
ಕೃಷ್ಣ ಟಾಕೀಸ್ ಚಿತ್ರದ ದೃಶ್ಯ
ಅಜಯ್ ರಾವ್ ತಮ್ಮ ಮುಂದಿನ ಚಿತ್ರ "ಕೃಷ್ಣ ಟಾಕೀಸ್" ನಲ್ಲಿ ವಿಭಿನ್ನ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ವಿಜಯ್ ಆನಂದ್ ಈ ಬಗ್ಗೆ ವಿವರ ನೀಡಿದ್ದಾರೆ.
ಥ್ರಿಲ್ಲರ್ ಅಂಶಗಳೊಂದಿಗೆ ಬರಲಿರುವ ಸಿನಿಮಾ ಏಪ್ರಿಲ್ 9 ರಂದು ಬಿಡುಗಡೆಯಾಗಲಿದೆ. ಸಿನಿ ನಿರ್ಮಾಪಕರು ಇತ್ತೀಚೆಗೆ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದರು.
ಅಜಯ್ ರಾವ್ ಅವರಲ್ಲದೆ, ಚಿಕ್ಕಣ್ಣ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ, ಇದರಲ್ಲಿ ಅಪೂರ್ವಾ ಮತ್ತು ಸಿಂಧು ಲೋಕನಾಥ್ ನಾಯಕಿಯರಾಗಿ ಕಾಣಿಸಿಕೊಂಡಿದ್ದು ಚಿತ್ರವನ್ನು ಗೋವಿಂದರಾಜು ಎ ಎಚ್ ಆಲೂರು ನಿರ್ಮಿಸಿದ್ದಾರೆ.
ಶ್ರೀಧರ್ ವಿ ಸಂಭ್ರಮ್ ಸಂಗೀತ, ಅಭಿಷೇಕ್ ಕಾಸರಗೋಡು ಕ್ಯಾಮೆರಾ ಕೆಲಸ ಸಿನಿಮಾಗಿದೆ. ಯಶ್ ಶೆಟ್ಟಿ, ಶೋಭರಾಜ್, ಮಂಡ್ಯ ರಮೇಶ್ ಮತ್ತು ಪ್ರಮೋದ್ ಶೆಟ್ಟಿ ಮೊದಲಾದವರು ತೆರೆ ಹಂಚಿಕೊಂಡಿದ್ದಾರೆ.