ರಶ್ಮಿಕಾ ಮಂದಣ್ಣ ನೋಡಲು 900 ಕಿ.ಮೀ. ದೂರದಿಂದ ಕೊಡಗಿಗೆ ಬಂದು ಪೇಚಿಗೆ ಸಿಲುಕಿದ ಅಭಿಮಾನಿ!

ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣಳನ್ನು ನೋಡಲು ಅಭಿಮಾನಿಯೊಬ್ಬ ಬರೋಬ್ಬರಿ 900 ಕಿ.ಮೀ ದೂರದಿಂದ ಕೊಡಗಿಗೆ ಬಂದು ಇದೀಗ ಪೇಚಿಗೆ ಸಿಲುಕಿದ್ದಾರೆ.
ರಶ್ಮಿಕಾ ಮಂದಣ್ಣ-ಆಕಾಶ್
ರಶ್ಮಿಕಾ ಮಂದಣ್ಣ-ಆಕಾಶ್

ಕೊಡಗು: ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣಳನ್ನು ನೋಡಲು ಅಭಿಮಾನಿಯೊಬ್ಬ ಬರೋಬ್ಬರಿ 900 ಕಿ.ಮೀ ದೂರದಿಂದ ಕೊಡಗಿಗೆ ಬಂದು ಇದೀಗ ಪೇಚಿಗೆ ಸಿಲುಕಿದ್ದಾರೆ. 

ತಮ್ಮ ಮೆಚ್ಚಿನ ನಟಿಯನ್ನು ನೋಡಲು ಅಭಿಮಾನಿ ಆಕಾಶ್ ತ್ರಿಪಾಟಿ ಎಂಬಾತ ತೆಲಂಗಾಣದಿಂದ ಕೊಡಗಿಗೆ ಬಂದಿದ್ದಾನೆ. ತೆಲಂಗಾಣದಿಂದ ರೈಲಿನ ಮೂಲಕ ಮೈಸೂರಿಗೆ ಬಂದ ಆಕಾಶ್ ನಂತರ ಗೂಡ್ಸ್ ಗಾಡಿಯಲ್ಲಿ ವಿರಾಜಪೇಟೆಗೆ ಬಂದಿದ್ದಾನೆ. 

ಅಲ್ಲಿ ಮನೆ ಗೊತ್ತಾಗದೆ ಸಿಕ್ಕ ಸಿಕ್ಕವರನ್ನು ರಶ್ಮಿಕಾಳ ಮನೆಯನ್ನು ತಿಳಿಸುವಂತೆ ಕೇಳಿಕೊಂಡು ಅಲೆದಾಡಿದ್ದಾನೆ. ಈತನ ವರ್ತನೆ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆಕಾಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕಾಶ್ ತಾನು ತೆಲಂಗಾಣ ರಾಜ್ಯದವನಾಗಿದ್ದು ನಟಿ ರಶ್ಮಿಕಾಳನ್ನು ನೋಡುವ ಸಲುವಾಗಿ ಬಂದಿರುವುದಾಗಿ ಹೇಳಿದ್ದಾನೆ. 

ಇನ್ನು ಪೊಲೀಸರು ಆಕಾಶ್ ಗೆ ಬುದ್ದಿವಾದ ಹೇಳಿ ಮರಳಿ ಊರಿಗೆ ಹೋಗುವಂತೆ ತಿಳಿಸಿದ್ದಾರೆ. ಅದರಂತೆ ಆಕಾಶ್ ತೆಲಂಗಾಣಕ್ಕೆ ಮರಳಿದ್ದಾನೆ. 

ರಶ್ಮಿಕಾ ಮಂದಣ್ಣ ಬಾಲಿವುಡ್ ಚಿತ್ರವೊಂದರಲ್ಲಿ ನಟಿಸುತ್ತಿದ್ದು ಚಿತ್ರೀಕರಣಕ್ಕಾಗಿ ಮುಂಬೈಗೆ ತೆರಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com