
ಧ್ರುವ ಸರ್ಜಾ ಮತ್ತು ಎ.ಹರ್ಷ
ಪೊಗರು ನಟ ಧ್ರುವ ಸರ್ಜಾ ಸದ್ಯ ಉಜ್ ಮೆಹ್ತಾ ನಿರ್ಮಿಸಿ, ನಂದ ಕಿಶೋರ್ ನಿರ್ದೇಶನದ ದುಬಾರಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಇದೇ ವೇಳೆ ಭಜರಂಗಿ ನಿರ್ದೇಶಕ ಎ.ಹರ್ಷ ಹೊಸ ಸಿನಿಮಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹರ್ಷ ಮುಂದಿನ ಸಿನಿಮಾದಲ್ಲಿ ಧ್ರುವ ಸರ್ಜಾ ನಟಿಸಲಿದ್ದಾರೆ. ಈಗಾಗಲೇ ಮೊದಲ ಸುತ್ತಿನ ಮಾತುಕತೆ ಪೂರ್ಣಗೊಂಡಿದ್ದು,. ಎಲ್ಲವೂ ಅಂದುಕೊಂಡಂತೆ ನಡೆದರೆ ಭಜರಂಗಿ ನಿರ್ದೇಶಕ ಮತ್ತು ಭರ್ಜರಿ ಹೀರೋ ಸೇರಿ ಹೊಸ ಸಿನಿಮಾ ಮಾಡಲಿದ್ದಾರೆ.
ಇಬ್ಬರು ಒಂದಾಗಿ ಸಿನಿಮಾ ಮಾಡಲಿದ್ದಾರೆ, ಆದರೆ ಸದ್ಯಕ್ಕೆ ಸಿನಿಮಾ ಆರಂಭವಾಗುವುದಿಲ್ಲ, ಹರ್ಷ ಮತ್ತು ಧುೃವ ಸರ್ಜಾ ತಮ್ಮ ಪೆಂಡಿಂಗ್ ಪ್ರಾಜೆಕ್ಟ್ ಪೂರ್ಣಗೊಂಡ ನಂತರ ಹೊಸ ಸಿನಿಮಾಗೆ ಕೈ ಹಾಕಲಿದ್ದಾರೆ.
ಹರ್ಷ ಭಜರಂಗಿ-2 ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ, ಮೇ 14 ರಂದು ಸಿನಿಮಾ ರಿಲೀಸ್ ಆಗಲಿದೆ, ಇದರ ಜೊತೆಗೆ ಶಿವ ರಾಜ್ ಕುಮಾರ್ ಅವರ 125 ನೇ ಸಿನಿಮಾ ವೇದ ಚಿತ್ರದ ಕಥೆ ಸಿದ್ಧ ಪಡಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಧ್ರುವ ಸರ್ಜಾ ದುಬಾರಿ ಮತ್ತು ಎಪಿ ಅರ್ಜುನ್ ಅವರ ಅದ್ದೂರಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.