ಸ್ಯಾಂಡಲ್ ವುಡ್ ಗೆ ಚೇತರಿಕೆ ನೀಡಿದ 'ರಾಬರ್ಟ್', 656 ಥಿಯೇಟರ್ ನಲ್ಲಿ 3608 ಪ್ರದರ್ಶನ

ಮಹಾ ಶಿವರಾತ್ರಿಯಂದು ತೆರೆ ಕಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ರಾಬರ್ಟ್” ರಾಜ್ಯದಲ್ಲಿ ಮಾತ್ರವಲ್ಲದೆ ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ನೆರೆಯ ರಾಜ್ಯಗಳಲ್ಲಿಯೂ ಹವಾ ಕ್ರಿಯೇಟ್ ಮಾಡಿದೆ.

Published: 11th March 2021 04:47 PM  |   Last Updated: 11th March 2021 04:47 PM   |  A+A-


A srill from roberrt

ರಾಬರ್ಟ್ ಸಿನಿಮಾ ಸ್ಟಿಲ್

Posted By : Lingaraj Badiger
Source : UNI

ಬೆಂಗಳೂರು: ಮಹಾ ಶಿವರಾತ್ರಿಯಂದು ತೆರೆ ಕಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ರಾಬರ್ಟ್” ರಾಜ್ಯದಲ್ಲಿ ಮಾತ್ರವಲ್ಲದೆ ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ನೆರೆಯ ರಾಜ್ಯಗಳಲ್ಲಿಯೂ ಹವಾ ಕ್ರಿಯೇಟ್ ಮಾಡಿದೆ.

ರಾಯಚೂರು, ಗುಲ್ಬರ್ಗಾದಲ್ಲಿಯೂ ಚಿತ್ರಮಂದಿರ ತುಂಬಿದ್ದು, ಜಾಗರಣೆ ನಡೆಸುವ ಸಲುವಾಗಿಯೂ ರಾತ್ರಿಯಿಡೀ “ರಾಬರ್ಟ್’ ವೀಕ್ಷಿಸಲು ಜನರು ಮುಂದಾಗಿದ್ದಾರೆ.

ಕೊರೋನಾ ಬಳಿಕ ಮಂಕಾಗಿದ್ದ ಚಿತ್ರರಂಗಕ್ಕೆ ರಾಬರ್ಟ್ ಚೇತರಿಕೆ ನೀಡಿದ್ದು, ಈ ಕ್ರೇಜ್ ಗಮನಿಸಿದರೆ “ರಾಬರ್ಟ್” ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುವುದರಲ್ಲಿ ಯಾವುದೇ ಡೌಟ್ ಇಲ್ಲ. ಬಿಗ್ ಬಜೆಟ್‌ ಚಿತ್ರ ಮೊದಲ ವಾರದಲ್ಲೇ ಬಂಡವಾಳ ಹಿಂಪಡೆಯುವುದು ಖಚಿತ ಎಂಬ ಮಾತು ಕೇಳಿಬಂದಿದೆ.

ರಾಜ್ಯದ 656 ಚಿತ್ರಮಂದಿರ ಸೇರಿದಂತರ ಬಿಡುಗಡೆಯಾಗಿರುವ ಎಲ್ಲ ಚಿತ್ರಮಂದಿರಗಳಲ್ಲೂ ಪ್ರೇಕ್ಷಕರು ತುಂಬಿ ತುಳುಕಿದ್ದಾರೆ. ಗುರುವಾರ ಹಾಗೂ ಶುಕ್ರವಾರ 3608 ಪ್ರದರ್ಶನಗಳಾಗಲಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಹೀರೋ ಸಿನಿಮಾ ಪ್ರದರ್ಶನವಾಗುತ್ತಿದ್ದ ಹಲವು ಚಿತ್ರಮಂದಿರಗಳು ರಾಬರ್ಟ್ ಪಾಲಾಗಿದೆ ಎಂದು ತಿಳಿದುಬಂದಿದೆ.

ಕೇರಳ, ದೆಹಲಿ, ಒಡಿಶಾ ತಮಿಳುನಾಡು ಸೇರಿದಂತೆ ಪ್ರಮುಖ ರಾಜ್ಯಗಳ ಮಲ್ಟಿಪ್ಲೆಕ್ಸ್ ನಲ್ಲೂ ರಾಬರ್ಟ್ ದರ್ಶನ ನೀಡುತ್ತಿದೆ. ಕೊರೋನಾ ನಂತರ ಚಿತ್ರಮಂದಿರಕ್ಕೆ ಬರ್ತಿರುವ ಸ್ಯಾಂಡಲ್‌ವುಡ್‌ ಸಿನಿಮಾ ಬಿಸಿನೆಸ್ ವಿಚಾರದಲ್ಲಿ ಹೆಚ್ಚು ಸುದ್ದಿಯಲ್ಲಿದೆ. ಮೊದಲ ದಿನದ ಬಿಡುಗಡೆಯಲ್ಲೂ ರಾಬರ್ಟ್ ಹೊಸ ದಾಖಲೆ ಸೃಷ್ಟಿಸಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. 

ಹಾಡುಗಳು, ಫ್ಯಾಮಿಲಿ ಸೆಂಟಿಮೆಂಟ್, ಸ್ನೇಹ, ಸಂದೇಶ ತುಂಬಿರುವ "ರಾಬರ್ಟ್" ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿದೆ. 

ಸುಮಲತಾ ಹಾರೈಕೆ
ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ರಾಬರ್ಟ್ ಚಿತ್ರ ಇಂದಿನಿಂದ ತೆರೆಯ ಮೇಲೆ ರಾರಾಜಿಸಲು ರೆಡಿ! ಈ ಚಿತ್ರವು ಹೊಸ ದಾಖಲೆಗಳನ್ನು ಬರೆದು, ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲಾಗಲಿ ಎಂದು ಆಶಿಸುತ್ತೇನೆ. ಮುಖ್ಯವಾಗಿ ಕನ್ನಡ ಚಿತ್ರೋದ್ಯಮವನ್ನು ಮತ್ತೊಮ್ಮೆ ಯಶಸ್ಸಿನ ಹಾದಿಗೆ ಕೊಂಡೊಯ್ಯಲು ಸಹಕಾರಿಯಾಗಲಿ ಎಂದು ಚಿತ್ರ ಬಿಡುಗಡೆಗೂ ಮೊದಲು ಸಂಸದೆ ಸುಮಲತಾ ಅಂಬರೀಶ್ ಅವರು ಟ್ವೀಟ್ ಮೂಲಕ ಹಾರೈಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp