ಬಿಗ್ ಬಾಸ್ ಮನೆಗೆ ರಾಜಕೀಯ ರಂಗು: ಹಳ್ಳಿಹಕ್ಕಿ ಹೆಚ್ ವಿಶ್ವನಾಥ್ ಎಂಟ್ರಿ?

ಕನ್ನಡದ ಬಿಗ್ ಬಾಸ್ 8ನೇ ಆವೃತ್ತಿ ಶುರುವಾಗಿದ್ದು ಅದಾಗಲೇ ಎಲ್ಲಾ ಸ್ಪರ್ಧಿಗಳು ಮನೆಗೆ ಎಂಟ್ರಿಕೊಟ್ಟಿದ್ದಾರೆ. ಇದರ ನಡುವೆ ರಾಜಕಾರಣಿಯೊಬ್ಬರು ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು.

Published: 01st March 2021 04:37 PM  |   Last Updated: 01st March 2021 04:38 PM   |  A+A-


Vishwanath

ಎಚ್.ವಿಶ್ವನಾಥ್

Posted By : Vishwanath S
Source : Online Desk

ಕನ್ನಡದ ಬಿಗ್ ಬಾಸ್ 8ನೇ ಆವೃತ್ತಿ ಶುರುವಾಗಿದ್ದು ಅದಾಗಲೇ ಎಲ್ಲಾ ಸ್ಪರ್ಧಿಗಳು ಮನೆಗೆ ಎಂಟ್ರಿಕೊಟ್ಟಿದ್ದಾರೆ. ಇದರ ನಡುವೆ ರಾಜಕಾರಣಿಯೊಬ್ಬರು ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು.

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಪ್ರಭಾವಿ ರಾಜಕಾರಣಿ ಇರುತ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ಅದರಂತೆ ಈ ಬಾರಿ ಮಾಜಿ ಸಚಿವ ಎಚ್ ವಿಶ್ವನಾಥ್ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಎಚ್ ವಿಶ್ವನಾಥ್ ನನಗೆ ಈ ಹಿಂದಿಯೇ ಕರೆ ಬಂದಿತ್ತು. ಪರಮೇಶ್ವರ್ ಗುಂಡುಕ್ಕಲ್ ಅವರು ನನ್ನ ಸ್ನೇಹಿತರು ಅವರು 6ನೇ ಆವೃತ್ತಿಗೆ ನನ್ನನ್ನು ಆಹ್ವಾನಿಸಿದ್ದರು. ಆದರೆ ಆರೋಗ್ಯ ಸಮಸ್ಯೆಯಿಂದ ನಾನು ಹೋಗಿರಲಿಲ್ಲ ಎಂದು ಹೇಳಿದ್ದಾರೆ. 

ಈ ಬಾರಿಯೂ ನನಗೆ ಆಹ್ವಾನ ಬಂದಿತ್ತು. ಆದರೆ ವಿಧಾನಸಭೆ ಚುನಾವಣೆಗಳು ನಡೆಯಲಿರುವುದರಿಂದ ಬಿಗ್ ಬಾಸ್ ಮನೆಯಲ್ಲಿ ಸುದೀರ್ಘವಾಗಿ ಇರಲು ಸಾಧ್ಯವಿಲ್ಲ. ವಿಶೇಷ ಆಹ್ವಾನಿತನಾಗಿ ಸಮಯ ಹಾಗೂ ಅವಕಾಶ ಸಿಕ್ಕರೆ ನಾಲ್ಕೈದು ದಿನ ಹೋಗಲು ಸಿದ್ಧ ಎಂದು ಹೇಳಿದ್ದಾರೆ. 

ರಾಜಕಾರಣದ ಬಗ್ಗೆ ಯುವ ಜನರಿಗೆ ಶಿಕ್ಷಣ ಕೊಡಬೇಕಿದೆ. ಬಿಗ್ ಬಾಸ್ ಮನೆಗೆ ಹೋದರೆ ಅಲ್ಲಿನ ಯುವ ಜನತೆಗೆ ರಾಜಕೀಯ ಪಾಠ ಹೇಳಿಕೊಡುತ್ತೇನೆ ಎಂದು ವಿಶ್ವನಾಥ್ ಹೇಳಿದ್ದಾರೆ. 

ಹಿರಿಯ ನಟ ಶಂಕರ್ ಅಶ್ವಥ್. ನಟಿ ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ ಸೇರಿದಂತೆ 17 ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp