ಸ್ಯಾಂಡಲ್ವುಡ್ ಹಿರಿಯ ನಿರ್ಮಾಪಕ, ವಿತರಕ ಕೆ.ಸಿ.ಎನ್. ಚಂದ್ರಶೇಖರ್ ನಿಧನ
ಸ್ಯಾಂಡಲ್ವುಡ್ನ ಹಿರಿಯ ನಿರ್ಮಾಪಕ ಹಾಗೂ ವಿತರಕ ಕೆ.ಸಿ.ಎನ್ ಚಂದ್ರಶೇಖರ್(69) ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ
Published: 14th June 2021 08:02 AM | Last Updated: 14th June 2021 01:27 PM | A+A A-

ಕ ಕೆ.ಸಿ.ಎನ್ ಚಂದ್ರಶೇಖರ್
ಸ್ಯಾಂಡಲ್ವುಡ್ನ ಹಿರಿಯ ನಿರ್ಮಾಪಕ ಹಾಗೂ ವಿತರಕ ಕೆ.ಸಿ.ಎನ್ ಚಂದ್ರಶೇಖರ್(69) ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ
ಡಾ. ರಾಜ್ ಅವರ "ಹುಲಿ ಹಾಲಿನ ಮೇವು".."ಬಬ್ರುವಾಹನ" ಸೇರಿ ಅನೇಕ ಚಿತ್ರಗಳ ನಿರ್ಮಿಸಿದ್ದ ಚಂದ್ರಶೇಖರ್ ಕರ್ನಾಟಕ ಫಿಲಂ ಛೇಂಬರ್ ಹಾಗೂ SIFCCRIPನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಇಂದು ಬೆಳಗ್ಗೆ 9 ಗಂಟೆಯಿಂದ ಶಿವಾನಂದ ಸರ್ಕಲ್ ಬಳಿ ಇರುವ ಅವರ ನಿವಾಸದಲ್ಲಿ ಚಂದ್ರು ಅವರ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಮೂಲಗಳು ಹೇಳಿದೆ..
1977 ರಲ್ಲಿ, ಅವರ ಬ್ಯಾನರ್ ಜನಪ್ರಿಯ ಚಿತ್ರ 'ಬಬ್ರುವಾಹನ' ಚಿತ್ರ ನಿರ್ಮಾಣ ಮಾಡಿತ್ತು.