
ಸೋನು ಗೌಡ
"ಗುಲ್ಟೂ" ಚಿತ್ರದಲ್ಲಿನ ಸೋನು ಗೌಡ ಅವರ ಪಾತ್ರವೇ "ಯುವರತ್ನ" ಚಿತ್ರದಲ್ಲಿ ಸಹ ಅವರದ್ದಾಗಿದೆ ಎಂದು ನಟಿ ಸೋನು ಬಹಿರಂಗಪಡಿಸಿದ್ದಾರೆ.. ವಾಸ್ತವವಾಗಿ, ನಿರ್ದೇಶಕ ಸಂತೋಷ್ ಆನಂದ್ ರಾಮ್ ಈ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಲು ಕಾರಣವೇನು ಎಂಬ ಕುತೂಹಲವಿದ್ದಾಗ ಇದಕ್ಕಾಗಿ ನಿರ್ದೇಶಕ ಮೇಲಿನ ಉತ್ತರ ನೀಡಿದ್ದರು. ಕಮರ್ಷಿಯಲ್ ಎಂಟರ್ಟೈನರ್ "ಯುವರತ್ನ" ಚಿತ್ರದಲ್ಲಿ ನೀತ್ ರಾಜ್ಕುಮಾರ್, ಸಯೇಶಾ, ಧನಂಜಯ್, ದಿಗಂತ್, ಪ್ರಕಾಶ್ ರಾಜ್ ಸೇರಿದಂತೆ ಬಹು ತಾರಾಂಗಣವಿದೆ.
ನಟ ನಟಿಯರ ಈ ದೊಡ್ದ ಪಾತ್ರವರ್ಗದ ಹೊರತಾಗಿಯೂ ಈ ಪಾತ್ರವನ್ನು ನಿರ್ವಹಿಸಲು ತನಗೆ ಮೊದಲಿಗೆ ಆತಂಕವಿತ್ತು ಎಂದು ಸೋನು ಒಪ್ಪಿಕೊಂಡಿದ್ದಾರೆ. ಆದರೆ ಅಂತಿಮವಾಗಿ ತಾನು ಸೆಟ್ ಗೆ ಬರುವ ವೇಳೆಯಲ್ಲಿ ಇದೆಲ್ಲಾ ಬದಲಾಗಿತ್ತು. "ನಾನು ಗುರುತಿಸಲ್ಪಡುತ್ತೇನೆಯೆ? ನಾನೆಲ್ಲಿರುವೆನೋ ಅಲ್ಲೇ ಇರಲು ಸಹಾಯವಾಗುವಂತಹಾ ಪಾತ್ರಕ್ಕೆ ನಾನು ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ, ಸಂತೋಷ್ ನನ್ನ ಹತ್ತಿರ ಬಂದಾಗ , ನನ್ನ ಮನಸ್ಸಿನಲ್ಲಿ ಹಲವು ಪ್ರಶ್ನೆಗಳಿದ್ದವು. ಹಾಗಿದ್ದರೂ ವಿಷಯಗಳನ್ನು ಸಂಪೂರ್ಣವಾಗಿ ತಿಳಿದಾಗ ಪುನೀತ್ ರಾಜ್ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಮತ್ತು ಹೊಂಬಾಳೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಚಿತ್ರದಲ್ಲಿ ನಾನು ಕಾಣಿಸಿಕೊಳ್ಳುವುದಕ್ಕೆ ತೀರ್ಮಾನಿಸಿದೆ. ಈ ಸಿನಿಮಾ ಒಪ್ಪಿಕೊಳ್ಳಲು ನನಗಿದ್ದ ಕಾರಣದಲ್ಲಿ ಇದೂ ಒಂದು.
"ಒಬ್ಬ ನಟ ಕೇವಲ ಸಾಮಾನ್ಯ ನಾಯಕಿಯಾಗಿ ಬದಲಾಗಬೇಕಾದ ಸಮಯ ಒಂದು ಹಂತದಲ್ಲಿ ಬರುತ್ತದೆ. ನಾನು ಪ್ರತಿ ಬಾರಿಯೂ ಪರಿಪೂರ್ಣ ಪಾತ್ರಕ್ಕಾಗಿ ಕಾಯಲು ಸಾಧ್ಯವಿಲ್ಲ, ಮಾರ್ಗದುದ್ದಕ್ಕೂ, ಈ ಪಾತ್ರವು ಎಷ್ಟು ಮೌಲ್ಯವನ್ನು ಪಡೆದುಕೊಂಡಿದೆ ಎಂದು ನಾನು ಅರಿತುಕೊಂಡೆ, ಮತ್ತು ನನ್ನ ಭಯ ನಿಧಾನವಾಗಿ ಮರೆಯಾಯಿತು. ಅಂತಿಮವಾಗಿ, ನನ್ನಲ್ಲಿನ ಉತ್ಸಾಹ ಹೆಚ್ಚಲು ಪ್ರಾರಂಭಿಸಿತು ಮತ್ತು ನಾನು ಎಲ್ಲರೊಂದಿಗೆ ನಟಿಸಲು ಉತ್ಸುಕಳಾಗಿದ್ದೆ. ಮಲ್ಟಿ-ಸ್ಟಾರರ್ ಚಿತ್ರದಲ್ಲಿ ನಟಿಸುವ ಬಗ್ಗೆ ನನಗೆ ಯಾವತ್ತೂ ಸಮಸ್ಯೆ ಇರಲಿಲ್ಲ. ನಾನು ನೋಡುವುದು ನಟಿಯಾಗಿ ನನಗೆ ನೀಡಿದ ಪ್ರಾಮುಖ್ಯವನ್ನು ಮಾತ್ರ.
"ಯುವರತ್ನ" ಚಿತ್ರದಲ್ಲಿ ಪ್ರತಿಯೊಬ್ಬ ಕಲಾವಿದರಿಗೂ ಆಯಾ ಪಾತ್ರಗಳ ಬಗ್ಗೆ ಬಿಗಿ ಹೊಂದಿರಲು ಸೂಚಿಸಲಾಗಿತ್ತು. ನನ್ನ ಪಾತ್ರವು ಬಲವಾದ ಹಿನ್ನೆಲೆಯದು. ಅದರ ಹೆಚ್ಚಿನ ಭಾಗಗಳನ್ನು ವಿಶ್ವವಿದ್ಯಾನಿಲಯಗಳಲ್ಲಿ ಚಿತ್ರೀಕರಿಸಲಾಗಿದೆ ಎನ್ನುವುದ್ ನನಗೆ ಸಂತಸದ ಸಂಗತಿ.ಮುಖ್ಯವಾಗಿ, ಈ ಚಿತ್ರದಲ್ಲಿ ನಾನು ಯಾರೊಬ್ಬರ ಜೋಡಿಯಾಗಿಲ್ಲ." ನಟಿ ಸೋನು ವಿವರಿಸಿದ್ದಾರೆ.
ಇನ್ನು ಸೋನು ಗೌಡ "ಯುವರತ್ನ" ಹೊರತಾಗಿ ತಮಿಳು ವೆಬ್ ಸರಣಿಯ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. "ಕೋವಿಡ್ ನನ್ನನ್ನು ಬಹಳ ಸಮಯದವರೆಗೆ ಮನೆಯೊಳಗೆ ಇಟ್ಟಿತ್ತು. ನಾನು ಮನೆಯಲ್ಲಿಯೇ ಇದ್ದು ಚಲನಚಿತ್ರಗಳನ್ನು ನೋಡುತ್ತಿದ್ದೆ. ಈಗ, ನಾನು "ಯುವರತ್ನ" ಬಿಡುಗಡೆಯನ್ನು ನಿರೀಕ್ಷಿಸುತ್ತಿದ್ದೇನೆ. ಉತ್ತಮ ಸ್ಕ್ರಿಪ್ಟ್ಗಳು ಬರಲಿ ಎಂದು ಕಾಯುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.