ಸುದೀಪ್ ಭೇಟಿ ಮಾಡಿದ 'ಸಾಹೋ' ನಿರ್ದೇಶಕ: ಕಿಚ್ಚನಿಗೆ ಹೊಸ ಕಥೆ ಹೇಳಿದ ಸುಜಿತ್?

ಸಾಹೋ ನಿರ್ದೇಶಕ ಸುಜಿತ್ ನಟ ಸುದೀಪ್ ಅವರನ್ನು ಬೆಂಗಳೂರಿನಲ್ಲಿ ಶನಿವಾರ ಭೇಟಿ ಮಾಡಿದ್ದಾರೆ. ಸುದೀಪ್  ಆಪ್ತ ರಾಮ್ ಸುಜೀತ್ ಅವರ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ.

Published: 01st March 2021 10:04 AM  |   Last Updated: 01st March 2021 10:04 AM   |  A+A-


'Saaho' director Sujeeth meets Kichcha Sudeep

ನಿರ್ದೇಶಕ ಸುಜಿತ್ ಜೊತೆ ಸುದೀಪ್ ಆಪ್ತ ರಾಮ್

Posted By : Shilpa D
Source : The New Indian Express

ಸಾಹೋ ನಿರ್ದೇಶಕ ಸುಜಿತ್ ನಟ ಸುದೀಪ್ ಅವರನ್ನು ಬೆಂಗಳೂರಿನಲ್ಲಿ ಶನಿವಾರ ಭೇಟಿ ಮಾಡಿದ್ದಾರೆ. ಸುದೀಪ್  ಆಪ್ತ ರಾಮ್ ಸುಜೀತ್ ಅವರ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ. 

ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿರುವ ಇನ್ನೋವೆಟಿವ್ ಫಿಲ್ಮ್‌ ಸಿಟಿಗೆ ಹೋಗಿರುವ ಸುಜೀತ್‌, ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಮೂಲಗಳ ಪ್ರಕಾರ, ಸುದೀಪ್ ಅವರಿಗೆ ಸುಜಿತ್ ಹೊಸದೊಂದು ಕಥೆ ಹೇಳಿದ್ದಾರೆ ಎನ್ನಲಾಗಿದೆ. ಆ ಸಲುವಾಗಿಯೇ ಅವರು ಹೈದರಾಬಾದ್‌ನಿಂದ ಇಲ್ಲಿ ತನಕ ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಸುಜೀತ್ ಅವರ ಬಳಿ ಒಂದು ಕಥೆ ಇದೆ. ಆ ಕಥೆ ಸುದೀಪ್ ಅವರಿಗೆ ಸೂಕ್ತವಾಗಿ ಹೊಂದಿಕೊಳ್ಳುವಂತೆ ಇದೆ. ಹಾಗಾಗಿ, ಇಬ್ಬರು ಚರ್ಚೆ ಮಾಡಿದ್ದಾರೆ. ಎಲ್ಲವೂ ಇನ್ನೂ ಪ್ರಾಥಮಿಕ ಹಂತದಲ್ಲೇ ಇದೆ. ಯಾವುದೂ ಅಂತಿಮಗೊಂಡಿಲ್ಲ.

ಇನ್ನು, ಸುದೀಪ್ ಅವರ ಆಪ್ತಬಳಗದಲ್ಲಿ ಗುರುತಿಸಿಕೊಂಡಿರುವ ನಟ ರಾಮ್, ಸುಜೀತ್ ಜೊತೆ ಇರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ಸಾಹೋ' ನಂತರದ ನಿಮ್ಮ ಮುಂದಿನ ಸಿನಿಮಾವನ್ನು ಎದುರು ನೋಡುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

 2014 ರಲ್ಲಿ ಸುಜಿತ್  'ರನ್ ರಾಜ ರನ್‌' ಅನ್ನೋ ಸಿನಿಮಾವನ್ನು ಸುಜೀತ್ ಮಾಡಿದ್ದರು.  ಸಾಹೋ'ಗೆ ನಿರ್ದೇಶನ ಮಾಡಿದ್ದ ಸುಜೀತ್‌ ಸುಮಾರು 450 ಕೋಟಿ ರೂ. ಬಜೆಟ್‌ನಲ್ಲಿ ಪ್ರಭಾಸ್ ಜೊತೆ ಸಾಹೋ ಸಿನಿಮಾವನ್ನು ಮಾಡಿದ್ದ ಸುಜೀತ್ ದೇಶಾದ್ಯಂತ ಗಮನಸೆಳೆದಿದ್ದರು. ಅದು ಅವರ 2ನೇ ಸಿನಿಮಾವಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಜಾದೂ ಮಾಡಿದ ಈ ಸಿನಿಮಾ ಅದ್ಯಾಕೋ ಪ್ರೇಕ್ಷಕರ ಮೆಚ್ಚುಗೆ ಗಳಿಸಲಿಲ್ಲ

ಸದ್ಯ ಸುದೀಪ್ ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಕರಾಗಿದ್ದಾರೆ,  ಕೋಟಿಗೊಬ್ಬ 3 ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ  ಶಿವ ಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ3 ಏಪ್ರಿಲ್ 29 ರಂದು ರಿಲೀಸ್ ಆಗಲಿದೆ,  ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರೀಕರಣ ಕೂಡ ಮುಗಿದಿದೆ., ಸುಜಿತ್ ಜೊತೆ ಕೆಲಸ ಮಾಡಲಿದ್ದಾರೆಯೇ ಎಂಬ ಬಗ್ಗೆ ಇನ್ನೂ ಅಧಿಕೃತವಾಗಿ ತಿಳಿಸಿಲ್ಲ.
 

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp