'ವಿಂಡೋ ಸೀಟ್' ನಂತರ ಹಾರರ್ ಸಿನಿಮಾಗಾಗಿ ಕಥೆ ಬರೆಯುತ್ತಿದ್ದಾರೆ ಶೀತಲ್ ಶೆಟ್ಟಿ!

ವಿಂಡೋ ಸೀಟ್ ಎಂಬ ಚಿತ್ರ ನಿರ್ದೇಶನ ಮಾಡುತ್ತಿರುವ  ನಿರೂಪಕಿ, ನಟಿ -ನಿರ್ದೇಶಕಿ ಶೀತಲ್ ಶೆಟ್ಟಿ ಮತ್ತೊಂದು ಪ್ರಾಜೆಕ್ಟ್ ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.

Published: 16th June 2021 12:48 PM  |   Last Updated: 16th June 2021 01:30 PM   |  A+A-


Sheetal Shetty

ಶೀತಲ್ ಶೆಟ್ಟಿ

Posted By : Shilpa D
Source : The New Indian Express

ವಿಂಡೋ ಸೀಟ್ ಎಂಬ ಚಿತ್ರ ನಿರ್ದೇಶನ ಮಾಡುತ್ತಿರುವ  ನಿರೂಪಕಿ, ನಟಿ -ನಿರ್ದೇಶಕಿ ಶೀತಲ್ ಶೆಟ್ಟಿ ಮತ್ತೊಂದು ಪ್ರಾಜೆಕ್ಟ್ ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.

ಲಾಕ್ ಡೌನ್ ನಿಂದಾಗಿ ತಮ್ಮ ತವರೂರಿಗೆ ತೆರಳಿರುವ ಶೀತಲ್ ಶೆಟ್ಟಿ, ಹಾರರ್ ಸಿನಿಮಾಗಾಗಿ ಪ್ಲಾನ್ ಮಾಡುತ್ತಿದ್ದಾರೆ. ಉಡುಪಿಯ ಹಸಿರು ವನಗಳ ನಡುವೆ ಹಾರರ್ ಸಿನಿಮಾಗಾಗಿ ಕಥೆ ಬರೆಯುತ್ತಿದ್ದಾರೆ.

ಹಾರರ್ ಕಾದಂಬರಿ ಬರೆಯುತ್ತಿರುವ ಶೀತಲ್ ಶೆಟ್ಟಿ ಅಸಂಬದ್ಧ ಆಚರಣೆಗಳ ಬಗ್ಗೆ ಗಮನ ಹರಿಸಿದ್ದಾರೆ. 6-5 = 2 ರ ನಂತರ, ಕನ್ನಡದಲ್ಲಿ ಉತ್ತಮ ವಿಷಯ ಬಂದಿರುವುದನ್ನು ನಾನು ನೋಡಿಲ್ಲ ಎಂದು ಹೇಳಿರುವ ಶೀತಲ್ ಶೆಟ್ಟಿ, ರೊಮ್ಯಾಂಟಿಕ್ ಥ್ರಿಲ್ಲರ್ ವಿಂಡೋ ಸೀಟ್ ನಂತರ ಹಾರರ್ ಕಥೆಯೊಂದಿಗೆ ಬರುವುದಾಗಿ ತಿಳಿಸಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಥ್ರಿಲ್ಲರ್ ಮತ್ತು ಭಯಾನಕ ಅಂಶಗಳನ್ನು ಹೊಂದಿರುವ ಚಿತ್ರ ಬಹಳ ವಿರಳವಾಗಿದೆ, ಇಂಥ ಸಿನಿಮಾ ಮಾಡಲು ನನಗೆ ಸ್ಥಳವಿದೆ ಎಂದು ನಾನು ಭಾವಿಸಿದ್ದೇನೆ ಎಂದು ಶೀತಲ್ ಶೆಟ್ಟಿ ಹೇಳಿದ್ದಾರೆ. ವಿಂಡೋ ಸೀಟ್ ರಿಲೀಸ್ ಮಾಡಲು ಶೀತಲ್ ಶೆಟ್ಟಿ ಕಾತುರದಿಂದ ಕಾಯುತ್ತಿದ್ದಾರೆ. ವಿಕ್ರಾಂತ್ ರೋಣ ನಿರ್ಮಾಪಕ ಮಂಜುನಾಥ ಗೌಡ ವಿಂಡೋ ಸೀಟ್ ನಿರ್ಮಾಣ ಮಾಡಿದ್ದು, ನಿರೂಪ್ ಭಂಡಾರಿ, ಸಂಜನಾ ಆನಂದ್ ಮತ್ತು ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ.

ಸಿವಿಮಾ ಉತ್ತಮವಾಗಿ ಮೂಡಿಬಂದಿದ್ದು ಪ್ರೇಕ್ಷಕರ ಮುಂದಿಡಲು ಶೀತಲ್ ಶೆಟ್ಟಿ ಕಾಯುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ, ನಾವು ಬಿಗ್-ಸ್ಟಾರ್ ಚಲನಚಿತ್ರಗಳು ಬಿಡುಗಡೆಯಾಗುವುದನ್ನು ಕಾಯುತ್ತಿದ್ದೆವು ಮತ್ತು ಏಪ್ರಿಲ್ 9 ರಂದು ಸಿನಿಮಾ ಬಿಡುಗಡೆಯ ದಿನಾಂಕ ನಿರ್ಧರಿಸಿದ್ದೆವು. ಆದರೆ ವಿಂಡೋ ಸೀಟ್ ಸೇರಿದಂತೆ ಸಾಂಕ್ರಾಮಿಕ ರೋಗದಿಂದಾಗಿ ಎಲ್ಲಾ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿವೆ ಎಂದು ಶೀತಲ್  ಶೆಟ್ಟಿ ಹೇಳಿದ್ದಾರೆ.

ವಿಂಡೋ ಸೀಟ್ ಸಿನಿಮಾ ಒಟಿಟಿ ರಿಲೀಸ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿರ್ದೇಶಕಿ ಶೀತಲ್ ಶೆಟ್ಟಿ ಇದು ನಿರ್ಮಾಪಕರ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ. ಆದರೆ ಸಿನಿಮಾ ಉತ್ತಮವಾಗಿ ಮೂಡಿ ಬಂದಿದ್ದು, ಥಿಯೇಟರ್ ನಲ್ಲಿ ರಿಲೀಸ್ ಆದರೆ ಉತ್ತಮ ಎಂದು ಶೀತಲ್ ತಿಳಿಸಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp