ದರ್ಶನ್ ಫ್ಯಾನ್ಸ್ ಗೆ ಗುಡ್ ನ್ಯೂಸ್: 'ಗೋಲ್ಡನ್ ರಿಂಗ್' ಸಿನಿಮಾದಲ್ಲಿ ನೌಕಾಧಿಕಾರಿ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್!

ರಾಬರ್ಟ್' ಚಿತ್ರದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್  ತಮ್ಮ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.

Published: 06th March 2021 01:03 PM  |   Last Updated: 06th March 2021 01:26 PM   |  A+A-


Darshan

ದರ್ಶನ್

Posted By : Shilpa D
Source : The New Indian Express

ರಾಬರ್ಟ್' ಚಿತ್ರದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್  ತಮ್ಮ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕನ್ನಡದ ಹೆಸರಾಂತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಜೊತೆಗೆ ದರ್ಶನ್ ಹೊಸ ಸಿನಿಮಾ ಮಾಡುತ್ತಿದ್ದಾರೆ. 

'ರಾಜವೀರ ಮದಕರಿ ನಾಯಕ' ಚಿತ್ರದ ಜೊತೆಗೆ ಹೊಸ ಪ್ರಾಜೆಕ್ಟ್ ಗೆ ರಾಕ್ ಲೈನ್ ವೆಂಕಟೇಶ್ ಮತ್ತು ದರ್ಶನ್ ಒಂದಾಗಿದ್ದಾರೆ. ದರ್ಶನ್ ನೀಡಿದ ಕಥಾ ಹಂದರದ ಮೇಲೆ ಸಿನಿಮಾ ಕಥೆ ತಯಾರಾಗುತ್ತಿದ್ದು, ಚಿತ್ರಕ್ಕೆ ಗೋಲ್ಡನ್ ರಿಂಗ್ ಎಂದು ಹೆಸರಿಡಲಾಗಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ರಾಕ್ ಲೈನ್ ವೆಂಕಟೇಶ್ ಮತ್ತು ದರ್ಶನ್ ಕಾಂಬಿನೇಶನ್ ನ ಚಿತ್ರ ಸೆಟ್ಟೇರಲಿದೆ.

'ಗೋಲ್ಡನ್ ರಿಂಗ್' ಹೆಸರು ಕೇಳಿದ ಕೂಡಲೆ ದರ್ಶನ್ ಅಭಿಮಾನಿಗಳ ಕುತೂಹಲ ಹೆಚ್ಚಾಗಬಹುದು. ಕಥೆಗೆ ಪೂರಕವಾಗಿರುವುದರಿಂದ ಈ ಟೈಟಲ್ ಇಟ್ಟಿದ್ದೇವೆ ಅಂತ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ. ದರ್ಶನ್ ಅಭಿಮಾನಿಗಳಿಗೆ ವಿಭಿನ್ನ ರೀತಿಯ ಸಿನಿಮಾ ನೀಡಲು ರಾಕ್ ಲೈನ್ ವೆಂಕಟೇಶ್ ಸಜ್ಜಾಗಿದ್ದಾರೆ.

ನಾವು ರಾಜ ವೀರ ಮಡಕರಿ ನಾಯಕನ ಕೆಲವು ಭಾಗಗಳನ್ನು ಚಿತ್ರೀಕರಿಸಿದ್ದೇವೆ, ಆದರೆ ಪ್ರಸ್ತುತ ಕೋವಿಡ್ ಪರಿಸ್ಥಿತಿಯಿಂದಾಗಿ, ಸೆಟ್‌ಗಳಲ್ಲಿ 300-400 ಜನರನ್ನು ಒಟ್ಟುಗೂಡಿಸುವುದು ನಮಗೆ ಕಷ್ಟಕರವಾಗುತ್ತದೆ ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.

ಸದ್ಯಕ್ಕೆ ವೀರ ಮದಕರಿ ನಾಯಕ ಶೂಟಿಂಗ್ ಮೂಂದೂಡಲಾಗಿದ್ದು,  ಗೋಲ್ಡನ್ ರಿಂಗ್ ಸಿನಿಮಾ ಚಿತ್ರೀಕರಣ ಆರಂಭಿಸಲಾಗುವುದು ಎಂದು ರಾಕ್ ಲೈನ್ ವೆಂಕಟೇಶ್ ತಿಳಿಸಿದ್ದಾರೆ, ಚಿತ್ರದ ನಿರ್ದೇಶಕರು, ತಾರಾಬಳಗ ಮತ್ತು ತಂತ್ರಜ್ಞ ವರ್ಗದ ಆಯ್ಕೆ ಪ್ರಕ್ರಿಯೆಯಲ್ಲಿ ರಾಕ್ ಲೈನ್ ವೆಂಕಟೇಶ್ ತೊಡಗಿದ್ದಾರೆ. ಸದ್ಯದಲ್ಲೇ ಚಿತ್ರದ ನಿರ್ದೇಶಕರು ಹಾಗೂ ಪ್ರಮುಖ ತಾರಾಬಳಗದ ಕುರಿತು ರಾಕ್ ಲೈನ್ ವೆಂಕಟೇಶ್ ಅನೌನ್ಸ್ ಮಾಡಲಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp