ಲಾಕ್ ಡೌನ್ ಇಲ್ಲದಿದ್ದರೆ ಈ ವರ್ಷ ನನ್ನ ನಾಲ್ಕು ಸಿನಿಮಾ ರಿಲೀಸ್ ಆಗುತ್ತಿದ್ದವು: ರಚಿತಾ ರಾಮ್

ನಟಿ ರಚಿತಾ ರಾಮ್ ಲಾಕ್ ಡೌನ್ ಸಮಯದಲ್ಲಿ ವರ್ಕ್ ಔಟ್, ಬಗೆ ಬಗೆಯ ರುಚಿಕರವಾದ ತಿನಿಸು, ಆರೋಗ್ಯವಾಗಿರುವುದು, ಮತ್ತು ಪೋಷಕರ ಜೊತೆ ಆರಾಮಾವಾಗಿ ಕಾಲ ಕಳೆದಿದ್ದಾರೆ.
ರಚಿತಾ ರಾಮ್
ರಚಿತಾ ರಾಮ್

ನಟಿ ರಚಿತಾ ರಾಮ್ ಲಾಕ್ ಡೌನ್ ಸಮಯದಲ್ಲಿ ವರ್ಕ್ ಔಟ್, ಬಗೆ ಬಗೆಯ ರುಚಿಕರವಾದ ತಿನಿಸು, ಆರೋಗ್ಯವಾಗಿರುವುದು, ಮತ್ತು ಪೋಷಕರ ಜೊತೆ ಆರಾಮಾವಾಗಿ ಕಾಲ ಕಳೆದಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ನಟಿ ರಚಿತಾ ರಾಮ್ ಸಿನಿಮಾಗೆ ಸಂಬಂಧಿಸಿದ ಯಾವ ಕೆಲಸವನ್ನು ಮಾಡಿಲ್ಲವಂತೆ, ಹೊಸ ಪ್ರಾಜೆಕ್ಟ್ ಗೆ ಸಹಿ ಮಾಡುವ ಮೊದಲು 2020 ರಲ್ಲಿ ಮಾಡಿಕೊಂಡಿದ್ದ ಕಮಿಟ್ ಮೆಂಟ್ ಪೂರ್ಣಗೊಳಿಸಲು ರಚಿತಾ ನಿರ್ಧರಿಸಿದ್ದಾರೆ. ಹೊಸ ಕಥೆಗೆ ಸಹಿ ಮಾಡುವುದು ತುಂಬಾ ಸುಲಭದ ಕೆಲಸ, ಆದರೆ ಅಂತಿಮವಾಗಿ ಡೇಟ್ ಹೊಂದಾಣಿಕೆ ಸಮಸ್ಯೆಯಾಗುತ್ತದೆ, ಇದರಿಂದ ಬೇರೆಯವರು ತೊಂದರೆಯಾಗುವುದು ನನಗೆ ಇಷ್ಟವಿಲ್ಲ ಎಂದು ರಚಿತಾ ರಾಮ್ ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿರುವ ರಚಿತಾ ರಾಮ್ ಕೈಯ್ಯಲ್ಲಿ ಡಜನ್ ಗಟ್ಟಲೇ ಸಿನಿಮಾಗಳಿವೆ, ಕೆಲವು ರಿಲೀಸ್ ಗೆ ಸಿದ್ಧವಾಗಿವೆ ಇನ್ನು ಕೆಲವು ನಿರ್ಮಾಣ ಹಂತದಲ್ಲಿವೆ. ಇನ್ನು ಕೆಲ ಸಿನಿಮಾಗಳು ಆರಂಭವಾಗಬೇಕಾಗಿದೆ. ಒಂದು ವೇಳೆ ಲಾಕ್ ಡೌನ್ ಇರದಿದ್ದರೇ ನನ್ನ ನಟನೆಯ ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತಿದ್ದವು. ರಮೇಶ್ ಅರವಿಂದ್ ನಿರ್ದೇಶನದ 100, ತೆಲುಗಿನ ಮೊದಲ ಸಿನಿಮಾ ಸೂಪರ್ ಮಚ್ಚಿ, ಪ್ರೇಮ್ ನಿರ್ದೇಶನದ ಎಕ್ ಲವ್ ಯಾ ಮತ್ತು ಲವ್ ಯೂ ರಚ್ಚು ಸಿನಿಮಾಗಳು ಬಿಡುಗಡೆಗೆ
ಸಿದ್ಧವಾಗಿವೆ.

ಈ ವರ್ಷ ಐದು ಸಿನಿಮಾಗಳನ್ನು ನಾನು ಕಂಪ್ಲೀಟ್ ಮಾಡಬಹುದಿತ್ತು, ಅದರಲ್ಲಿ ವೀರಮ್, ಬ್ಯಾಡ್ ಮ್ಯಾನರ್ಸ್ ಸಿನಿಮಾಗಳು ಸೇರಿವೆ, ಈ ವರ್ಷವನ್ನು ನಾನು ಬಹಳ ಉತ್ತಮವಾಗಿ ಪ್ಲಾನ್ ಮಾಡಿದ್ದೆ, ಆದರೆ ಮತ್ತೆ ಲಾಕ್ ಡೌನ್ ನಿಂದಾಗಿ ಎಲ್ಲವು ಬದಲಾಯಿತು ಎಂದಿದ್ದಾರೆ ರಚಿತಾ ರಾಮ್.

ಲಾಕ್ ಡೌನ್ ಮುಗಿದ ನಂತರ ಮೊದಲು, ನವೀನ್ ನಿರ್ದೇಶನದ ಶಬರಿ ಸೆರ್ಚಿಂಗ್ ಫಾರ್ ರಾವಣ ಸಿನಿಮಾದ ಶೂಟಿಂಗ್ ಆರಂಭಿಸುವುದಾಗಿ ಹೇಳಿದ್ದಾರೆ. ಹಲವು ತಿಂಗಳುಗಳಿಂದ ಚಿತ್ರತಂಡ ಕಾಯುತ್ತಿದೆ, ಹೀಗಾಗಿ ಮೊದಲು ಈ ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಳ್ಳುವುದಾಗಿ ರಚಿತಾ ತಿಳಿಸಿದ್ದಾರೆ.

ಇದರ ಜೊತೆಗೆ ಇನ್ನೂ ಹಲವು ಪ್ರೊಡಕ್ಷನ್ ಹೌಸ್ ಗಳ ಸಿನಿಮಾ ಜೊತೆಗೆ ರಚಿತಾ ಕೆಲಸ ಮಾಡಲಿದ್ದಾರೆ. ಕೆಲವು ಸಿನಿಮಾಗಳ ಹೊರತು ಪಡಿಸಿ ಯಾವೋಬ್ಬ ನಿರ್ಮಾಪಕರು ನನ್ನ ಮೇಲೆ ಒತ್ತಡ ಹೇರುತ್ತಿಲ್ಲ, ಪರಿಸ್ಥಿತಿ ನನ್ನ ನಿಯಂತ್ರಣದಲ್ಲಿಲ್ಲ, ಹೀಗಾಗಿ ಪ್ರಾಜೆಕ್ಟ್ ಸ್ಥಗಿತಗೊಂಡಿದೆ ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ ಎಂದು ರಚಿತಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com