ಕೋವಿಡ್-19 ಸಂಕಷ್ಟದ ಮಧ್ಯೆ, ಅಗ್ನಿ ದುರ್ಘಟನೆ ಎದುರಿಸಿ ತಯಾರಾದ ಚಿತ್ರ 'ಹೀರೋ': ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ನಾಯಕ ನಟರಾಗಿ ಅಭಿನಯಿಸಿರುವ ಹೀರೋ ಚಿತ್ರ ನಾಳೆ(ಮಾರ್ಚ್ 5) ತೆರೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ಚಿತ್ರ ತಯಾರಿಯ ಸಂದರ್ಭದ ಹಲವು ನೆನಪುಗಳನ್ನು ರಿಷಬ್ ಶೆಟ್ಟಿ ಮಾಡಿಕೊಂಡಿದ್ದಾರೆ.

Published: 04th March 2021 02:15 PM  |   Last Updated: 04th March 2021 02:36 PM   |  A+A-


Rishab Shetty

ರಿಷಬ್ ಶೆಟ್ಟಿ

Posted By : Sumana Upadhyaya
Source : The New Indian Express

ರಿಷಬ್ ಶೆಟ್ಟಿ ನಾಯಕ ನಟರಾಗಿ ಅಭಿನಯಿಸಿರುವ ಹೀರೋ ಚಿತ್ರ ನಾಳೆ(ಮಾರ್ಚ್ 5) ತೆರೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ಚಿತ್ರ ತಯಾರಿಯ ಸಂದರ್ಭದ ಹಲವು ನೆನಪುಗಳನ್ನು ರಿಷಬ್ ಶೆಟ್ಟಿ ಮಾಡಿಕೊಂಡಿದ್ದಾರೆ.

ಭರತ್ ರಾಜ್ ಎಂ ನಿರ್ದೇಶನದ ಚಿತ್ರ ಹೀರೋ ಆಗಿದ್ದು ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಜೀವನದಲ್ಲಿ ನಡೆದ ಘಟನೆಯ ಬಳಿಕ ಹೀರೋ ಆಗಿ ಬದಲಾದ ಬಗ್ಗೆ ಕಥೆ ಹೊಂದಿದೆ. 

ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ ತಮ್ಮ ಕಾಲೇಜು ದಿನಗಳನ್ನು ನೆನಪು ಮಾಡಿಕೊಂಡರು. ಕಾಲೇಜಿನಲ್ಲಿ ನನ್ನ ಎರಡನೇ ವರ್ಷದಲ್ಲಿ, ಬಾಳೆಹಣ್ಣು ಮಾರುವ ಹುಡುಗಿಯೊಬ್ಬರಿಂದ ಹಣವನ್ನು ಕಸಿದುಕೊಂಡ ಕಳ್ಳನನ್ನು ನಾನು ಬೆನ್ನಟ್ಟಿದೆ. ನನ್ನ ಅಕ್ಕನನ್ನು ಬಿಡಲು ಅವಳ ಸ್ಕೂಟಿಯಲ್ಲಿ ಹೋಗುತ್ತಿದ್ದೆ. ನಾನು ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೆ. ಆ ಸಮಯದಲ್ಲಿ ನಾನು ಪೊಲೀಸ್ ಇಲಾಖೆಗೆ ಕೆಲಸಕ್ಕೆ ಸೇರಲು ಬಯಸಿದ್ದೆ. ನಾನು ಜೂಡೋ ಮತ್ತು ಇತರ ಯುದ್ಧ ಕ್ರೀಡೆಗಳಿಗೆ ಸೇರಿದ್ದರಿಂದ, ಕ್ರೀಡಾ ಕೋಟಾ ಮೂಲಕ ಸೇವೆಗೆ ಸೇರಲು ನಾನು ಅರ್ಹನಾಗಿದ್ದೆ. ನನ್ನ ತಂದೆಯ ಸ್ನೇಹಿತರೊಬ್ಬರು ಪರೀಕ್ಷೆಗಳನ್ನು ಬರೆಯುವಂತೆ ನನ್ನನ್ನು ಒತ್ತಾಯಿಸಿದರು. ನಾನು ಈ ಕಳ್ಳನನ್ನು ಹಿಡಿದು ಪೊಲೀಸರನ್ನು ನೋಡಿದಾಗ, ನಾನು ಈಗಾಗಲೇ ಇಲಾಖೆಯಲ್ಲಿದ್ದೇನೆ ಎಂದು ಭಾವಿಸಿದೆ ಎಂದು ಹಿಂದಿನ ಘಟನೆಯನ್ನು ನೆನಪು ಮಾಡಿಕೊಂಡರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನೆಮಾ ಮಾಡುವಾಗ ಮತ್ತೊಂದು ಘಟನೆ ಆಗಿತ್ತಂತೆ. ಸಾಮಾನ್ಯವಾಗಿ ಆರಂಭಗೊಂಡ ಚಿತ್ರ ನಂತರ ಭಿನ್ನ ತಿರುವು ತೆಗೆದುಕೊಂಡಿತು. ನನ್ನ ಮೊದಲ ಚಿತ್ರ ಕಿರಿಕ್ ಪಾರ್ಟಿಗೆ ಸಂಪೂರ್ಣ ವಿಭಿನ್ನವಾದ ಚಿತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೀರೋ ಚಿತ್ರದ ಸಂದರ್ಭದಲ್ಲಿ ನಡೆದ ಬೆಂಕಿ ದುರ್ಘಟನೆ ಬಗ್ಗೆ ಮಾತನಾಡಿದ ಅವರು, ಎಲ್ಲಾ ಮುನ್ನೆಚ್ಚರಿಕೆ ವಹಿಸಿದ್ದರೂ ಕೂಡ ದುರ್ಘಟನೆ ನಡೆಯಿತು. ನನ್ನ ಸಹ ಕಲಾವಿದರು ಮತ್ತು ಚಿತ್ರತಂಡದವರಿಗೆ ಗಾಬರಿಯಾಯಿತು. ಆದರೂ ನಾನು ಆತ್ಮವಿಶ್ವಾಸ ತೆಗೆದುಕೊಂಡು ನಂತರ ಕೆಲಸ ಮಾಡಿದೆ ಎನ್ನುತ್ತಾರೆ.

ಕಳೆದ ವರ್ಷ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಯಾರೂ ಏನನ್ನೂ ಮಾಡದಿದ್ದಾಗ, ನಾವು ಏನನ್ನಾದರೂ ಮಾಡಲು ಉತ್ಸಾಹ ತೋರಿಸಿದೆವು.ಚಿತ್ರ ಬಿಡುಗಡೆಯ ಬಗೆಗಿನ ಅನಿಶ್ಚಿತತೆಗೆ ಸಂಬಂಧಿಸಿದಂತೆ ತಂಡವು ಯಾವುದೇ ತೊಂದರೆಗಳನ್ನು ಅನುಭವಿಸಲಿಲ್ಲ. “ಚಿತ್ರಮಂದಿರಗಳಲ್ಲದಿದ್ದರೆ, ನಮಗೆ ಒಟಿಟಿ ಆಯ್ಕೆ ಅಥವಾ ಯೂಟ್ಯೂಬ್ ಇತ್ತು. ನಮಗೆ ಬೇಕಾಗಿರುವುದು ಸ್ವಲ್ಪ ಮನರಂಜನೆಯನ್ನು ನೀಡುವುದು. ಹೀರೋನಂತೆ ಮತ್ತೊಂದು ಚಿತ್ರ ಮಾಡಲು ಸಾಧ್ಯವಾಗುವುದಿಲ್ಲ ಎಂದು ರಿಷಬ್ ಹೇಳುತ್ತಾರೆ.

ಹೀರೋ ಚಿತ್ರಕ್ಕೆ ವಿಕ್ರಮ್ ಮೊರ್ ಅವರ ಜೊತೆಗೆ ಕೊರಿಯೋಗ್ರಫಿ ಸ್ಟಂಟ್ ಮಾಡಲು ಬಹಳ ಖುಷಿಯಾಯಿತು ಎನ್ನುತ್ತಾರೆ ರಿಷಬ್. ಇದೊಂದು ಆಕ್ಷನ್ ಕಾಮಿಡಿ ಸಾಹಸ ಪ್ರಧಾನ ಚಿತ್ರವಾಗಿದ್ದು ಚಿತ್ರದಲ್ಲಿ ರಕ್ತಪಾತದ ದೃಶ್ಯವಿದೆಯಂತೆ. 


Stay up to date on all the latest ಸಿನಿಮಾ ಸುದ್ದಿ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp