ಸಿನಿಮಾ ರಂಗದಲ್ಲಿ ನನ್ನದೇ ರೀತಿಯಲ್ಲಿ ಗುರುತಿಸಿಕೊಳ್ಳಬೇಕು: ವಿನೋದ್ ಪ್ರಭಾಕರ್

ತಮ್ಮ ನಟನೆ, ಘರ್ಜನೆ, ದೇಹದಾರ್ಡ್ಯತೆ ಹಾಗೂ ವೇದಿಕೆ ಮೇಲೆ ವರ್ತನೆಯಿಂದಾಗಿ ನಟ ವಿನೋದ್ ಪ್ರಭಾಕರ್ ತಮ್ಮ ತಂದೆ ಹಾಗೂ ಸ್ಯಾಂಡಲ್ ವುಡ್ ಹಿರಿಯ ನಟ ಟೈಗರ್ ಪ್ರಭಾಕರ್ ಅವರನ್ನು ನೆನಪಿಸುತ್ತಾರೆ.

Published: 04th March 2021 11:34 AM  |   Last Updated: 04th March 2021 12:49 PM   |  A+A-


Vinod prabhakar

ವಿನೋದ್ ಪ್ರಭಾಕರ್

Posted By : Shilpa D
Source : The New Indian Express

ತಮ್ಮ ನಟನೆ, ಘರ್ಜನೆ, ದೇಹದಾರ್ಡ್ಯತೆ ಹಾಗೂ ವೇದಿಕೆ ಮೇಲೆ ವರ್ತನೆಯಿಂದಾಗಿ ನಟ ವಿನೋದ್ ಪ್ರಭಾಕರ್ ತಮ್ಮ ತಂದೆ ಹಾಗೂ ಸ್ಯಾಂಡಲ್ ವುಡ್ ಹಿರಿಯ ನಟ ಟೈಗರ್ ಪ್ರಭಾಕರ್ ಅವರನ್ನು ನೆನಪಿಸುತ್ತಾರೆ.

ಆ್ಯಕ್ಷನ್ ಆಧಾರಿಕ ಪಾತ್ರ, ಎರಡನೇ ನಾಯಕ ಹಾಗೂ ನೆಗೆಟಿಲ್ ರೋಲ್ ಗಳ ಮೂಲಕ ತಮ್ಮ ಸಿನಿಮಾ ಜರ್ನಿ ಆರಂಭಿಸಿ ನಂತರ ಹೀರೋ ಆಗಿ ನಟಿಸಿದ್ದವರು ಟೈಗರ್ ಪ್ರಭಾಕರ್. ಆದೇ ರೀತಿಯಲ್ಲೇ ವಿನೋದ್ ಪ್ರಭಾಕರ್ ತಮ್ಮ ತಂದೆಯ ಪರಂಪರೆ ಮುಂದುವರಿಸುತ್ತಿದ್ದಾರೆ.

ದರ್ಶನ್ ನಟನೆಯ ರಾಬರ್ಟ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ವಿನೋದ್ ಪ್ರಭಾಕರ್ ಅಭಿನಯಿಸಿದ್ದಾರೆ, ನಾವು ಎಷ್ಟೇ ವಿಭಿನ್ನವಾಗಿ ನಟಿಸಲು ಪ್ರಯತ್ನಿಸಿದರೂ ನಮ್ಮ ಪೋಷಕರ ಜೊತೆಗೆ ಹೋಲಿಕೆ ಮಾಡುವುದನ್ನು ತಡೆಯಲಾಗದು, ಸ್ಟಾರ್ ಮಕ್ಕಳಿಗೆ ಇದೊಂದು ವರವೂ ಹೌದು, ನಮ್ಮಿಂದ ಪ್ರೇಕ್ಷಕರಿಗೆ ಹೆಚ್ಚಿನ ನಿರೀಕ್ಷೆ ಇರುತ್ತದೆ ಎಂದು ಹೇಳಿದ್ದಾರೆ.

ನನ್ನ ನಟನೆಯ ಎಲ್ಲಾ ಕ್ರೆಡಿಟ್ ನನ್ನ ತಂದೆಗೆ ಸಲ್ಲಬೇಕು, ಆದರೆ ಅವರ ನೆರಳಾಗಿರಲು ನನಗೆ ಇಷ್ಟವಿಲ್ಲ, ಸಿನಿಮಾ ರಂಗದಲ್ಲಿ ನಾನು ನನ್ನದೇ ರೀತಿಯಲ್ಲಿ ಗುರುತಿಸಿಕೊಳ್ಳಬೇಕು ಎಂದು ವಿನೋದ್ ಅಭಿಪ್ರಾಯ ಪಟ್ಟಿದ್ದಾರೆ.

ನಟ ದರ್ಶನ್ ಜೊತೆ ವಿನೋದ್ ಪ್ರಭಾಕರ್ ಎರಡನೇ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಈ ಮೊದಲು ನವಗ್ರಹ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು. ಈ ದೊಡ್ಡ ಪ್ರಾಜೆಕ್ಟ್ ನಲ್ಲಿ  ಕೆಲಸ ಮಾಡಲು ನಿರ್ಮಾಪಕ ಉಪಮಾತಿ ನನಗೆ ಅವಕಾಶ ನೀಡಿದ್ದಾರೆ. ಸಿನಿಮಾ ಬಗ್ಗೆ ನಾನು ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದಪ ತಿಳಿಸಿದ್ದಾರೆ.

ಪೋಸ್ಟರ್ ಹೊರತು ಪಡಿಸಿ ಸಿನಿಮಾದಲ್ಲಿ ನನ್ನ ಪಾತ್ರದ ಬಗ್ಗೆ  ನಾನು ಹೆಚ್ಚು ಹೇಳಲು ಆಗುವುದಿಲ್ಲ, ಸಿನಿಮಾದಲ್ಲಿ ಹಲವು ಪ್ರಸಿದ್ದ ಕಲಾವಿದರು ಅಭಿನಯಿಸಿದ್ದಾರೆ. ಅವರೆಲ್ಲರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನಗೆ ತುಂಬಾ ಖುಷಿಕೊಟ್ಟಿದೆ ಎಂದು ವಿವರಿಸಿದ್ದಾರೆ. ನನ್ನ ಮತ್ತೊಂದು ಸಿನಿಮಾ ಲಂಕಾಸುರ ಕೂಡ ಸೆಟ್ಟೇರುತ್ತಿದೆ. ಇದರಲ್ಲಿ ನನ್ನ ಜೊತೆ ಯೋಗೇಶ್ ಕೂಡ ಕೆಲಸ ಮಾಡುತ್ತಿದ್ದಾರೆ ಎಂದು ವಿನೋದ್ ಪ್ರಭಾಕರ್ ತಿಳಿಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp