ರಾಧಿಕಾ ಪಂಡಿತ್ ಜನ್ಮದಿನಾಚರಣೆ: ಸಂಭ್ರಮಾಚರಣೆಗೆ ಮನೆ ಬಳಿ ಬಾರದಂತೆ ಕರೆ ನೀಡಿದ್ದಕ್ಕೆ ಅಭಿಮಾನಿಯ ಖಡಕ್ ಪ್ರಶ್ನೆ...

ನಟಿ ರಾಧಿಕಾ ಪಂಡಿತ್ ಗೆ 38 ನೇ ಜನ್ಮದಿನದ ಸಂಭ್ರಮ. ಹುಟ್ಟು ಹಬ್ಬ ಆಚರಣೆಯ ಅಂಗವಾಗಿ ಅಭಿಮಾನಿಗಳಿಗೆ ಕರೆ ನೀಡಿದ್ದ ರಾಧಿಕಾ ಪಂಡಿತ್, ತಮ್ಮ ಜನ್ಮದಿನವನ್ನು ಆಚರಣೆ ಮಾಡಲು ಮನೆ ಬಳಿ ಬರಬೇಡಿ ಎಂದು ಅಭಿಮಾನಿಗಳಲ್ಲಿ ವಿನಮ್ರ ಮನವಿ ಮಾಡಿದ್ದರು.

Published: 07th March 2021 04:29 PM  |   Last Updated: 08th March 2021 01:19 PM   |  A+A-

Radhika Pandit Birthday celebration and Yash

ರಾಧಿಕಾ ಪಂಡಿತ್ ಜನ್ಮದಿನಾಚರಣೆ: ಸಂಭ್ರಮಾಚರಣೆಗೆ ಮನೆ ಬಳಿ ಬಾರದಂತೆ ಕರೆ ನೀಡಿದ್ದಕ್ಕೆ ಅಭಿಮಾನಿಯ ಖಡಕ್ ಪ್ರಶ್ನೆ...

Posted By : Srinivas Rao BV
Source : Online Desk

ನಟಿ ರಾಧಿಕಾ ಪಂಡಿತ್ ಗೆ 38 ನೇ ಜನ್ಮದಿನದ ಸಂಭ್ರಮ. ಹುಟ್ಟು ಹಬ್ಬ ಆಚರಣೆಯ ಅಂಗವಾಗಿ ಅಭಿಮಾನಿಗಳಿಗೆ ಕರೆ ನೀಡಿದ್ದ ರಾಧಿಕಾ ಪಂಡಿತ್, ತಮ್ಮ ಜನ್ಮದಿನವನ್ನು ಆಚರಣೆ ಮಾಡಲು ಮನೆ ಬಳಿ ಬರಬೇಡಿ ಎಂದು ಅಭಿಮಾನಿಗಳಲ್ಲಿ ವಿನಮ್ರ ಮನವಿ ಮಾಡಿದ್ದರು.
 
ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದ ನಟಿ ರಾಧಿಕಾ ಪಂಡಿತ್, "ನಮಸ್ಕಾರ ಎಲ್ಲರಿಗೂ, ಪ್ರತಿ ವರ್ಷ ಬೇರೆ ಜಾಗಗಳಿಂದ ಬೇರೆ ಊರಿನಿಂದ ನನ್ನ ಹುಟ್ಟಿದ ಹಬ್ಬ ಆಚರಣೆ ಮಾಡಲು ಭೇಟಿ ಮಾಡಲು ಬರುತ್ತಿದ್ದೀರಿ. ಕಳೆದ 2 ವರ್ಷಗಳಿಂದ ಇದು ಸಾಧ್ಯವಾಗಲಿಲ್ಲ. ಕೊರೋನಾ ಎಲ್ಲೆಡೆ ಇರುವುದರಿಂದ ನಮ್ಮ ನಿಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ನಿಮ್ಮನ್ನು ಭೇಟಿ ಮಾಡಾಲು ಸಾಧ್ಯವಾಗುತ್ತಿಲ್ಲವೆಂದು ತುಂಬಾ ಕಾಡುತ್ತಿದೆ. ಈ ಬಾರಿ ಯಾವುದೇ ಆಚರಣೆ ಮನೆಯ ಬಳಿ ಇರುವುದಿಲ್ಲ. ದಯವಿಟ್ಟು ಯಾರೂ ಬೇಜಾರಾಗಬೇಡಿ. ಆದರೂ ನಿಮ್ಮ ಎಲ್ಲಾ ಸೋಷಿಯಲ್ ಮೀಡಿಯಾ ಮೆಸೇಜ್ ನೋಡುತ್ತಿದ್ದೇನೆ. ಸಾಧ್ಯವಾದಷ್ಟು ಪ್ರತಿಕ್ರಿಯೆ ನೀಡುತ್ತೇನೆ. ಮತ್ತು ಎಲ್ಲಾ ಪ್ರೀತಿಗೂ ಧನ್ಯವಾದ ಹೇಳಲು ಇಷ್ಟಪಡುತ್ತೇನೆ ಎಂದು ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಕರೆ ನೀಡಿದ್ದರು. 

ಹಲವು ಅಭಿಮಾನಿಗಳು ರಾಧಿಕಾ ಪಂಡಿತ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕವೇ ಜನ್ಮದಿನದ ಶುಭಾಶಯ ಕೋರುತ್ತಿದ್ದರೆ, ಓರ್ವ ವ್ಯಕ್ತಿ ಮಾತ್ರ, ಎಲ್ಲಾ ಸೆಲೆಬ್ರಿಟಿಗಳೂ ಇದೇ ಮಾತು ಹೇಳುತ್ತೀರ. ಮತ್ತೆ ಸಿನಿಮಾನ ಯಾಕೆ ಬಿಡುಗಡೆ ಮಾಡುತ್ತೀರಾ? ಅದು ಮಾತ್ರ ನಮ್ಮ ಆರೋಗ್ಯದ ದೃಷ್ಟಿಯಲ್ಲಿ ಇಲ್ವಾ? ಅಭಿಮಾನಿ ಮೇಡಂ ಅರ್ಥ ಮಾಡಿಕೊಳ್ಳಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಪೋಸ್ಟ್ ಹಾಗೂ ಪೋಸ್ಟ್ ಗೆ ಬಂದಿರುವ ಕಾಮೆಂಟ್ ಈಗ ವೈರಲ್ ಆಗತೊಡಗಿದೆ. 

Stay up to date on all the latest ಸಿನಿಮಾ ಸುದ್ದಿ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?

Result
ಹೌದು
ಇಲ್ಲ
flipboard facebook twitter whatsapp