ಬೆಳ್ಳಿ ಪರದೆಯ ಮೇಲೆ ಪ್ರತಿ ಫ್ರೇಮ್‌ನ ಭವ್ಯತೆ ಮತ್ತು ಉತ್ಕೃಷ್ಟತೆಯ ಅಂಶವನ್ನು ಹೊರತರುವ ಉದ್ದೇಶ ನನ್ನದು: 'ರಾಬರ್ಟ್' ಡಿಒಪಿ ಸುಧಾಕರ್ ಎಸ್ ರಾಜ್

ಸಿನಿ ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್ ಅವರಿಗೆ "ಚೌಕ" ಚಿತ್ರದ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜತೆಗೆ ಒಡನಾಟ ಪ್ರಾರಂಭವಾಗಿತ್ತು.  ಆ ಚಿತ್ರದಲ್ಲಿ ಅವರು ಅತಿಥಿ ಕಲಾವಿದ ದರ್ಶನ್ ಅವರನ್ನು ಚಿತ್ರೀಕರಿಸುವ ಅವಕಾಶ ಪಡೆದಿದ್ದರು.

Published: 01st March 2021 11:01 AM  |   Last Updated: 01st March 2021 11:10 AM   |  A+A-


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಡಿಒಪಿ ಸುಧಾಕರ್ ಎಸ್ ರಾಜ್

Posted By : Raghavendra Adiga
Source : The New Indian Express

ಸಿನಿ ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್ ಅವರಿಗೆ "ಚೌಕ" ಚಿತ್ರದ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜತೆಗೆ ಒಡನಾಟ ಪ್ರಾರಂಭವಾಗಿತ್ತು. ಆ ಚಿತ್ರದಲ್ಲಿ ಅವರು ಅತಿಥಿ ಕಲಾವಿದ ದರ್ಶನ್ ಅವರನ್ನು ಚಿತ್ರೀಕರಿಸುವ ಅವಕಾಶ ಪಡೆದಿದ್ದರು. ಇದೀಗ "ರಾಬರ್ಟ್" ಮೂಲಕ ಇನ್ನೊಮ್ಮೆ ದರ್ಶನ್ ಅವರೊಂದಿಗೆ ಕೆಲಸ ಮಾಡಲು ಅವರಿಗೆ ಅವಕಾಶ ಲಭಿಸಿದೆ. ಕ್ಯಾಮರಾಮ್ಯಾನ್ ಆಗಿ, ಸುಧಾಕರ್ 10 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. "ರಾಬರ್ಟ್‌"ನಲ್ಲಿ ದರ್ಶನ್ ಅವರ ಲುಕ್, ಶೈಲಿ, ದೇಹ ಭಾಷೆ ಮತ್ತು ಒಟ್ಟಾರೆ ಸ್ಕ್ರೀನ್ ಮೇಲಿನ ಪ್ರಸ್ತುತಿಯನ್ನು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಚಿತ್ರಿಸಿದ್ದಾರೆ. “ಒಳ್ಳೆಯ ಕಥೆಯನ್ನು ಸರಿಯಾದ ರೀತಿಯಲ್ಲಿ ತೆರೆಗೆ ತಂದಾಗ ಮಾತ್ರ ನಮ್ಮ ಸೃಜನಶೀಲತೆ ಮುಂಚೂಣಿಗೆ ಬರುತ್ತದೆ. ನಿರ್ದೇಶಕರ ದೃಷ್ಟಿ ಮತ್ತು ಕಲ್ಪನೆಗೆ ಹೊಂದುವಂತಹ ವಸ್ತುವನ್ನು ನಾವು ನೀಡುವ ಅಗತ್ಯವಿದೆ.ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರೊಂದಿಗೆ ನಾನು ಅವರ ಸೋದರ ನಂದ ಕಿಶೋರ್ ಅವರ "ಅಧ್ಯಕ್ಷ" ಚಿತ್ರದ ಸಮಯದಿಂದ ಸಂಬಂಧ ಹೊಂದಿದ್ದೇನೆ."ಸುಧಾಕರ್  ಹೇಳಿದ್ದಾರೆ.

ಈಗ ಒಂದು ವರ್ಷದಿಂದ, ಸುಧಾಕರ್ ಅವರ ಗಮನ "ರಾಬರ್ಟ್" ಕಡೆಗೆ ಕೇಂದ್ರೀಕೃತವಾಗಿದೆ. ಅವರು ಬೇರಾವ ಯೋಜನೆಯನ್ನೂ ಕೈಗೆತ್ತಿಕೊಂಡಿಲ್ಲ."ನಾನು ಸೆಟ್ ವಿನ್ಯಾಸದ ಬಗ್ಗೆ ನಿರ್ದಿಷ್ಟವಾಗಿ ವಿವರಿಸಿದ್ದೆ, ಬಣ್ಣ ಸಂಯೋಜನೆ, ಪ್ರತಿಯೊಬ್ಬ ನಟನ ವೇಷಭೂಷಣ ಮತ್ತು ಸಿನಿಮಾದಲ್ಲಿ ಬಳಸಲಾದ ಪ್ರತಿಯೊಂದು ಪರಿಕರಗಳ ವಿವರಗಳಲ್ಲಿ ಕೆಲಸ ಮಾಡಿದ್ದೇನೆ. ಬೆಳ್ಳಿ ಪರದೆಯ ಮೇಲೆ ಪ್ರತಿ ಫ್ರೇಮ್‌ನ ಭವ್ಯತೆ ಮತ್ತು ಉತ್ಕೃಷ್ಟತೆಯ ಅಂಶವನ್ನು ಹೊರತರುವ ಉದ್ದೇಶ ನನ್ನದು, ”ಎಂದು ಅವರು ಹೇಳಿದ್ದಾರೆ.

"ರಾಬರ್ಟ್"ನಲ್ಲಿ ಚಾಲೆಂಜಿಂಗ್ ಸ್ಟಾರ್ ಜೊತೆ ಶೂಟಿಂಗ್ ಮಾಡುವಾಗ ಡಿಒಪಿ ಸುಧಾಕರ್ ಹಲವು ಪ್ರಯೋಗಗಳಿಗೆ ಒಡ್ಡಿಕೊಂಡಿದ್ದಾರೆ. "ನಾನು ನಿಯಮಿತ ಸ್ವರೂಪವನ್ನೇ ಹಾದುಹೋಗಲು ಬಯಸುವವನಲ್ಲ, ದರ್ಶನ್ ನನಗೆ ಪ್ರಯೋಗಕ್ಕೆ ಒಡ್ಡಿಕೊಳ್ಳಲು ಹೇಳಿದಾಗ ಖುಷಿಯಾಗಿತ್ತು."ಚೌಕ"ದಲ್ಲಿ ಅತಿಥಿ ಪಾತ್ರದಲ್ಲಿ ಅವರನ್ನು ಚಿತ್ರೀಕರಿಸಿದ ನಂತರ ಪೂರ್ಣ ಪ್ರಮಾಣದ ಚಿತ್ರಕ್ಕಾಗಿ ನಟನೊಂದಿಗೆ ಸಂಪರ್ಕಕ್ಕೆ ಬಂದದ್ದಕ್ಕೆ ನನಗೆ ಹೆಚ್ಚಿನ ಸಂತಸವಾಗಿದೆ."ರಾಬರ್ಟ್" ಹಲವಾರು ಹೋಂವರ್ಕ್ ಗಳನ್ನು ಒಳಗೊಂಡಿದೆ." ಸಿನಿಮಾದ 80 ಪ್ರತಿಶತವನ್ನು ಶೂಟಿಂಗ್ ಸೆಟ್‌ಗಳಲ್ಲಿ ಚಿತ್ರೀಕರಿಸಲಾಗಿದೆ. “ಪ್ರತಿಯೊಂದೂ ವಿಭಿನ್ನವಾಗಿದೆ. ಚಿತ್ರದಲ್ಲಿ ಆಕ್ಷನ್ ಸನ್ನಿವೇಶಗಳು, ಹಾಡುಗಳು ಮತ್ತು ನಾಯಕ ಮತ್ತು ನಾಯಕಿಯನ್ನು ಪ್ರಸ್ತುತಪಡಿಸುವ ವಿಧಾನ ಹೊಸದಾಗಿದೆ."ಸುಧಾಕರ್ ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಇದೇ ವೇಳೆ ನಿರ್ಮಾಪಕ ಎಸ್ ಉಮಾಪತಿಬೆಂಬಲವಿಲ್ಲದೆ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ನೆನೆಯುತ್ತಾರೆ. 

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp