದನ್ನು ಹಂಚಿಕೊಂಡಿದ್ದಾರೆ.
Published: 10th June 2021 04:16 PM | Last Updated: 10th June 2021 05:21 PM | A+A A-

ನಟಿ ರಶ್ಮಿಕಾ ಮಂದಣ್ಣ
ಹೈದರಾಬಾದ್: ತೆಲುಗು ಚಿತ್ರರಂಗದಲ್ಲಿ ತನ್ನ ಕೆಲಸದಿಂದಲೇ ಸಾಕಷ್ಟು ಖ್ಯಾತಿಯಾಗಿರುವ, 'ಮಿಷನ್ ಮಜ್ನು ಮೂಲಕ ಬಾಲಿವುಡ್ ಪ್ರವೇಶಿಸಿರುವ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ, ತನ್ನ ಅಭಿಮಾನಿಗಳನ್ನು ಹುರಿದುಬಂದಿಸಲು ಬುಧವಾರ ಟ್ವಿಟರ್ ನಲ್ಲಿ ಅವರು ಸುಂದರವಾದ ಆಲೋಚನೆಯೊಂದನ್ನು ಹಂಚಿಕೊಂಡಿದ್ದಾರೆ.
ಸಾಂಕ್ರಾಮಿಕದ ದುರಿತ ಸಮಯದಲ್ಲಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ತನ್ನ ಅಭಿಮಾನಿಗಳನ್ನು ಹುರಿದುಂಬಿಸಲು ಸಕಾರಾತ್ಮಕ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆಗೆ ಗುಡ್ ಬೈ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ರಶ್ಮಿಕಾ ಮಂದಣ್ಣ, "ನನ್ನ ಸ್ನೇಹಿತರೊಬ್ಬರು ನನಗೆ ಹೇಳಿದ್ದರು ಮತ್ತು ಎಲ್ಲವನ್ನು ನಾನು ನಿಮಗೆ ಹೇಳಬೇಕಾದ ಅಗತ್ಯವಿದೆ ಅನಿಸಿತು. ನಿಮಗೆ ಸಂತೋಷ ಅಥವಾ ಹಣ ಅಥವಾ ಜ್ಞಾನ ಕೊಡುವುದರೊಂದಿಗೆ ಸಮಯ ಕಳೆಯಿರಿ..ಮತ್ತೇನಿಲ್ಲ..Period!ಎಂದು ಅವರು ಟ್ವಿಟ್ ಮಾಡಿದ್ದಾರೆ.
Something a friend of mine told me.. and I think I need to tell you all too..
— Rashmika Mandanna (@iamRashmika) June 9, 2021
Spend your time on something that gives you either pleasure (happiness- something that makes you smile and feel happy) or money or knowledge.. nothing else! Period!
ತೆಲುಗಿನಲ್ಲಿ ಡಿಯರ್ ಕಾಮ್ರೆಡ್ ಮತ್ತು ಗೀತಾ ಗೊವಿಂದಮ್ ನಂತಹ ಹಿಟ್ ಚಿತ್ರಗಳಲ್ಲಿ ಅಭಿನಯಿಸಿರುವ ರಶ್ಮಿಕಾ ಮಂದಣ್ಣ, ಇತ್ತೀಚೆಗೆ, ಸಾಂಕ್ರಾಮಿಕ ರೋಗದ ವಿನಾಶಕಾರಿ ಎರಡನೇ ಅಲೆಯ ಸಮಯದಲ್ಲಿ ಇತರರಿಗೆ ಸಹಾಯ ಮಾಡುವ ಜನರಿಗಾಗಿ ಭರವಸೆ ಹಂಚುವ ಎನ್ನುವ ಉಪ ಕಾರ್ಯಕ್ರಮವೊಂದನ್ನು ಆರಂಭಿಸಿದ್ದಾರೆ.
ಸೂಪರ್ ಹಿರೋಗಳ ಮೌಲ್ಯಗಳನ್ನು ಜನರಲ್ಲಿ ಪ್ರೋತ್ಸಾಹಿಸುವುದು, ಅವರ ಕೆಲಸಗಳಿಂದ ಪ್ರೇರಣೆಗೊಳ್ಳುವುದು ರಶ್ಮಿಕಾ ಮಂದಣ್ಣ ಅವ ಗುರಿಯಾಗಿದೆ.