ಮಾರ್ಚ್ 18ಕ್ಕೆ 'ಮುಂದುವರೆದ ಅಧ್ಯಾಯ' ಬಿಡುಗಡೆ!

ಬಹುಸಮಯದ ಬಳಿಕ ನಟ ಆದಿತ್ಯ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಮುಂದುವರೆದ ಅಧ್ಯಾಯ ಚಿತ್ರ ಮಾರ್ಚ್ 18ರಂದು ಬಿಡುಗಡೆಯಾಗಲಿದೆ.

Published: 03rd March 2021 11:06 AM  |   Last Updated: 03rd March 2021 12:47 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬಹುಸಮಯದ ಬಳಿಕ ನಟ ಆದಿತ್ಯ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ 'ಮುಂದುವರೆದ ಅಧ್ಯಾಯ' ಚಿತ್ರ ಮಾರ್ಚ್ 18ರಂದು ಬಿಡುಗಡೆಯಾಗಲಿದೆ.

ಕ್ರೈಂ ಥ್ರಿಲ್ಲರ್ ಚಿತ್ರವಾಗಿರುವ 'ಮುಂದುವರೆದ ಅಧ್ಯಾಯ' ಚಿತ್ರದಲ್ಲಿ ಆದಿತ್ಯ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರವು ನಮ್ಮ ಸಮಾಜದಲ್ಲಿ ಕಂಡುಬರುವ ಕೆಲವು ವ್ಯಕ್ತಿತ್ವಗಳಿಗೆ ಕನ್ನಡಿ ಹಿಡಿಯುತ್ತದೆ. ಚಿತ್ರವು ಒಳ್ಳೆಯ ಮತ್ತು ಕೆಟ್ಟದ್ದರ ನಡುವಿನ ಘರ್ಷಣೆಯನ್ನು ಮೇಲ್ಮೈಗೆ ತರಲಿದೆ ಎಂದು ಚಿತ್ರದ ನಿರ್ದೇಶಕ ಬಾಲು ಚಂದ್ರಶೇಖರ್ ಅವರು ಹೇಳಿದ್ದಾರೆ.

ಮುಂದುವರೆದ ಅಧ್ಯಾಯ ಬಾಲು ಚಂದ್ರಶೇಖರ್ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಕಣಜ‌ ಎಂಟರ್ಪ್ರೈಸಸ್ ನಿರ್ಮಾಣದ ಚಿತ್ರದಲ್ಲಿ ಆದಿತ್ಯ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಹಿನ್ನೆಲೆ‌ ಸಂಗೀತ ನೀಡಿದ್ದು, ಜಾನಿ ನಿತಿನ್ ಸಂಗೀತ ಸಂಯೋಜಿಸಿದ್ದಾರೆ.

ಚಿತ್ರಕ್ಕೆ ದಿಲೀಪ್ ಛಾಯಾಗ್ರಹಣವಿದ್ದು, ಚಿತ್ರದಲ್ಲಿ ಮುಖ್ಯಮಂತ್ರಿ ಚಂದ್ರು, ಜೈ ಜಗದೀಶ್, ಸಂದೀಪ್ ಕುಮಾರ್, ಅಜಯ್ ರಾಜ್, ಚಂದನ ಗೌಡ, ಆಶೀಕಾ ಸೋಮಶೇಖರ್, ವಿನಯ್ ಕೃಷ್ಣಸ್ವಾಮಿ, ವಿನೋದ್, ಶೋಭನ್ ಮುಖ್ಯಪಾತ್ರದಲ್ಲಿ ‌ನಟಿಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp