ಸಾಲದ ಸುಳಿಯಲ್ಲಿ ದ್ವಾರಕೀಶ್: 'ಕುಳ್ಳ' ನ ಪ್ರೀತಿಯ ಬಂಗಲೆ ರಿಷಬ್ ಶೆಟ್ಟಿ ಪಾಲು

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ಅವರು ತಮ್ಮ ಎಚ್‌ಎಸ್‌ಆರ್‌ ಲೇಔಟ್‌ನ ಮನೆಯನ್ನು ಮಾರಾಟ ಮಾರಿದ್ದು, ಅದನ್ನು ನಿರ್ದೇಶಕ ರಿಷಬ್‌ ಶೆಟ್ಟಿ ಖರೀದಿಸಿದ್ದಾರೆ.

Published: 06th March 2021 09:00 AM  |   Last Updated: 06th March 2021 04:12 PM   |  A+A-


Dwarakish

ದ್ವಾರಕೀಶ್

Posted By : Shilpa D
Source : Online Desk

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ಅವರು ತಮ್ಮ ಎಚ್‌ಎಸ್‌ಆರ್‌ ಲೇಔಟ್‌ನ ಮನೆಯನ್ನು ಮಾರಾಟ ಮಾರಿದ್ದು, ಅದನ್ನು ನಿರ್ದೇಶಕ ರಿಷಬ್‌ ಶೆಟ್ಟಿ ಖರೀದಿಸಿದ್ದಾರೆ.

52 ವರ್ಷಗಳಲ್ಲಿ 52 ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ದ್ವಾರಕೀಶ್ ಅವರದ್ದು. ಸುದೀರ್ಘ ಅವಧಿಯಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಿಸಿರುವ ದ್ವಾರಕೀಶ್ ಈ ಇಳಿ ವಯಸ್ಸಿನಲ್ಲಿ ಮನೆಯನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ ಎನ್ನಲಾಗಿದೆ. 

ವಿಶೇಷ ಎಂದರೆ ದ್ವಾರಕೀಶ್ ಅವರ ಬಂಗಲೆಯನ್ನು ಸ್ಯಾಂಡಲ್ ವುಡ್ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ನಟ ಮತ್ತು ನಿರ್ದೇಶಕ ರಿಷಬ್ ಹತ್ತೂವರೆ ಕೋಟಿ ಕೊಟ್ಟು ಮನೆಯನ್ನು ತನ್ನದಾಗಿಸಿಕೊಂಡಿದ್ದಾರಂತೆ.

ಎಚ್ ಎಸ್ ಆರ್ ಲೇಔಟ್ ನ ಮನೆಯನ್ನು 10.5 ಕೋಟಿ ರೂ. ಮಾರಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ದ್ವಾರಕೀಶ್‌ ನಿರ್ಮಾಣದಲ್ಲಿ ಬಂದ  ಆಯುಷ್ಮಾನ್‌ಭವ ಚಿತ್ರ ದೊಡ್ಡ ಯಶಸ್ಸು ಕಾಣಲಿಲ್ಲ. ಇದರಿಂದ ದ್ವಾರಕೀಶ್‌ ಪುತ್ರ ಯೋಗಿ ಸಾಲದ ಸುಳಿಗೆ ಸಿಲುಕಿದ್ದು ಅದರಿಂದ ಹೊರಬರಲು ಮನೆ ಮಾರಾಟ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.


Stay up to date on all the latest ಸಿನಿಮಾ ಸುದ್ದಿ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp