
ರಾಬರ್ಟ್ ಚಿತ್ರದಲ್ಲಿ ನಟ ದರ್ಶನ್
ಬೆಂಗಳೂರು: ಮಹಾ ಶಿವರಾತ್ರಿ ದಿನದಂದು ತೆರೆಗೆ ಅಪ್ಪಳಿಸಿದ 'ರಾಬರ್ಟ್ 'ಬಾಕ್ಸ್ ಆಫೀಸ್ ಕಲೆಕ್ಷನ್ ಉತ್ತಮ ರೀತಿಯಲ್ಲಿದ್ದು, ಯಶಸ್ಸಿನ ಹಾದಿಯಲ್ಲಿ ಮುನ್ನುಗುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಶಾ ಭಟ್ ನಾಯಕ- ನಟಿಯಾಗಿ ಕಾಣಿಸಿಕೊಂಡು, ತರುಣ್ ಸುಧೀರ್ ನಿರ್ದೇಶಿಸಿರುವ ಈ ಚಿತ್ರ, ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆ ಮುರಿಯದಿದ್ದರೂ ಅದರ ಸಮೀಪಕ್ಕೆ ರಾಬರ್ಟ್ ಧಾವಿಸುವ ಮೂಲಕ ಬಿಡುಗಡೆಯಾದ ಮೊದಲ ದಿನ ಕರ್ನಾಟಕ ಒಂದರಲ್ಲಿಯೇ 17.04 ಕೋಟಿ ಕಲೆಕ್ಷನ್ ಮಾಡಿದೆ.
ಮೂಲಗಳ ಪ್ರಕಾರ ರಾಬರ್ಟ್ ಎರಡನೇ ದಿನದ ಕಲೆಕ್ಷನ್ 13 ಕೋಟಿಯಾಗಿದೆ. ಒಟ್ಟಾರೆಯಾಗಿ 35ರಿಂದ 40 ಕೋಟಿ ಕಲೆಕ್ಷನ್ ಆಗಿರುವ ಮಾಹಿತಿ ಇದೆ. ಆದರೆ, ಕಲೆಕ್ಷನ್ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ತಿಳಿದುಬಂದಿಲ್ಲ.
ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಬಿಡುಗಡೆಯಾದ ಮೊದಲ ದಿನ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ ಕೆಜಿಎಫ್ ಅಗ್ರಸ್ಥಾನದಲ್ಲಿದ್ದರೆ, ರಾಬರ್ಟ್ ಎರಡನೇ ಸ್ಥಾನದಲ್ಲಿದೆ.