ಸಿಂಗಲ್ ಶಾಟ್ ನಲ್ಲಿ ತಯಾರಾಯ್ತು' ರಕ್ತ ಗುಲಾಬಿ'
ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಮೇಕಿಂಗ್ನಲ್ಲಿ ಆಗಾಗ್ಗೆ ಒಂದಷ್ಟು ಪ್ರಯೋಗಗಳು ಆಗುತ್ತಲೇ ಇರುತ್ತವೆ. ಈಗ ಇಲ್ಲೊಂದು ಚಿತ್ರತಂಡ ಸಿಂಗಲ್ ಶಾಟ್ನಲ್ಲಿ ಇಡೀ ಸಿನಿಮಾವನ್ನು ಚಿತ್ರೀಕರಿಸಿ, ತೆರೆಮೇಲೆ ತರಲು ಹೊರಟಿದೆ. ಆ ಚಿತ್ರದ ಹೆಸರು “ಕೆಂಗುಲಾಬಿ’.
Published: 01st March 2021 09:47 AM | Last Updated: 01st March 2021 09:47 AM | A+A A-

ರಕ್ತ ಗುಲಾಬಿ ಪೋಸ್ಟರ್
ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಮೇಕಿಂಗ್ನಲ್ಲಿ ಆಗಾಗ್ಗೆ ಒಂದಷ್ಟು ಪ್ರಯೋಗಗಳು ಆಗುತ್ತಲೇ ಇರುತ್ತವೆ. ಈಗ ಇಲ್ಲೊಂದು ಚಿತ್ರತಂಡ ಸಿಂಗಲ್ ಶಾಟ್ನಲ್ಲಿ ಇಡೀ ಸಿನಿಮಾವನ್ನು ಚಿತ್ರೀಕರಿಸಿ, ತೆರೆಮೇಲೆ ತರಲು ಹೊರಟಿದೆ. ಆ ಚಿತ್ರದ ಹೆಸರು “ಕೆಂಗುಲಾಬಿ’.
ಯುವ ನಿರ್ದೇಶಕ ರಾಬಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ “ರಕ್ತ ಗುಲಾಬಿ’ ಚಿತ್ರದಲ್ಲಿ ವಿಕ್ರಮಾದಿತ್ಯ, ಶಿವಾನಿ, ಮಾಣಿಕ್ಯ, ಜಿ.ಎನ್ ಭರತ್, ರಾಮು, ವಿನೋದ್ ಕುಮಾರ್, ಸಿದ್ದರಾಮ, ಪ್ರವೀಣ್ ಬಾಲಗೌಡರ್, ಪ್ರವೀಣ್ ಕುಮಾರ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಕಲೇಶಪುರ ತಾಲೂಕಿನ ಅರೇಹಳ್ಳಿ, ಬೆಳ್ಳಾವರ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಮಾರ್ಚ್ 5 ರಂದು ಸಿನಿಮಾ ರಿಲೀಸ್ ಆಗಲಿದೆ.
ಸಾಮಾಜಿಕ ವ್ಯವಸ್ಥೆಯಿಂದ ಮನನೊಂದ ಯುವಕನೊಬ್ಬ ತನಗಾದ ಅನ್ಯಾಯದ ವಿರುದ್ದ ಸೇಡು ತೀರಿಸಿಕೊಳ್ಳುವುದರ ಸುತ್ತ ಚಿತ್ರದ ಈ ಚಿತ್ರದ ಕಥೆ ನಡೆಯುತ್ತದೆ. ಮಿಷಿನ್ ಕಾಡ್ ಫಿಲಂಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಲೋಹಿತ್ ಕುಲಕರ್ಣಿ ನಿರ್ಮಿಸಿದ್ದಾರೆ.
ಈ ಚಲನಚಿತ್ರಕ್ಕಾಗಿ ತಯಾರಾಗಲು ನಾನು ಸುಮಾರು ಒಂದು ವರ್ಷ ತೆಗೆದುಕೊಂಡಿದ್ದೇನೆ ಮತ್ತು ನಾನು ಯಾವುದೇ ಕಟ್ ಇಲ್ಲದೆ ಚಲನಚಿತ್ರವನ್ನು ಚಿತ್ರೀಕರಿಸಲು ಹೋಗುತ್ತಿದ್ದೇನೆ ಎಂದು ರಹಸ್ಯವಾಗಿರಿಸಿದೆ. ಯಾವುದೇ ಸಿಬ್ಬಂದಿ ಸದಸ್ಯರು ಮತ್ತು ಕಲಾವಿದರರಿಗೂ ಸೂಚನೆ ಸ್ಕಿಕ್ಕಿರಲಿಲ್ಲ.
ಸಾಮಾಜಿಕ ವ್ಯವಸ್ಥೆಯಿಂದ ಮನನೊಂದ ಯುವಕನೊಬ್ಬ ತನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ಮತ್ತೋಂದು ವ್ಯವಸ್ಥೆಯನ್ನು ಸೇರಿಕೊಳ್ಳುತ್ತಾನೆ. ಇದರ ಮದ್ಯೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ತನ್ನ ಪ್ರೀತಿ ಉಳಿಸಿಕೊಳ್ಳಲು ದೂರದ ಜಾಗಕ್ಕೆ ತೆರಳುವಾಗ ತನ್ನವರಿಂದಲೂ ಮತ್ತು ಪೋಲೀಸರಿಂದಲೂ ಕಷ್ಟಗಳು ಎದುರಾಗುತ್ತದೆ. ಅದರಿಂದ ಸಫಲರಾಗುತ್ತಾರಾ? ಅಥವಾ ಬಂದಿಯಾಗುತ್ತಾರಾ? ಎಂಬುದು ಒಂದು ಏಳೆಯ ಕ್ರೈಂ ಥ್ರಿಲ್ಲರ್ ಸಾರಾಂಶವಾಗಿದೆ.
ಕಲಾವಿದರು ಸಣ್ಣ ತಪ್ಪುಗಳನ್ನು ಮಾಡಿದಾಗ, ನಾವು ಮೊದಲಿನಿಂದಲೂ ಇಡೀ ಚಲನಚಿತ್ರವನ್ನು ಮರುಹೊಂದಿಸಬೇಕಾಗಿತ್ತು. ಅನೇಕ ಸ್ಥಳಗಳಿಗೆ ಹೋಗುವಾಗ, ನಾವು ಸಂಪೂರ್ಣ ಘಟಕವನ್ನು ಮರು-ಸ್ಥಾಪಿಸಬೇಕಿತ್ತ ಎಂದು ಹೇಳಿದ್ದಾರೆ. ಸ್ಫೋಟಕ ಮತ್ತು ಶಸ್ತ್ರಾಸ್ತ್ರಗಳನ್ನು ಒಳಗೊಂಡ ಆಕ್ಷನ್ ಸನ್ನಿವೇಶಗಳು, ಒಂದೇ ಸಮಯದಲ್ಲಿ ಚಿತ್ರೀಕರಿಸಲ್ಪಟ್ಟಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸುಮಾರು ಎರಡು ತಿಂಗಳ ತಯಾರಿ ತೆಗೆದುಕೊಂಡಿತು.