ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಳ್ಳದಿದ್ದಲ್ಲಿ ಈ ಸಿನಿಮಾ ಆಗುತ್ತಿರಲಿಲ್ಲ: 'ಹೀರೋ' ನಿರ್ದೇಶಕ ಭರತ್ ರಾಜ್

ಲಾಕ್ ಡೌನ್ ಸಮಯವನ್ನು ಹೆಚ್ಚು ಲಾಭದಾಯಕವಾಗಿ ಮಾಡಿಕೊಂಡವರ ಪೈಕಿ ಸ್ಯಾಂಡಲ್ ವುಡ್ ಚೊಚ್ಚಲ ನಿರ್ದೇಶಕ ಎಂ.ಭರತ್ ರಾಜ್ ಕೂಡ ಸೇರಿದ್ದಾರೆ.

Published: 02nd March 2021 11:01 AM  |   Last Updated: 02nd March 2021 12:42 PM   |  A+A-


ರಿಷಬ್ ಶೆಟ್ಟಿ, ಭರತ್ ರಾಜ್

Posted By : Raghavendra Adiga
Source : The New Indian Express

ಲಾಕ್ ಡೌನ್ ಸಮಯವನ್ನು ಹೆಚ್ಚು ಲಾಭದಾಯಕವಾಗಿ ಮಾಡಿಕೊಂಡವರ ಪೈಕಿ ಸ್ಯಾಂಡಲ್ ವುಡ್ ಚೊಚ್ಚಲ ನಿರ್ದೇಶಕ ಎಂ.ಭರತ್ ರಾಜ್ ಕೂಡ ಸೇರಿದ್ದಾರೆ.ಅವರ ಮೊದಲ ಸಿನಿಮಾ "ಹೀರೋ" ಬಗ್ಗೆ ಮಾತನಾಡುತ್ತಾ, ಕೋವಿಡ್ -19 ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳದಿದ್ದಲ್ಲಿ ಈ ಸಿನಿಮಾ ಆಗುತ್ತಿರಲಿಲ್ಲ ಎಂದು ಅವರ ಹಿತೈಷಿಯೊಬ್ಬರು ಮಾಡಿದ್ದ ಕಮೆಂಟ್ ಬಗ್ಗೆ ನೆನಪಿಸಿಕೊಂಡರು."ಕೋವಿಡ್ ಅಥವಾ ಲಾಕ್‌ಡೌನ್ ಇಲ್ಲದಿದ್ದರೆ, ಈ ಯೋಜನೆಯು ಪ್ರಾರಂಭವಾಗುತ್ತಿರಲಿಲ್ಲ ನನಗೆ ಮನೆಯಲ್ಲಿ ಸಮಯ ಕಳೆಯಲು ಹೇಳಿದಾಗ ಸಿನಿಮಾ ಮಾಡುವ ಆಲೋಚನೆ ಹುಟ್ಟಿತು." ಭರತ್ ಹೇಳಿದ್ದಾರೆ.

ಆಕ್ಷನ್-ಕಾಮಿಡಿ ಅಡ್ವೆಂಚರ್ ಕಥಾನಕದಲ್ಲಿ ರಿಷಬ್ ಶೆಟ್ಟಿ ಹೇರ್ ಸ್ಟೈಲಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಚಿತ್ರದಲ್ಲಿ ಗಾನವಿ ಲಕ್ಷ್ಮಣ್ ನಾಯಕಿಯಾಗಿ ನಟಿಸಿದ್ದಾರೆ, ಜೊತೆಗೆ ಪ್ರಮೋದ್ ಶೆಟ್ಟಿ ಮತ್ತು ಉಗ್ರಂ ಖ್ಯಾತಿಯ ಮಂಜು ಸಹ ಇದ್ದಾರೆ.

"ನಮ್ಮ ಗ್ರೂಪ್ ನಲ್ಲಿ ಸಿನಿಮಾ ಪ್ರಾರಂಭವನ್ನು ಹತಾಶೆಯಿಂದಿಗೆ ಮಾಡಲಾಗಿತ್ತು.ಎಂಟರ್ಟೈನ್ಮೆಂಟ್ ಹಾಗೂ ಅದಕ್ಕೆ ಸಂಬಂಧಿಸಿ ನಮಗಿರುವ ಭಯ, ಸಮಯ, ಮತ್ತು ಚಿತ್ರಮಂದಿರ ಸಮಸ್ಯೆ, ಒಟಿಟಿ ಎಲ್ಲವೂ ನಮ್ಮ ಚರ್ಚೆಯ ಭಾಗಗಳಾಗಿದ್ದವು. ಆದರೆ ನಾವು ಚಿತ್ರಮಂದಿರ, ಒಟಿಟಿ, ಯುಟ್ಯೂಬ್ ಯಾವುದೇ ಆಗಿರಲಿ ನಾವು ನಮ್ಮ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುತ್ತೇವೆ ಎಂದು ನಿರ್ಧರಿಸಿದ್ದೆವು." "ಹೀರೋ" ಸಿನಿಮಾ ಪ್ರಾರಂಭದ ಕಥೆಯನ್ನು ನಿರ್ದೇಶಕರು ಹೋಗೆ ವಿವರಿಸಿದ್ದಾರೆ. ಒಂದು ದಿನದಲ್ಲಿ ನಡೆಯುವ ಸನ್ನಿವೇಶದ ಬಗ್ಗೆ ಪೂರ್ವಸಿದ್ಧತೆಯಿಲ್ಲದ ಸ್ಕ್ರಿಪ್ಟ್‌ನೊಂದಿಗೆ ಪ್ರಾರಂಭವಾದ ಚಿತ್ರ ಇದಾಗಿತ್ತು.

"ನಾವು ಆ ಸಮಯದಲ್ಲಿ ಕೋವಿಡ್ ನಿರ್ಬಂಧಗಳಿಗೆ ಅನುಗುಣವಾಗಿ ಒಂದು ಕಥೆಯನ್ನು ಬರೆಯಬೇಕಿತ್ತು.ಸೀಮಿತ ಸಿಬ್ಬಂದಿಯ ಉಪಸ್ಥಿತಿಯಂತೆ. ನಾವು ಎರಡು ಲೆಟರ್ಸ್ ಹಾಗೂ ಒಂದು ಸ್ಥಳವನ್ನು ಹೊಂದಿರುವ ಸ್ಕ್ರಿಪ್ಟ್‌ಗೆ ಬುದ್ದಿವಂತಿಕೆಯಿಂದ ರೂಪ ಕೊಟ್ಟಿದ್ದೆವು.ವೆ. ನಾವು ಒಂದು ಕಿರುಚಿತ್ರವನ್ನು ಸಹ ಯೋಜಿಸಿದ್ದೆವು."ಯೋಜನೆಯ ಗಾತ್ರಕ್ಕಿಂತ ಹೆಚ್ಚಿನದೆಂದರೆ ಕಥಾವಸ್ತು ಯಾವುದೆನ್ನುವುದು ಮುಖ್ಯವಾಗಿತ್ತು ಮತ್ತು ಅದು ಪ್ರೇಕ್ಷಕರನ್ನು ಹೇಗೆ ತೊಡಗಿಸಿಕೊಳ್ಳುತ್ತದೆ ಎನ್ನುವುದು ಸಹ ನಮ್ಮ ಮನಸ್ಸಿನಲ್ಲಿತ್ತು. “ನಾವು ಶೂಟಿಂಗ್ ಪ್ರಾರಂಭಿಸಿದಾಗ ಅರ್ಧದಷ್ಟು ಸ್ಕ್ರಿಪ್ಟ್ ಸಿದ್ಧವಾಗಿದ್ದು ನಾವು ಸೆಟ್‌ಗಳಲ್ಲಿದ್ದಾಗ ದ್ವಿತೀಯಾರ್ಧವನ್ನು ತಯಾರಿಸಲಾಗಿದೆ. ಅದಕ್ಕಾಗಿ ಇನ್ನೂ ಒಬ್ಬಿಬ್ಬರು ನಟರನ್ನು ಸೇರ್ಪಡೆ ಮಾಡಿಕೊಳ್ಲಲಾಗಿತ್ತು."

ರಿಷಬ್ ಶೆಟ್ಟಿಯಂತಹ ಪ್ರಸಿದ್ಧ ನಿರ್ದೇಶಕ ಮತ್ತು ನಟ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿರುವಾಗ ಸಿನಿಮಾವನ್ನು ನಿರ್ದೇಶಿಸುವ ಸವಾಲುಗಳ ಬಗ್ಗೆ ಹೇಳಿದ ಭರತ್ “ನಾನು ಕಥೆಯನ್ನು ನಿರೂಪಿಸಿದಾಗ ಮತ್ತು ಅದನ್ನು ಹೇಗೆ ತೆರೆಗೆ ತರಬಹುದು ಎನ್ನುವುದು ಟೀಂಗೆ ಮನವರಿಕೆಯಾಗಿತ್ತು .ಪ್ರಮೋದ್ ಶೆಟ್ಟಿ ನಟಿಸಿರುವ ಲಾಫಿಂಗ್ ಬುದ್ಧ ನನ್ನ ನಿರ್ದೇಶನಕ್ಕೆ ಬರಬೇಕೆಂದು ನಾನು ಬಯಸಿದ್ದೆ, ಆದರೆ "ಹೀರೋ" ಸಿದ್ದವಾಯಿತು. ನಿರ್ದೇಶನದ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮೊದಲು ರಿಷಬ್ ಅವರೊಂದಿಗೆ ಚರ್ಚಿಸಿದ್ದೇನೆ ಎನ್ನುವ ಭರತ್ . “ಸೆಟ್‌ಗಳಿಗೆ ಪ್ರವೇಶಿಸುವ ಮೊದಲು, ನಾನು ರಿಷಬ್ ಅವರೊಂದಿಗೆ ಚರ್ಚೆ ನಡೆಸಿದೆ, ಮತ್ತು ನಾನು ನಿರ್ದೇಶಕರಾಗಿ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಇಷ್ಟಪಡುತ್ತೇನೆ ಎಂದು ನಾನು ಅವರಿಗೆ ಹೇಳಿದೆ.ಸಿಬ್ಬಂದಿಯಲ್ಲಿ ಯಾರೊಬ್ಬರ ಹಸ್ತಕ್ಷೇಪವಿಲ್ಲದೆ ನಾನು ಯೋಜನೆಯನ್ನು ಕಾರ್ಯಗತಗೊಳಿಸಬಲ್ಲೆಎಂದು ರಿಷಬ್ ಖಚಿತಪಡಿಸಿಕೊಂಡರು. ಅವರೆಲ್ಲರೂ ಬೆಂಬಲವಾಗಿ ನಿಂತರು ” "ಹೀರೋ" ರಿಷಬ್‌ಶೆಟ್ಟಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದ್ದು, ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜನೆ ಇದಕ್ಕಿದೆ.. ಚಿತ್ರದ ಶೀರ್ಷಿಕೆಯನ್ನು ಮೊದಲ ಕಟ್ ಸಮಯದಲ್ಲಿ ನಿರ್ಧರಿಸಲಾಯಿತು "ಅಶೋಕ ವನ ಎನ್ನುವುದು ನನ್ನ ಆಯ್ಕೆಯ ಶೀರ್ಷಿಕೆಯಾಗಿತ್ತು. ಆದರೆ ಅದನ್ನು ಫೈನಲ್ ಮಾಡಲು ಸಾಧ್ಯವಾಗಿಲ್ಲ."

ನಿರ್ದೇಶಕರು ಸಿನಿ ಛಾಯಾಗ್ರಾಹಕ ಅರವಿಂದ ಕಶ್ಯಪ್ ಮತ್ತು ಸ್ಟಂಟ್ ಮಾಸ್ಟರ್ ವಿಕ್ರಮ್ ಮೊರ್ ಅವರ ಬಗ್ಗೆ ವಿಶೇಷ ಉಲ್ಲೇಖವನ್ನು ನೀಡುತ್ತಾರೆ. ಅವರಿಂದ ನಾನು ಬಹಳ ಕಲಿಯಬೇಕಾಗಿತ್ತು ಎನ್ನುತ್ತಾರೆ. "ನಮ್ಮ ಪಾತ್ರಗಳಿಗೆ ನಿರ್ದಿಷ್ಟ ಹೆಸರುಗಳಿಲ್ಲ, ಮತ್ತು ನಾವು ಅವನನ್ನು ನಾಯಕ, ನಾಯಕಿ, ಖಳನಟ ಎಂದು ಸಂಬೋಧಿಸುತ್ತೇವೆ. "ಹೀರೋ" ಚಿತ್ರಕ್ಕೆ ಆ ಶೀರ್ಷಿಕೆ ಇಡಲು ಇದೂ ಸಹ ಒಂದು ಕಾರಣ. ಆದಾಗ್ಯೂ, ಸಾಂಕೇತಿಕ ಶೀರ್ಷಿಕೆ ರಿಷಬ್ ಶೆಟ್ಟಿ  ಮೇಲೆ ತುಂಬಾ ಒತ್ತಡ ಹಾಕಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದರು ಎಂದು ಭರತ್ ಹೇಳಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp