'ಅಮೆರಿಕಾ ಅಮೆರಿಕಾ, 25 ವರ್ಷದ ಮಧುರ ನೆನಪು': ವಿಡಿಯೋ ಹಂಚಿಕೊಂಡ ನಾಗತಿಹಳ್ಳಿ ಚಂದ್ರಶೇಖರ್

ಕನ್ನಡ ಸಿನಿಮಾದ ಲ್ಯಾಂಡ್ ಮಾರ್ಕ್ ಎಂದೇ ಸುಪ್ರಸಿದ್ದವಾಗಿದ್ದ 'ಅಮೆರಿಕಾ ಅಮೆರಿಕಾ' ಸಿನಿಮಾಕ್ಕೆ 25 ವರ್ಷಗಳ ಸಂಭ್ರಮ. ಈ ಸಿನಿಮಾಕ್ಕೆ ಉತ್ತಮ ಕನ್ನಡ ಸಿನಿಮಾ ಎಂದು ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತ್ತು.
ಅಮೆರಿಕಾ ಅಮೆರಿಕಾ ಸಿನಿಮಾ ಮೂಹೂರ್ತ
ಅಮೆರಿಕಾ ಅಮೆರಿಕಾ ಸಿನಿಮಾ ಮೂಹೂರ್ತ

ಕನ್ನಡ ಸಿನಿಮಾದ ಲ್ಯಾಂಡ್ ಮಾರ್ಕ್ ಎಂದೇ ಸುಪ್ರಸಿದ್ದವಾಗಿದ್ದ 'ಅಮೆರಿಕಾ ಅಮೆರಿಕಾ' ಸಿನಿಮಾಕ್ಕೆ 25 ವರ್ಷಗಳ ಸಂಭ್ರಮ. ಈ ಸಿನಿಮಾಕ್ಕೆ ಉತ್ತಮ ಕನ್ನಡ ಸಿನಿಮಾ ಎಂದು ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತ್ತು.

25 ವರ್ಷಗಳ ಸುಮಧುರ ನೆನಪನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ 'ಅಮೆರಿಕ ಅಮೆರಿಕ' ಸಿನಿಮಾದ ವಿಡಿಯೋ ಹಂಚಿಕೊಂಡು, "25 ವರ್ಷದ ಮಧುರನೆನಪು. ಕಾಲು ಶತಮಾನದಾದ್ಯಂತ ಕೃತಜ್ಞತೆಗಳು" ಎಂದು ಹೇಳಿದ್ದಾರೆ.

ಒಬ್ಬ ಬರಹಗಾರ ಮತ್ತು ನಿರ್ದೇಶಕನಾಗಿ ನಾನು ಯಾವಾಗಲೂ ವಿಭಿನ್ನವಾದದ್ದನ್ನೇ ಬಯಸುತ್ತಿದ್ದೆ,  ಅಮೆರಿಕಾದಲ್ಲಿ ಮುಹೂರ್ತ ನಡೆಸುವುದು ದುಬಾರಿ ಕನಸಾಗಿತ್ತು ಎಂದು ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ಅಮೆರಿಕಾದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್, ಹೇಮಾ ಮತ್ತು ದತ್ತಣ್ಣ ಭಾಗಿಯಾಗಿದ್ದರು.

ಅದೃಷ್ಟವಶಾತ್ ನನ್ನ ಪತ್ನಿ ಅಮೆರಿಕಾದಲ್ಲಿ ಸಾಫ್ಟ್ ವೇರ್ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು, ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ನಾನು ಬೇಸಿಗೆ ರಜೆಯಲ್ಲಿ ಅಮೆರಿಕಾಗೆ ಭೇಟಿ ನೀಡುತ್ತಿದ್ದೆ, ಆಗ ನನಗೆ ಈ ಐಡಿಯಾ ಹೊಳೆಯಿತು, ಅಮೆರಿಕಾ ಕುರಿತ ಸಿನಿಮಾ ತೆಗೆಯಲು ಬಯಸಿದಾಗ ನನಗೆ ಎನ್ ಐ ಐ ಗಳಿಂದ ಅಪಾರ ಬೆಂಬಲ ದೊರೆಯಿತು ಎಂದು ನಾಗತಿಹಳ್ಳಿ ತಿಳಿಸಿದ್ದಾರೆ.

ಕೋವಿಡ್ ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಮುಂದಿನ ಸಿನಿಮಾಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಇದೊಂದು ದೊಡ್ಡ ಸಿನಿಮಾವಾಗಿದ್ದು, ಸಿನಿಮಾ ಬಗ್ಗೆ ಆದಷ್ಟು ಶೀಘ್ರವೇ ವಿವರ ಬಹಿರಂಗ ಪಡಿಸಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com