ಮಾರ್ಚ್ 11ಕ್ಕೆ ‘ರಾಬರ್ಟ್’ ರಿಲೀಸ್: ದಾಖಲೆ ಬೆಲೆಗೆ ವಿತರಣೆ ಹಕ್ಕು ಮಾರಾಟ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ತೆರೆಕಾಣಲಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದ್ದು, ಭಾರಿ ನಿರೀಕ್ಷೆ ಹುಟ್ಟಿಸಿದೆ.
Published: 05th March 2021 06:56 PM | Last Updated: 05th March 2021 06:56 PM | A+A A-

ರಾಬರ್ಟ್ ಪೋಸ್ಟರ್
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ತೆರೆಕಾಣಲಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದ್ದು, ಭಾರಿ ನಿರೀಕ್ಷೆ ಹುಟ್ಟಿಸಿದೆ.
ರಿಲೀಸ್ಗೂ ಮೊದಲೇ ಹೈಪ್ ಕ್ರಿಯೇಟ್ ಮಾಡಿರುವ ರಾಬರ್ಟ್ ಸಿನಿಮಾದ ಕಲೆಕ್ಷನ್ ಕುರಿತು ಬಹಳ ಲೆಕ್ಕಾಚಾರ ನಡೆಯುತ್ತಿದ್ದು, ಅತಿ ಹೆಚ್ಚು ಗಳಿಕೆ ಕಾಣಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಲ್ಲದೆ, ರಾಬರ್ಟ್ ಚಿತ್ರದ ವಿತರಣೆ ಹಕ್ಕು ದಾಖಲೆ ಬೆಲೆ ಮಾರಾಟವಾಗಿದೆ ಸಿನಿಮಾದ ಕರ್ನಾಟಕ ವಿತರಣೆ ಹಕ್ಕು ಬರೋಬ್ಬರಿ 78 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎಂಬ ವಿಚಾರ ಹೊರಬಿದ್ದಿದೆ.
ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಕರಾವಳಿ ಹಾಗೂ ಮೈಸೂರು ಕರ್ನಾಟಕ ಸೇರಿದಂತೆ ವಿಶಾಲ ಕರ್ನಾಟಕದ ವಿತರಣೆ ಹಕ್ಕು 78 ಕೋಟಿ ಆಗಿದೆ ಎನ್ನಲಾಗುತ್ತಿದ್ದು, ಉಮಾಪತಿ ಫಿಲಂಸ್, ಶ್ರೀ ಭವಾನಿ ಆರ್ಟ್ಸ್, ಮೆಹಲ್ ಫಿಲಂಸ್ ವಿಶಾಲ ಕರ್ನಾಟಕಕ್ಕೆ ರಾಬರ್ಟ್ ಚಿತ್ರವನ್ನು ಹಂಚಿಕೆ ಮಾಡುತ್ತಿದ್ದಾರೆ.