ಕೆಲಸದ ಜಾಗದಲ್ಲಿ 'ಅಹಂ'ಗೆ ಅವಕಾಶವಿಲ್ಲ: ದರ್ಶನ್
ದೊಡ್ಡ ಸ್ಟಾರ್ ನಟನಾಗಿದ್ದರೂ ಸಹ ಇಂದಿಗೂ ಶಾಟ್ ವೇಳೆ ನಾನು ಲೈಟ್ ಬಾಯ್ ಎಂದೇ ಭಾವಿಸುತ್ತೇನೆ. ಏಕೆಂದರೆ ಆ ದೃಶ್ಯ ನನಗೆ ಅತ್ಯಂತ ಮುಖ್ಯವಾದದ್ದು. ಕೆಲಸದ ಜಾಗದಲ್ಲಿ ನಿಮ್ಮ ಅಹಂಕಾರ ಪ್ರದರ್ಶನ ಮಾಡಲು ಅವಕಾಶವಿಲ್ಲ.
Published: 10th March 2021 12:46 PM | Last Updated: 10th March 2021 12:48 PM | A+A A-

ನಾಳೆ (ಮಾರ್ಚ್ 11) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ "ರಾಬರ್ಟ್" ತೆರೆಗೆ ಬರುತ್ತಿದೆ. ಇದಾಗಲೇ ದರ್ಶನ್ ಅಭಿಮಾನಿಗಳು ಹಬ್ಬದ ಸಂಭ್ರದಲ್ಲಿದ್ದಾರೆ. ಈ ಸಮಯದಲ್ಲಿ ನಟ ದರ್ಶನ್ ಪತ್ರಿಕೆಯೊಂದಿಗೆ ತಮ್ಮ ಇದುವರೆಗಿನ ಸಿನಿ ಜೀವನದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇದರ ಪ್ರಮುಖ ಭಾಗಗಳು ಇಲ್ಲಿದೆ-
'ನನ್ನ ನಿಜ ಜೀವನವು ರೀಲ್ ಜೀವನಕ್ಕಿಂತ ವಿಭಿನ್ನ'
“ನನ್ನ ನಿಜ ಜೀವನವು ನನ್ನ ರೀಲ್ ಜೀವನಕ್ಕೆ ತುಂಬಾ ಭಿನ್ನವಾಗಿದೆ. ಎರಡೂ ಒಂದೇ ಆಗಿರುವುದಿಲ್ಲ. ನಾನು ಅಲ್ಲಿ ಏನು ಮಾಡುತ್ತೇನೆಯೋ ಅದನ್ನು ನಾನ ನಿಜ ಜೀವನದಲ್ಲಿ ಅನುಸರಿಸುವುದಿಲ್ಲ. ನನ್ನ ಅಭಿಪ್ರಾಯದ ಪ್ರಕಾರ ನಿರ್ದೇಶಕರು ನಟರ ತೆರೆ ಹಿಂದಿನ ವ್ಯಕ್ತಿತ್ವದ ಸುತ್ತ ತಮ್ಮ ಪಾತ್ರಗಳನ್ನು ಬರೆಯುವುದರ ಬಗ್ಗೆ ನಿಖರವಾಗಿ ಯೋಚಿಸುತ್ತಿಲ್ಲ."ರಾಬರ್ಟ್" ನಲ್ಲಿ ಬರುವ ಡೈಲಾಗ್ ಒಂದನ್ನು ಉದಾಹರಿಸುವುದಾದರೆ "ಹೇ.. ತುಕಾಲಿ ನೀನು ಮಾಸ್ ಆದ್ರೆ ನಾನು ಆ ಮಾಸ್ ಗೆ ಬಾಸ್...!" ಎಂದಿದೆ. ಇದು ಅತಿರೇಕದ ಡೈಲಾಗ್ ಎಂದೇ ನಾನು ಭಾವಿಸುತ್ತೇನೆ. ಆದರೆ ನಿರ್ದೇಶಕ ಮುಂದಿನ ಸಂಭಾಷಣೆ ಹೇಳಿದಾಗ ಅದು ನನಗೆ ಈ ಮೇಲಿನ ಮಾತಿಗೆ ಸಮರ್ಥನೆ ಎಂದು ಖಚಿತಆಗಿತ್ತು. ಆದರೆ ಜನ ಈ ಡೈಲಾಗ್ ಅನ್ನು "ರಾಬರ್ಟ್" ಹೇಳುತ್ತಿದ್ದಾನೆಯೇ ಹೊರತಾಗಿ ದರ್ಶನ್ ಅಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು."
‘ನನ್ನ ಚಿತ್ರಗಳ ಮೂಲಕ 100 ಜನರ ಜೀವನ ಬದಲಾದರೂ ನನಗೆ ಖುಷಿ’
ಸಿನಿಮಾಗಳು ಖಚಿತವಾಗಿ ಮನರಂಜನೆಗಾಗಿಯೇ ತಯಾರಾಗುತ್ತದೆ. ಆದರೆ ಸಾಮಾಜಿಕ ಸಂದೇಶ ಹೊಂದಿದ್ದರೆ ಹೆಚ್ಚು ಖುಷಿಯಾಗುವುದರಲ್ಲಿ ಸಂದೇಹವಿಲ್ಲ. ಎನ್ನುವ ನಟ ತಮ್ಮ ಈ ಹಿಂದಿನ ಚಿತ್ರ "ಯಜಮಾನ" ಉದಾಹರಣೆ ನೀಡಿದ್ದಾರೆ. “ನನ್ನ ಚಲನಚಿತ್ರಗಳು ಕೋಟ್ಯಂತರ ಜನರ ಜೀವನವನ್ನು ಬದಲಾಯಿಸುತ್ತವೆ ಎಂದು ನಾನು ಹೇಳುವುದಿಲ್ಲ, ಆದರೆ ಕನಿಷ್ಟ 100 ಮಂದಿಯಾದರೂ ನನ್ನ ಸಿನಿಮಾದಿಂದ ಏನನ್ನಾದರೂ ತೆಗೆದುಕೊಂಡರೆ ನನಗೆ ಖುಷಿಯಾಗುವುದು. ನನ್ನ ಎಲ್ಲಾ ಚಲನಚಿತ್ರಗಳು ಮಾಸ್ ಎಂಟರ್ಟೈನರ್ಗಳಾಗಿರಬೇಕೆಂದರೂ ಅದರಲ್ಲಿಯೂ ನೈತಿಕತೆಯ ದೃಷ್ಟಿ ಇರಬೇಕು." ದರ್ಶನ್ ಹೇಳಿದ್ದಾರೆ.
'ಕೆಲಸದ ಜಾಗದಲ್ಲಿ ‘ಅಹಂ’ ಗೆ ಅವಕಾಶವಿಲ್ಲ'
"ನಾನು ದೊಡ್ಡ ಸ್ಟಾರ್ ನಟನಾಗಿದ್ದರೂ ಸಹ ಇಂದಿಗೂ ಶಾಟ್ ವೇಳೆ ನಾನು ಲೈಟ್ ಬಾಯ್ ಎಂದೇ ಭಾವಿಸುತ್ತೇನೆ. ಏಕೆಂದರೆ ಆ ದೃಶ್ಯ ನನಗೆ ಅತ್ಯಂತ ಮುಖ್ಯವಾದದ್ದು. ನಾನು ಅವರಿಂದ ಇನ್ ಪುಟ್ ಗಳನ್ನು ಪಡೆಯಬಹುದು ಕೆಲವರು ನನಗೆ ಆಕ್ಷನ್ ಕಟ್ ಹೇಳುವ ಸಮಯ ಭೀತರಾಗುತ್ತಾರೆ. ಆದರೆ ಅವರ ಅಭಿಪ್ರಾಯಗಳನ್ನು ಕೇಳುವ ನಾನು ಅದು ನ್ಯಾಯಯುತವಾಗಿದ್ದರೆ ಅದಕ್ಕೆ ಒಪ್ಪಿಗೆ ಸೂಚಿಸುತ್ತೇನೆ. ಅಲ್ಲದೆ ಅದಕ್ಕಾಗಿ ನಾನು ಮತ್ತೆ ಒಮ್ಮೆ ಅದೇ ಶಾಟ್ ಮಾಡಲೂ ಸಿದ್ದವಾಗಿರುತ್ತೇನೆ. ಕೆಲಸದ ಜಾಗದಲ್ಲಿ ನಿಮ್ಮ ಅಹಂಕಾರ ಪ್ರದರ್ಶನ ಮಾಡಲು ಅವಕಾಶವಿಲ್ಲ. ಸಹಜವಾಗಿ ತಮ್ಮನ್ನು ತಾವು ನಿರ್ದೇಶಕರಾಗಿ ಸ್ಥಾಪಿಸಿಕೊಳ್ಲಲು ಉದ್ದೇಶಿಸುವ ಜನರಿದ್ದಾರೆ. ಅವರು ಮತ್ತೆ ಮತ್ತೆ ಏನನ್ನೋ ಹೇಳುತ್ತಲೇ ಇರುತ್ತಾರೆ. ಸಿನಿ ನಿರ್ಮಾಪಕರು ರಿಟೇಕ್ಗಳನ್ನು ಕೇಳಲು ಕಾರಣ ಅವರ ವೈಯಕ್ತಿಕ ಅಹಂ ಎಂದು ನನಗೆ ಅರ್ಥವಾದಾಗ ನಾನು ಅವರಿಗಾಗಿ ಏನನ್ನು ಮಾಡಬೇಕೆಂದು ಸ್ಪಷ್ಟವಾಗಿಸಲು ಕೇಳುತ್ತೇನೆ. ಆದರೆ ನನಗೆ ಇನ್ನೊಮ್ಮೆ ಅದೇ ಶಾಟ್ ಮಾಡಲು ಸೂಕ್ತ ಕಾರಣಗಳನ್ನು ಅವರು ತಿಳಿಸಬೇಕು".
'ಅಂದೂ ನಟನಾಗಿದ್ದೆ, ಎಂದೆಂದಿಗೂ ನಟನೇ ಆಗಿರುತ್ತೇನೆ'
"ಸಿನಿಮಾಗಳಲ್ಲಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸುವುದರಿಂದ ನಿಮಗೆ ಬೇಕಾದುದನ್ನು ಹೊಂದುವ ಉತ್ಸಾಹ ಕುಗ್ಗಬಹುದು. ಹಲವಾರು ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದರಿಂದ ನನ್ನನ್ನು ನಾನು ಅಭಿನಯದಿಂದ ದೂರ ಉಳಿಸಿಕೊಳ್ಲಬೇಕಾಗುತ್ತದೆ. ಆದರೆ ನಟನೆ ನನ್ನನ್ನು ಸಿನಿಮಾ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೇರಿಸಿದೆ. ಹಾಗಾಗಿ ಣಾನು ಅದೇ ದಾರಿಯಲ್ಲೇ ಮುಂದೆ ಸಾಗಲು ಬಯಸುತ್ತೇನೆ" ನಟ ದರ್ಶನ್ ಹೇಳಿದ್ದಾರೆ.