ಕನ್ನಡದಲ್ಲಿ ಒಂದೇ ಬಾರಿಗೆ 12 ಚಿತ್ರಗಳ ಆರಂಭ, ಶೀರ್ಷಿಕೆ ಅನಾವರಣ!

ಸಿನಿಮಾವೊಂದನ್ನು ಆರಂಭಿಸಿ ಅದನ್ನು ತೆರೆಗೆ ತರುವುದು ಕಷ್ಟದ ಕೆಲಸ ಅನ್ನೋದು ಬಹುತೇಕರ ಅಭಿಪ್ರಾಯ. ಕನ್ನಡ ಚಿತ್ರರಂಗ ಕೊರೋನಾ ಸಮಸ್ಯೆಯಿಂದ ನಿಧಾನವಾಗಿ ಹೊರಬರುತ್ತಿದ್ದು,...

Published: 08th March 2021 05:33 PM  |   Last Updated: 08th March 2021 05:33 PM   |  A+A-


12-films

ಅಜಯ್ ಡೈರೆಕ್ಟರ್ ಸರ್ಕಲ್

Posted By : Lingaraj Badiger
Source : UNI

ಬೆಂಗಳೂರು: ಸಿನಿಮಾವೊಂದನ್ನು ಆರಂಭಿಸಿ ಅದನ್ನು ತೆರೆಗೆ ತರುವುದು ಕಷ್ಟದ ಕೆಲಸ ಅನ್ನೋದು ಬಹುತೇಕರ ಅಭಿಪ್ರಾಯ. ಕನ್ನಡ ಚಿತ್ರರಂಗ ಕೊರೋನಾ ಸಮಸ್ಯೆಯಿಂದ ನಿಧಾನವಾಗಿ ಹೊರಬರುತ್ತಿದ್ದು, ಸಿನಿಮಾ ಆರಂಭಿಸಲು ನಿರ್ಮಾಪಕರು ಹಿಂದುಮುಂದು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ನಿರ್ದೇಶಕ ಅಜಯ್ ಕುಮಾರ್ 12 ಸಿನಿಮಾಗಳನ್ನು ಒಂದೇ ಸಲಕ್ಕೆ ಆರಂಭಿಸುತ್ತಿದ್ದಾರೆ.

ಅಜಯ್ ಡೈರೆಕ್ಟರ್ ಸರ್ಕಲ್ ಹೆಸರಿನ ತಂಡವನ್ನು ಕಟ್ಟಿಕೊಂಡು ತಾವೂ ನಿರ್ದೇಶನ, ನಿರ್ಮಾಣದೊಂದಿಗೆ ಇತರೆ ಯುವ ನಿರ್ದೇಶಕ, ನಿರ್ದೇಶಕಿಯರಿಗೂ ಅವಕಾಶ ಮಾಡಿಕೊಟ್ಟಿದ್ದಾರೆ.

ʻನೀವು ಸಿನಿಮಾ ಮಾಡಿದಾಗ ಹೇಳಿ ನಿಮ್ಮೊಂದಿಗೆ ನಾವೂ ಕೈ ಜೋಡಿಸುತ್ತೇವೆʼ ಅಂದಿದ್ದವರನ್ನೆಲ್ಲಾ ಕರೆತಂದು ಅವರಿಂದ ಒಂದೊಂದು ಸಿನಿಮಾಗಳನ್ನು ನಿರ್ಮಾಣ ಮಾಡಿಸುತ್ತಿದ್ದಾರೆ.

ಈ ಹನ್ನೆರಡು ಸಿನಿಮಾಗಳ ಮುಹೂರ್ತ ಸಮಾರಂಭ ಇಷ್ಟರಲ್ಲೇ ಜರುಗಲಿದ್ದು, ಸದ್ಯ ಈ ಚಿತ್ರಗಳ ಟೈಟಲ್ ಲಾಂಚ್ ಕಾರ್ಯಕ್ರಮ ನೆರವೇರಿದೆ. 

ಅಜಯ್ ಕುಮಾರ್ ಎಜೆ ಕಲಾನಿರ್ದೇಶನ, ಸಂಕಲನ, ಸಂಗೀತ, ಕಥೆ ಚಿತ್ರಕತೆ, ಜೊತೆಗೆ ನಿರ್ಮಾಣ- ನಿರ್ದೇಶನ ಮಾಡುತ್ತಿರುವ ಪ್ರೇಮಂ ಶರಣಂ ಗಚ್ಚಾಮಿ, ಡ್ರಗ್ ಪೆಡ್ಲರ್, ಶ್ರೀ ಯೋಗ ಮಕರಂದ ನಿರ್ಮಾಣದ ಶ್ರೀ ರಾಮ ಸಿದ್ಧಿ, ಲಾಕ್ ಡೌನ್, ಚೆನ್ನಬಸವ ನಿರ್ಮಾಣ, ನವ್ಯಶ್ರೀ ಎಸ್ ನಿರ್ದೇಶನದ ಮಂದಾರ, ಕುಚೇಲ ನಿರ್ಮಾಣ, ಕಂಕಣವಾಡಿ ಬಸವರಾಜು ನಿರ್ದೇಶನದ ಠಕ್ಕ, ಮಂಜುನಾಥ್ ಆರ್ ಜಿ ನಿರ್ಮಾಣದಲ್ಲಿ, ಅಶ್ವಿನಿ ಎಕೆ ನಿರ್ದೇಶನದ ದೇವರ ಮಕ್ಕಳು, ಡಾ. ದೇವನಹಳ್ಳಿ ದೇವರಾಜ್ ನಿರ್ಮಾಣ ಮತ್ತು ನಿರ್ದೇಶನದ ಆಂಡ್ರಾಯ್ಡ್ ಫೋನ್, ನೆಲಮನೆ ರಾಘವೇಂದ್ರ ನಿರ್ಮಾಣದಲ್ಲಿ, ವನಿತ ನಿರ್ದೇಶಿಸಲಿರುವ ರಕ್ತಾಕ್ಷಿ, ಲಕ್ಷ್ಮಿ ಸಿ ನಿರ್ಮಾಣ, ಶಿವಸಾಹಿತ್ಯ ನಿರ್ದೇಶನದಲ್ಲಿ ʻಸಂಧ್ಯಾರಾಗʼ, ಶಫಿ ಹೆಬ್ಬಾಳ ನಿರ್ಮಾಣದ, ತನುಶ್ರೀ ಬಿವಿ ನಿರ್ದೇಶನದ ಲವ್ ಯು ಚಿನ್ನ, ಶಿವರಾಜ್ ಕುಮಾರ್ ಎನ್ ಎಸ್ ನಿರ್ಮಾಣದಲ್ಲಿ, ದಿನೇಶ್ ಉಂಡವಾಡಿ ನಿರ್ದೇಶಿಸಲಿರುವ ವ್ಯಾಕ್ಸಿನ್ – ಇವಿಷ್ಟೂ ಅಜಯ್ ಡೈರೆಕ್ಟರ್ ಸರ್ಕಲ್ ತಂಡ ಅನಾವರಣಗೊಳಿಸಿರುವವ ಶೀರ್ಷಿಕೆಗಳು. ಬಹುತೇಕ ಸಿನಿಮಾಗಳಿಗೆ ಗುಂಡ್ಳುಪೇಟೆ ಸುರೇಶ್ ಛಾಯಾಗ್ರಹಣ ಮಾಡುತ್ತಿದ್ದಾರೆ.

ಎಲ್ಲ ಹನ್ನೆರಡೂ ಸಿನಿಮಾಗೆ ಸ್ವತಃ ಅಜಯ್ ಕುಮಾರ್ ಅವರೇ ಕತೆ ಬರೆದಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಹುಟ್ಟಿಕೊಂಡ ಕತೆಗಳು ಇವು. ತಲೆಯಲ್ಲಿ ಇದ್ದ ಐಡಿಯಾಗಳೆಲ್ಲಾ ಲಾಕ್ ಡೌನ್ ಸಮಯದಲ್ಲಿ ಅಕ್ಷರರೂಪಕ್ಕಿಳಿಯಿತು. ನಾನು ಈ ಹಿಂದೆ ನಿರ್ದೇಶಿಸಿದ್ದ ಎರಡು ಚಿತ್ರಗಳಿಗೆ ಸಹಾಯಕರಾಗಿ ನನ್ನೊಂದಿಗಿದ್ದ ಪ್ರತಿಭಾವಂತರಿಗೆ ಇಲ್ಲಿ ಸಿನಿಮಾ ನಿರ್ದೇಶನ ಮಾಡುವ ಅವಕಾಶ ಕೊಡಿಸಿದ್ದೇನೆ. ನಿರ್ಮಾಪಕರನ್ನು ಒಪ್ಪಿಸಿ ಸಿನಿಮಾ ಮಾಡುವುದು ಎಷ್ಟು ಕಷ್ಟದ ಕೆಲಸ ಅನ್ನೋದನ್ನು ನಾನು ಬಲ್ಲೆ. ಹೀಗಾಗಿ ನನ್ನ ತಂಡದ ಎಲ್ಲರೂ ಕ್ರಿಯಾಶೀಲತೆಗಷ್ಟೇ ಒತ್ತು ಕೊಟ್ಟು ನಿರ್ದೇಶನ ಮಾಡಲಿ ಎನ್ನುವ ಉದ್ದೇಶ ನನ್ನದುʼʼ ಎಂದು ಅಜಯ್ ಕುಮಾರ್ ಹೇಳಿದ್ದಾರೆ.

ಅಜಯ್‌ ಕುಮಾರ್‌ ಅವರು ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವ ಅಪರೂಪದ ಪ್ರತಿಭೆ. ರಂಗಭೂಮಿಯ ಹಲವಾರು ಹೆಸರಾಂತ ನಾಟಕಗಳಲ್ಲಿ ಅಜಯ್‌ ಅಭಿನಯಿಸಿದ್ದಾರೆ. ಅವರ ಪ್ರತಿಭೆಯ ಜೊತೆ ಶ್ರಮವನ್ನು ಸೇರಿಸಿ ದುಡಿಯುವ ಕೆಲಸಗಾರ. ರಂಗಭೂಮಿಯಲ್ಲಿ ಇವರ ಸಾಧನೆಯನ್ನು ತುಂಬಾ ಹತ್ತಿರದಿಂದ ಕಂಡಿದ್ದೇನೆ. ಚಿತ್ರರಂಗದಲ್ಲೂ ಅಜಯ್‌ ಹೆಸರು ಮಾಡಲಿ ಎಂದು ಹಿರಿಯ ಕಲಾ ನಿರ್ದೇಶಕ ಶಶಿಧರ ಅಡಪ ಹಾರೈಸಿದ್ದಾರೆ.

ಚಿತ್ರಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್‌ ಅವರು ಕೂಡಾ ಅಜಯ್‌ ಡೈರೆಕ್ಟರ್‌ ಸರ್ಕಲ್‌ ನ ಹನ್ನೆರಡು ಸಿನಿಮಾಗಳ ಟೈಟಲ್‌ ಲಾಂಚ್‌ ಕಾರ್ಯಕ್ರಮಕ್ಕೆ ಆಗಮಿಸಿ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಶುಭ ಕೋರಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp