ಅನಾರೋಗ್ಯ ತಪಾಸಣೆಗಾಗಿ ವಿಶೇಷ ವಿಮಾನದಲ್ಲಿ ಅಮೆರಿಕಾಗೆ ತೆರಳಿದ ರಜನೀಕಾಂತ್‌

"ದಕ್ಷಿಣ ಭಾರತ ಸೂಪರ್‌ಸ್ಟಾರ್‌ ರಜನಿಕಾಂತ್‌ ಮತ್ತೆ ಅನಾರೋಗ್ಯಕ್ಕೊಳಗಾಗಿದ್ದಾರೆಯೇ..? ಗೊತ್ತಿಲ್ಲ. ಆದರೆ, ಈ ಕುರಿತ ಸುದ್ದಿಗಳು ವ್ಯಾಪಕವಾಗಿ ಹರಡುತ್ತಿವೆ."

Published: 15th June 2021 11:52 PM  |   Last Updated: 16th June 2021 12:25 PM   |  A+A-


Rajinikanth

ರಜನಿಕಾಂತ್

Posted By : Srinivas Rao BV
Source : UNI

ಚೆನ್ನೈ: ದಕ್ಷಿಣ ಭಾರತ ಸೂಪರ್‌ಸ್ಟಾರ್‌ ರಜನಿಕಾಂತ್‌ ಮತ್ತೆ ಅನಾರೋಗ್ಯಕ್ಕೊಳಗಾಗಿದ್ದಾರೆಯೇ..? ಗೊತ್ತಿಲ್ಲ. ಆದರೆ, ಈ ಕುರಿತ ಸುದ್ದಿಗಳು ವ್ಯಾಪಕವಾಗಿ ಹರಡುತ್ತಿವೆ.

ರಾಜಕೀಯ ಪ್ರವೇಶಿಸುವುದಾಗಿ ಹೇಳಿ, ಬಳಿಕ ಅನಾರೋಗ್ಯದ ಕಾರಣ ನಿರ್ಧಾರ ಬದಲಿಸಿದ್ದ ಕೆಲ ಸಮಯದ ನಂತರ ರಜನಿಕಾಂತ್ ಅವರು ಇದ್ದಕ್ಕಿದ್ದಂತೆ ಹೈದರಾಬಾದ್ ನ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದರು. ಅಂದಿನಿಂದ ಮತ್ತೆ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದರು. ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯ ಪರಿಣಾಮ ಚಿತ್ರೀಕರಣ ಸ್ಥಗಿತಗೊಂಡಿವೆ. ಈಗ ರಜನಿಕಾಂತ್ ಇದ್ದಕ್ಕಿದ್ದಂತೆ ಅಮೆರಿಕಾಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಅಭಿಮಾನಿಗಳೆಲ್ಲರೂ ಆತಂಕಕ್ಕೊಳಗಾಗಿದ್ದಾರೆ

ರಜನಿಕಾಂತ್ ಅಮೆರಿಕಾಗೆ ತೆರಳಿರುವ ಸುದ್ದಿ  ಅಭಿಮಾನಿಗಳಲ್ಲಿ ಕಳವಳ ಉಂಟುಮಾಡಿದೆ. ಆದರೆ, ರಜಿನಿಕಾಂತ್ ಅವರ ಅನಾರೋಗ್ಯದ ಬಗ್ಗೆ ಹಬ್ಬಿರುವ ವದಂತಿಗಳು ಸತ್ಯವಲ್ಲ. ಅವರು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ. ರಜಿನಿಕಾಂತ್ ನಿಯಮಿತವಾಗಿ ಆರೋಗ್ಯ ತಪಾಸಣೆಗಾಗಿ ಅಮೆರಿಕಾಕ್ಕೆ ತೆರಳಿದ್ದಾರೆ. ಪ್ರಸ್ತುತ ಕೊರೊನಾ ಪರಿಸ್ಥಿತಿಗಳಲ್ಲಿ ವಿದೇಶ ಪ್ರಯಾಣಕ್ಕೆ ನಿರ್ಬಂಧಗಳಿವೆ. ಕೆಲವು ದಿನಗಳ ಹಿಂದೆ ರಜಿನಿಕಾಂತ್ ಅಮೆರಿಕಾ ತೆರಳಲು ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಕೇಂದ್ರ ಸರ್ಕಾರ ಅನುಮತಿ ನೀಡಿದ ನಂತರ ಸೋಮವಾರ ಮಧ್ಯಾಹ್ನ ವಿಶೇಷ ವಿಮಾನದಲ್ಲಿ ಕುಟುಂಬ ಸದಸ್ಯರೊಂದಿಗೆ ಅಮೆರಿಕಾಗೆ ತೆರಳಿದ್ದಾರೆ. ಆರೋಗ್ಯ ತಪಾಸಣೆಯ ನಂತರ ಕೆಲವು ದಿನಗಳವರೆಗೆ ಅಮೆರಿಕಾದಲ್ಲಿದ್ದು, ವಿಶ್ರಾಂತಿ ಪಡೆದ ನಂತರ ಭಾರತಕ್ಕೆ ಹಿಂತಿರುಗುವ ಮಾಹಿತಿ ಲಭ್ಯವಾಗಿದೆ.


Stay up to date on all the latest ಸಿನಿಮಾ ಸುದ್ದಿ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp