ಸಿಎಂ ನಿವಾಸಕ್ಕೆ ನಟ ಸುದೀಪ್ ದಿಢೀರ್ ಭೇಟಿ: ಯಡಿಯೂರಪ್ಪ, ವಿಜಯೇಂದ್ರ ಜೊತೆ ಚರ್ಚೆ

ಸ್ಯಾಂಡಲ್ ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

Published: 19th March 2021 02:16 PM  |   Last Updated: 19th March 2021 02:16 PM   |  A+A-


sudeep Meets Chief Minister  BS yediyurappa

ಸಿಎಂ ಭೇಟಿ ಮಾಡಿದ ನಟ ಸುದೀಪ್

Posted By : Shilpa D
Source : UNI

ಬೆಂಗಳೂರು:  ಸ್ಯಾಂಡಲ್ ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸಿಎಂ ಕಾವೇರಿ ನಿವಾಸಕ್ಕೆ ತೆರಳಿದ ಸುದೀಪ್​ ಅವರು ಯಡಿಯೂರಪ್ಪ ಅವರನ್ನು ಭೇಟಿ ಆಗಿದ್ದಾರೆ. ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಮುಖ್ಯಮಂತ್ರಿಗಳನ್ನು ಕಿಚ್ಚ ಸನ್ಮಾನಿಸಿದ್ದಾರೆ. ಈ ಫೋಟೋಗಳು ಸುದೀಪ್​ ಅಭಿಮಾನಿಗಳ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿವೆ. ಅಷ್ಟಕ್ಕೂ ಸುದೀಪ್​ ಹೀಗೆ ದಿಢೀರ್​ ಎಂದು ಸಿಎಂ ಭೇಟಿ ಮಾಡಿದ್ದೇಕೆ ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ.

ಇತ್ತೀಚೆಗಷ್ಟೇ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ‘ಕೋಟಿಗೊಬ್ಬ 3’ ಸಿನಿಮಾ ತಂಡದಿಂದ ದೊಡ್ಡ ಸಮಾರಂಭ ಮಾಡಲಾಗಿತ್ತು. ಚಿತ್ರರಂಗದಲ್ಲಿ ಸುದೀಪ್​ 25 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಮುಖ್ಯಮಂತ್ರಿಗಳಿಂದ ಸನ್ಮಾನ ಮಾಡಿಸಲಾಯಿತು. ಆ ವೇಳೆ ತಮ್ಮ ನಿವಾಸಕ್ಕೆ ಬರುವಂತೆ ಸುದೀಪ್​ಗೆ ಸಿಎಂ ಆಹ್ವಾನ ನೀಡಿದ್ದರು ಎನ್ನಲಾಗಿದೆ. ಹಾಗಾಗಿ ಸುದೀಪ್​ ಗುರುವಾರ ಬೆಳಗ್ಗೆ ಸಿಎಂ ಕಾವೇರಿ ನಿವಾಸಕ್ಕೆ ತೆರಳಿ ಭೇಟಿ ಮಾಡಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp