ಸಿನಿಮಾದಲ್ಲಿ 'ಧಮ್' ಇದ್ದರೆ ಪೈರಸಿ ಏನೂ ಮಾಡಲ್ಲ; ರಾಬರ್ಟ್ ಚಿತ್ರದ ಸಾವಿರಕ್ಕೂ ಅಧಿಕ ಲಿಂಕ್ ಡಿಲೀಟ್: ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ರಾಬರ್ಟ್’ ಚಿತ್ರದ ಗೆಲುವಿನ ಸಂಭ್ರವನ್ನು ಹಂಚಿಕೊಂಡಿದ್ದು, ಚಿತ್ರ ಚೆನ್ನಾಗಿದ್ದರೆ ಜನ ಖಂಡಿತ ವೀಕ್ಷಿಸುತ್ತಾರೆ ಎಂದಿದ್ದಾರೆ.
Published: 17th March 2021 01:59 PM | Last Updated: 17th March 2021 06:12 PM | A+A A-

ದರ್ಶನ್
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ರಾಬರ್ಟ್’ ಚಿತ್ರದ ಗೆಲುವಿನ ಸಂಭ್ರವನ್ನು ಹಂಚಿಕೊಂಡಿದ್ದು, ಚಿತ್ರ ಚೆನ್ನಾಗಿದ್ದರೆ ಜನ ಖಂಡಿತ ವೀಕ್ಷಿಸುತ್ತಾರೆ ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಈ ಸಂತಸ ಹಂಚಿಕೊಂಡಿದ್ದು, ಇದೇ ವೇಳೆ ಪೈರಸಿ ಬಗ್ಗೆಯೂ ಮಾತನಾಡಿದ್ದಾರೆ. ಈಗಾಗಲೇ ರಾಬರ್ಟ್ ಚಿತ್ರದ ಸಾವಿರಕ್ಕೂ ಅಧಿಕ ಪೈರಸಿ ಲಿಂಕ್ ಗಳನ್ನು ಡಿಲೀಟ್ ಮಾಡಿಸಲಾಗಿದೆ. ಆದರೆ ಸಿನಿಮಾ ಚೆನ್ನಾಗಿ ಇದ್ರೆ ನೋಡೆ ನೋಡುತ್ತಾರೆ. ಆದರೆ ಯಜಮಾನ ಸಿನಿಮಾ ಪೈರಸಿ ಆದಾಗ ಯಾರು ಮಾತನಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲರೂ ಹೇಳುತ್ತಾರೆ ಪೈರಸಿ ಪೈರಸಿ ಅಂತ. ಯಜಮಾನ ಸಿನಿಮಾ ಮೊದಲ ದಿನವೇ ಪೈರಸಿ ಆಯ್ತು. ಯಾರು ಏನು ಮಾತನಾಡಿದ್ರಿ. ಆದರೂ 140 ದಿನ ಸಿನಿಮಾ ಓಡ್ತು. ಸಿನಿಮಾ ಚೆನ್ನಾಗಿಲ್ಲದಿದ್ದರೆ, ಉಚಿತವಾಗಿ ನೋಡಿ ಎಂದರೂ ನೋಡಲ್ಲ. ಕುರುಕ್ಷೇತ್ರ ಕೂಡ ಪೈರಸಿ ಆಗಿತ್ತು' ಎಂದರು.
ನಮಗೆ ಈಗ ಪೈರಸಿ ಮಾಡಿದವರು ತುಂಬಾ ಜನ ಸಿಕ್ಕಿದ್ದಾರೆ. ಒಬ್ಬ ಲಿಂಕ್ ಅನ್ನು ಶೇರ್ ಮಾಡಿದ್ದ. ಆತನನ್ನು ಕರೆದು ಬುದ್ದಿ ಹೇಳಿ, ಬೇಲ್ ಕೊಟ್ಟು ಕಳುಹಿಸಿದ್ವಿ. ಆದರೆ ಇದೇ ನಮ್ಮ ಹುಡುಗ ಮಾಡಿದ್ದಕ್ಕೆ ಆತನನ್ನು ಕರೆದುಕೊಂಡು ಹೋಗಿ ಸ್ಟೇಷನ್ನಲ್ಲಿ ಕೂರಿಸಿದ್ರು. ಇದನ್ನು ಯಾರ್ ಹತ್ರ ಹೇಳಲಿ ಎಂದು ಫ್ಯಾನ್ಸ್ ಪೈರಸಿ ವಾರ್ ಬಗ್ಗೆ ಮಾತನಾಡಿದ್ದಾರೆ.
'ಕನ್ನಡ ಸಿನಿಮಾರಂಗವನ್ನು ಬೆಳೆಸೋಣ. ಒಂದೊಳ್ಳೆ ಸಿನಿಮಾ ಬಂದರೆ ಮತ್ತೊಂದಷ್ಟು ಸಿನಿಮಾ ಹುಟ್ಟುಕೊಳ್ಳುತ್ತೆ. ಯಾಕೆಂದ್ರೆ ಗಾಂಧಿನಗರದಲ್ಲಿ ದುಡ್ಡು ಓಡಾಡುತ್ತೆ, ಒಂದಷ್ಟು ಜನ ಹೀರೋಗಳು ಬರ್ತಾರೆ, ಎಲ್ಲರೂ ನಮ್ಮೋರೆ' ಎಂದು ದರ್ಶನ್ ಹೇಳಿದರು.
'ಸಿನಿಮಾದಲ್ಲಿ ಧಮ್ ಇದ್ದಾಗ ಮಾತನಾಡಬಾರ್ದು, ಇದನ್ನ ನಿಲ್ಲಿಸಕ್ಕೆ ಆಗಲ್ಲ. ಇಷ್ಟೆಲ್ಲ ತೆಗಿಸಿದ್ವಿ, ಆದರೂ ಜನ ನೋಡುತ್ತಿದ್ದಾರೆ. ನಾನು ಯಾವತ್ತು ನನ್ನ ಅಭಿಮಾನಿಗಳನ್ನು ಬಿಟ್ಟುಕೊಡಲ್ಲ. ಯಾಕಂದ್ರೆ ಅವರು ಇದ್ರೇನೆ ನಾನು. ಅವರಿಂದನೇ ನಾನು ಅನ್ನ ತಿನ್ನುತ್ತಿರುವುದು' ಎಂದು ಅಭಿಮಾನಿಗಳ ಬಗೆಗಿನ ತಮ್ಮ ಅಭಿಮಾನ ವ್ಯಕ್ತಪಡಿಸಿದರು.