ಕಿಚ್ಚನ ಬಣ್ಣದ ಲೋಕದ ಬೆಳ್ಳಿ ಹಬ್ಬ: ಕೋಟಿಗೊಬ್ಬ -3 ತಂಡದಿಂದ ಅದ್ದೂರಿ ಆಚರಣೆ

ನಟ ಕಿಚ್ಚ ಸುದೀಪ್ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿ 25 ವರ್ಷಗಳು ಪೂರೈಸಿದೆ. ಈ ಪ್ರಯುಕ್ತ ಕೋಟಿಗೊಬ್ಬ -3 ಸಿನಿಮಾ ತಂಡ ಅದ್ದೂರಿಯಾಗ ಬೆಳ್ಳಿಹಬ್ಬವನ್ನು ಆಚರಿಸಿದೆ.

Published: 16th March 2021 10:25 PM  |   Last Updated: 16th March 2021 10:25 PM   |  A+A-


kichcha-25

ಬೆಳ್ಳಿ ಹಬ್ಬ

Posted By : Lingaraj Badiger
Source : UNI

ಬೆಂಗಳೂರು: ನಟ ಕಿಚ್ಚ ಸುದೀಪ್ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿ 25 ವರ್ಷಗಳು ಪೂರೈಸಿದೆ. ಈ ಪ್ರಯುಕ್ತ ಕೋಟಿಗೊಬ್ಬ -3 ಸಿನಿಮಾ ತಂಡ ಅದ್ದೂರಿಯಾಗ ಬೆಳ್ಳಿಹಬ್ಬವನ್ನು ಆಚರಿಸಿದೆ.

ಸಂಭ್ರಮಾಚರಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿಶೇಷ ಅತಿಥಿಯಾಗಿ ಭಾಗಿಯಾಗಿ ಸುದೀಪ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ಸುನಿಲ್ ಕುಮಾರ್ ದೇಸಾಯಿ, ರವಿಶಂಕರ್ ಸೇರಿದಂತೆ ಇನ್ನು ಹಲವು ಗಣ್ಯರು ಹಾಜರಿದ್ದರು.

ಚಿತ್ರರಂಗಕ್ಕೆ ಧನ್ಯವಾದ ತಿಳಿಸಿ ಮಾತನಾಡಿದ ಸುದೀಪ್, 'ನನಗಿಂತಲೂ ಹಿರಿಯರು ಇಲ್ಲಿದ್ದಾರೆ. ನನಗಿಂತಲೂ ಮುಂಚೆ ಅವರು ಸಿನಿಯಾನ ಆರಂಭಿಸಿದ್ದಾರೆ, ಅವರ ನೆರಳಿನಲ್ಲಿ ನಾನು ಸಾಗಿಬಂದಿದ್ದೇನೆ. ಕನ್ನಡ ಸಿನಿಮಾರಂಗದ ಅದ್ಭುತ ಇತಿಹಾಸದಲ್ಲಿ ನನ್ನನ್ನೂ ಒಂದು ಪುಟವಾಗಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ನಾನು ಋಣಿಯಾಗಿರುತ್ತೇನೆ. ಈಗ ಹಿಂತಿರುಗಿ ನೋಡಿದಾಗ ನಾನು ನೀಡಿದ ಹಿಟ್ ಸಿನಿಮಾಗಳು ಗಳಿಸಿದ ಲಾಭ ಯಾವುದೂ ನೆನಪಿಗೆ ಬರುವುದಿಲ್ಲ. ಬದಲಿಗೆ ಸಿನಿಮಾ ಕಟ್ಟಿಕೊಟ್ಟ ಸುಂದರ ನೆನಪುಗಳು ಮಾತ್ರವೇ ಕಣ್ಣ ಮುಂದೆ ಮೂಡುತ್ತವೆ' ಎಂದರು.

ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವುದು ನಾನೊಬ್ಬನೇ ಅಲ್ಲ. ನಾನು 25 ವರ್ಷ ಪೂರೈಸಲು ಹಲವಾರು ಮಂದಿ ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಸಹಾಯ ಮಾಡಿದ್ದಾರೆ. ನನ್ನೊಂದಿಗೆ ಅವರೂ ಸಿನಿಪಯಣ ಮಾಡಿದ್ದಾರೆ ಅವರೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ' ಎಂದ ಸುದೀಪ್, ಕೊರೋನಾ ಸಮಯದಲ್ಲಿ ಚಿತ್ರರಂಗಕ್ಕೆ ಸಹಾಯ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿಶೇಷ ಧನ್ಯವಾದವನ್ನು ಸಲ್ಲಿಸಿದರು.

ಕಪ್ಪು ಬಣ್ಣದ ಉಡುಪು ಧರಿಸಲು ರವಿ ಸರ್ ಕಾರಣ
ತಾವು ಕಪ್ಪು ಬಟ್ಟೆ ‍ಧರಿಸುವುದರ ಹಿಂದಿನ ಸ್ವಾರಸ್ಯಕರ ವಿಷಯವನ್ನು ಹಂಚಿಕೊಂಡ ಸುದೀಪ್, 'ಕಪ್ಪು ಬಟ್ಟೆ ಧರಿಸಲು ಕಾರಣ ರವಿ ಸರ್. ಚಿಕ್ಕವನಾಗಿದ್ದಾಗಿಂದ ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡಿ ಬೆಳೆದವನು. ಅವರ ಸಿನಿಮಾಗಳನ್ನು ನೋಡಿ ನಾನು ಕೂಡ ಕಪ್ಪು ಬಟ್ಟೆ ಹಾಕುತ್ತಿದ್ದೆ. 'ಯಾವಾಗಲೂ ಕಪ್ಪು ಬಟ್ಟೆ ಧರಿಸುತ್ತೀರಿ ಯಾಕೆ ಎಂದು ಒಮ್ಮೆ ರವಿ ಸರ್ ಅವರನ್ನೆ ಕೇಳಿದ್ದಕ್ಕೆ ನಾವು ಬೆಳ್ಳಗೆ ಹಾಗೂ ತೆಳ್ಳಗೆ ಕಾಣುತ್ತೇವೆ ಎಂದಿದ್ದಾಗಿ ತಿಳಿಸಿದರು.

ಹಿರಿಯ ಮಗ ಎಂದಾಗ ಖುಷಿಯಾಗುತ್ತೆ
ರವಿಚಂದ್ರನ್ ಬಹು ದೊಡ್ಡ ಕಲಾವಿದರು. ನನ್ನನ್ನು ಅವರ ಹಿರಿಯ ಮಗ ಎಂದಾಗ ಎಲ್ಲಿಲ್ಲದ ಖುಷಿಯಾಗುತ್ತೆ' ಎಂದು ಸುದೀಪ್ ರವಿಚಂದ್ರನ್ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದರು. 'ಒಬ್ಬ ಕಲಾವಿದನಾಗಿ ನನ್ನನ್ನು ಹೊಗಳುವುದು ಬೇರೆ ಆದರೆ ಮನಪೂರ್ವಕವಾಗಿ ನನ್ನ ದೊಡ್ಡ ಮಗ ಎನ್ನುವುದು ಬೇರೆ' ಎನ್ನುತ್ತಾ ರವಿಚಂದ್ರನ್ ಅವರಿಗೆ ಧನ್ಯವಾದ ತಿಳಿಸಿದರು.


Stay up to date on all the latest ಸಿನಿಮಾ ಸುದ್ದಿ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp