ಕೆಲವರು ಸಣ್ಣ ಚಿಲ್ಲರೆ ಗಲಾಟೆಯಿಂದ ಹಲ್ಲೆ, ಕೊಲೆಯವರೆಗೂ ಹೋಗುತ್ತಾರೆ: ನವರಸ ನಾಯಕ ಜಗ್ಗೇಶ್

ಇತ್ತೀಚೆಗೆ ದರ್ಶನ್ ಅಭಿಮಾನಿಗಳು ಹಾಗೂ ಸ್ಯಾಂಡಲ್ ವುಡ್ ನ ನವರಸನಾಯಕ ಜಗ್ಗೇಶ್ ಅವರ ಮಧ್ಯೆ ಸಣ್ಣ ಮನಸ್ತಾಪ ನಡೆದಿದ್ದು, ಎಲ್ಲವೂ ಬಗೆಹರಿದಿದೆ. ಈ ಬೆನ್ನಲ್ಲೇ ಇದೀಗ ಜಗ್ಗೇಶ್ ಅವರು ವಿಮರ್ಶಾತ್ಮಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದು ಹರಿಬಿಟ್ಟಿದ್ದಾರೆ.

Published: 02nd March 2021 01:36 PM  |   Last Updated: 02nd March 2021 01:53 PM   |  A+A-


ಜಗ್ಗೇಶ್

Posted By : Raghavendra Adiga
Source : UNI

ಇತ್ತೀಚೆಗೆ ದರ್ಶನ್ ಅಭಿಮಾನಿಗಳು ಹಾಗೂ ಸ್ಯಾಂಡಲ್ ವುಡ್ ನ ನವರಸನಾಯಕ ಜಗ್ಗೇಶ್ ಅವರ ಮಧ್ಯೆ ಸಣ್ಣ ಮನಸ್ತಾಪ ನಡೆದಿದ್ದು, ಎಲ್ಲವೂ ಬಗೆಹರಿದಿದೆ. ಈ ಬೆನ್ನಲ್ಲೇ ಇದೀಗ ಜಗ್ಗೇಶ್ ಅವರು ವಿಮರ್ಶಾತ್ಮಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದು ಹರಿಬಿಟ್ಟಿದ್ದಾರೆ .

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟ ಜಗ್ಗೇಶ್‍, ಬದುಕಿನ ಪಯಣದಲ್ಲಿ ಯಾರೂ ಶತ್ರುಗಳಲ್ಲ,ಮ ಮಿತ್ರರೂ ಅಲ್ಲ. ಜೀವನದಲ್ಲಿ ಎಲ್ಲರೂ ಉತ್ತಮ ಪ್ರಯಾಣಿಕ ಆಗುವುದಿಲ್ಲ, ತಾವು ನಡೆದು ಹೋಗುವ ಹಾದಿಯಲ್ಲಿ ಸ್ನೇಹಿತರು, ಶತ್ರುಗಳು, ಹಿರಿಯರು, ಕಿರಿಯರು ಎಲ್ಲರೂ ಸಿಗುತ್ತಾರೆ. ಅವರನ್ನು ಹೇಗೆ ನಿಭಾಯಿಸಿಕೊಂಡು ಹೋಗುತ್ತಾನೆ ಎನ್ನುವುದು 'ಅವನೊಬ್ಬ ಉತ್ತಮ ಪ್ರಯಾಣಿಕ' ಎಂದು ನಿರ್ಧರಿಸುತ್ತದೆ ಎಂದಿದ್ದಾರೆ.

ಇನ್ ಸ್ಟಾಗ್ರಾಮ್ ನಲ್ಲಿ ಈ ಕುರಿತು ಜಗ್ಗೇಶ್ ಬರೆದುಕೊಂಡಿದ್ದು, ''ವಿಶ್ವ ಎಂಬ ಚಲಿಸುವ ಗಾಡಿಯಲ್ಲಿ ಮನುಕುಲದ ಸಮಸ್ತರು ಪ್ರಯಾಣಿಕರು! ಈ ಪ್ರಯಾಣದಲ್ಲಿ ಯಾರು ಸ್ನೇಹಿತರಲ್ಲ! ಯಾರು ಶತ್ರುಗಳು ಅಲ್ಲ! ಕೆಲವರು ನಗುತ್ತ ಮಾತಾಡಿಸುತ್ತಾರೆ! ಕೆಲವರು ನೋಡಿಯೂ ನೋಡದಂತೆ ಅವರ ಬಗ್ಗೆ ಮಾತ್ರ ಚಿಂತಿಸಿ ಅನ್ಯರ ತಳ್ಳಿ ಜಾಗ ಹಿಡಿದು ಕೂರುತ್ತಾರೆ! ಕೆಲವರು ತಮ್ಮ ಸಂತೋಷಕ್ಕಾಗಿ ಜೋರಾಗಿ ಕೂಗಾಡುತ್ತಾ ಆನಂದಿಸಿ ಅನ್ಯರಿಗೆ ನೋವುಂಟು ಮಾಡುತ್ತಾರೆ! ಕೆಲವರು ತಮ್ಮ ಸಂತೋಷ ನೆಮ್ಮದಿಗಾಗಿ ಅನ್ಯರ ಬೈಯುತ್ತ ಗೆದ್ದಂತೆ ಬೀಗಿ ಪ್ರಯಾಣಿಸುತ್ತಾರೆ! 

"ಕೆಲವರು ಗುರು ಹಿರಿಯರ ಕಂಡಕ್ಷಣ ಅವರ ಆಸನ ಹಿರಿಯರಿಗೆ ಬಿಟ್ಟುಕೊಟ್ಟು ಸಾರ್ಥಕ ಭಾವದಿಂದ ಪ್ರಯಾಣ ಆನಂದಿಸುತ್ತಾರೆ! ಕೆಲವರು ಪ್ರಯಾಣದಲ್ಲಿ ಸಣ್ಣ ಚಿಲ್ಲರೆ ಗಲಾಟೆಯಿಂದ ಹಲ್ಲೆ ಕೊಲೆಯವರೆಗೂ ಹೋಗಿ ಸಾಮರಸ್ಯ ಹಾಳು ಮಾಡಿ ಅವರೂ ಹಾಳಾಗುತ್ತಾರೆ! ಅದರಲ್ಲಿ ಕೆಲವರು ಮಾತ್ರ ಈ ಪ್ರಯಾಣ ಜಂಜಾಟ ಗಮನಿಸದೆ ತಮ್ಮಲ್ಲೆ ತಾವು ಲೀನವಾಗಿ ಕೆಸರಂತ ಈ ಪ್ರಯಾಣದಲ್ಲಿ ಅದಕ್ಕಂಟದೆ ತಾವರೆ ಹೂವಿನಂತೆ ಮೇಲೆಬಂದು ಪ್ರಯಾಣ ಆನಂದವಾಗಿ ಮುಗಿಸಿದ ಮೇಲೆಯು ಮನಸಲ್ಲಿ ಉಳಿಯುತ್ತಾರೆ "ಎಂದಿದ್ದಾರೆ.

ಅಲ್ಲದೆ "ಇದನ್ನು ಹೇಳಲುಕಾರಣ ಈ ಬದುಕಿನ ಪ್ರಯಾಣದ ಪ್ರಕ್ರಿಯೆ ಕೂಡಿಕಳೆದಾಗ ಉಳಿವುದು ಒಂದೆ "ಸತ್ ಚಿತ್ ಆನಂದ "ಸಚ್ಚಿದಾನಂದ ರೂಪ! ಅದು ಶಿವನ ಆನಂದ ಸ್ಥಿತಿ!ಇದ ಅರಿತು ಜೀವನ ಪ್ರಯಾಣ ಮಾಡಿದವ ಮಾತ್ರ ಉತ್ತಮ ಪ್ರಯಾಣಿಕ! ಇದರಲ್ಲಿ ನೀವು ಯಾವ ರೀತಿ ಪ್ರಯಾಣಿಕರು ಚಿಂತಿಸಿ ಬದುಕಿನ ಪ್ರಯಾಣಮಾಡಿ" ಎಂದು ಬರೆದಿದ್ದಾರೆ.
 

 
 
 
 
 
 
 
 
 
 
 
 
 
 
 

A post shared by

Stay up to date on all the latest ಸಿನಿಮಾ ಸುದ್ದಿ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp