ರಂಗನಾಯಕ ಕಥೆ ಸಿನಿಮಾ ಮಾಡಲು 10 ವರ್ಷ ಕಾದಿದ್ದೀನಿ: ನಿರ್ದೇಶಕ ಗುರು ಪ್ರಸಾದ್

ಜಗ್ಗೇಶ್-ಗುರು ಪ್ರಸಾದ್ ಅವರ ರಂಗನಾಯಕ ಸಿನಿಮಾ ಈಗ ಚಿತ್ರೀಕರಣಕ್ಕೆ ಸಜ್ಜುಗೊಂಡಿದೆ. ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.
ನಟ ಜಗ್ಗೇಶ್
ನಟ ಜಗ್ಗೇಶ್

ಜಗ್ಗೇಶ್-ಗುರು ಪ್ರಸಾದ್ ಅವರ ರಂಗನಾಯಕ ಸಿನಿಮಾ ಈಗ ಚಿತ್ರೀಕರಣಕ್ಕೆ ಸಜ್ಜುಗೊಂಡಿದೆ. ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಸೆಟ್ ಗಳು ಪೂರ್ಣವಾಗಿ ಸಿದ್ಧವಾಗಲು ಚಿತ್ರತಂಡ ಎದುರು ನೋಡುತ್ತಿದ್ದು ಒಂದು ವಾರದಲ್ಲಿ ಸೆಟ್ ನಿರ್ಮಾಣ ಮುಕ್ತಾಯಗೊಳ್ಳಲಿದೆ.

ಜುಲೈ.15 ರ ವೇಳೆಗೆ ಶೂಟಿಂಗ್ ಪ್ರಾರಂಭವಾಗಲಿದೆ. ಕೋವಿಡ್-19 ಇಲ್ಲದೇ ಇದ್ದಲ್ಲಿ ಈ ವೇಳೆಗೆ ಸಿನಿಮಾ ಬಿಡುಗಡೆಯಾಗಿರುತ್ತಿತ್ತು" ಎನ್ನುತ್ತಾರೆ ನಿರ್ದೇಶಕ ಗುರುಪ್ರಸಾದ್.

ಕೆಲವು ವರ್ಷಗಳ ಹಿಂದೆ ಟೀಸರ್ ಬಿಡುಗಡೆ ಮಾಡಿದಾಗ ಚಿತ್ರದ ಯೋಜನೆಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿತ್ತು. ಈಗ ಪರಿಸ್ಥಿತಿಗಳು ನಿಧಾನವಾಗಿ ಉತ್ತಮಗೊಳ್ಳುತ್ತಿದೆ. ಈಗ ಚಿತ್ರೀಕರಣ ಪ್ರಾರಂಭವಾಗುವುದನ್ನು ಹೆಚ್ಚು ಕಾಯುವುದಕ್ಕೆ ಆಗುತ್ತಿಲ್ಲ" ಎಂದು ನಿರ್ದೇಶಕ ಗುರುಪ್ರಸಾದ್ ಹೇಳಿದ್ದಾರೆ.

"ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಜೊತೆ ನಿರ್ದೇಶಕರು ಕೆಲಸ ಮಾಡಿದ್ದು, ಹಾಡುಗಳ ವಿಭಾಗದಲ್ಲಿನ ಕೆಲಸಗಳು ಬಹುತೇಕ ಮುಕ್ತಾಯಗೊಂಡಿದೆ. ಕೇವಲ ಒಂದು ಹಾಡಷ್ಟೇ ಬಾಕಿ ಉಳಿದಿದ್ದು, ಶೀಘ್ರವೇ ಅದನ್ನೂ ಪೂರ್ಣಗೊಳಿಸುತ್ತೇವೆ, ಮುಂದಿನದ್ದು ಟಾಕಿ ಭಾಗಕ್ಕೆ ಗಮನ ಹರಿಸಲಿದ್ದೇವೆ" ಎಂದು ನಿರ್ದೇಶಕ ಗುರುಪ್ರಸಾದ್ ತಿಳಿಸಿದ್ದಾರೆ

ಶೇ.50 ರಷ್ಟು ಚಿತ್ರೀಕರಣ ಅರಮನೆಯಂತಹ ಸೆಟ್ ನಲ್ಲಿ ನಡೆಯಲಿದ್ದರೆ, ಉಳಿದ ಭಾಗ ಹೊರಾಂಗಣದಲ್ಲಿ ನಡೆಯಲಿದೆ. ಆಗಸ್ಟ್ ತಿಂಗಳಾಂತ್ಯಕ್ಕೆ ಚಿತ್ರೀಕರಣ ಮುಕ್ತಾಯಗೊಳಿಸುವ ವಿಶ್ವಾಸದಲ್ಲಿದ್ದಾರೆ ನಿರ್ದೇಶಕರು. ಆದರೆ ಎಲ್ಲವೂ ಕೋವಿಡ್-19 ನ ಮೂರನೇ ಅಲೆಯ ಮೇಲೆ ನಿಂತಿದೆ. ಈ ವೇಳಾಪಟ್ಟಿಯಲ್ಲಿರುವ ಅಂಶಗಳು ಮುಕ್ತಾಯಗೊಂಡ ನಂತರ ಉಳಿದ ಲೊಕೇಷನ್ ಗಳನ್ನು ಅಂತಿಮಗೊಳಿಸುತ್ತೇವೆ ಎಂದು ಗುರುಪ್ರಸಾದ್ ಮಾಹಿತಿ ನೀಡಿದ್ದಾರೆ.

ರಂಗನಾಯಕ ರಾಜಕೀಯ ವಿಡಂಬನೆಯ ಕಥಾಹಂದರವನ್ನು ಹೊಂದಿದ್ದು, ವಿಜಯನಗರ ಅವಧಿಯ ಕಾಲಘಟ್ಟಕ್ಕೂ ನಿರ್ದೇಶಕರು ಪ್ರೇಕ್ಷಕರನ್ನು ಕರೆದೊಯ್ಯಲಿದ್ದಾರೆ. ಇದೇ ವೇಳೆ ಈಗಿನ ರಾಜಕೀಯ ವ್ಯವಸ್ಥೆಯನ್ನೂ ಹೈಲೈಟ್ ಮಾಡಲಿದ್ದಾರೆ.

"ಕಳೆದ 10 ವರ್ಷಗಳ ಕಾಲ ಈ ಕಥೆಯನ್ನು ಸಿನಿಮಾ ಮಾಡಲು ಕಾದಿದ್ದೀನಿ, ರಂಗನಾಯಕಗೆ ಜಗ್ಗೇಶ್ ಸೂಕ್ತ ನಟ ಎಂಬ ಬಗ್ಗೆ ಸ್ಪಷ್ಟನೆ ಇತ್ತು, ಸಿನಿಮಾ ಬಗ್ಗೆ  ಸೂಕ್ತ ನಿರ್ಮಾಪಕರೇ ಈ ಸಿನಿಮಾ ನಿರ್ಮಾಣ ಮಾಡಬೇಕೆಂದುಕೊಂಡಿದ್ದೆ. ರಂಗನಾಯಕ ಕನ್ನಡ ಸಿನಿಮಾದಲ್ಲಿ ಅತ್ಯುತ್ತಮ ರಾಜಕೀಯ ವಿಡಂಬನಾತ್ಮಕ ಸಿನಿಮಾ ಆಗಿರಲಿದೆ" ಎಂದು ಗುರುಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಗ್ಗೇಶ್ ಅವರು ತಮ್ಮ 25-30 ವರ್ಷಗಳ ಸಿನಿಮಾ ಜೀವನದಲ್ಲಿ ಹಲವು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಾನು ಕಂಡಿರುವಂತೆ ಜಗ್ಗೇಶ್ ಅವರಂತೆ ಮತ್ತೊಬ್ಬರು ಇಲ್ಲ ಎಂದು ಗುರುಪ್ರಸಾದ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com