'ಜಾನಿ ವಾಕರ್'ನಲ್ಲಿ ರಾಗಿಣಿ ದ್ವಿವೇದಿ ತನಿಖಾಧಿಕಾರಿ ಪಾತ್ರ!
ನಟಿ ರಾಗಿಣಿ ದ್ವಿವೇದಿ ಇತ್ತೀಚೆಗೆ ಈ ವರ್ಷ ಕನಿಷ್ಠ ಆರರಿಂದ ಎಂಟು ಸಿನಿಮಾಗಳಿಗೆ ಸಹಿ ಹಾಕುವುದಾಗಿ ಹೇಳಿದ್ದರು. ಇದಾಗಲೇ ಅವರು ತಮ್ಮ ಎರಡನೇ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. "ಕರ್ವ 3" ನಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಇದೀಗ "ಜಾನಿ ವಾಕರ್" ಸಿನಿಮಾಗಾಗಿ ತಯಾರಿ ನಡೆಸಿದ್ದಾರೆ.
Published: 22nd March 2021 11:15 AM | Last Updated: 22nd March 2021 12:53 PM | A+A A-

ರಾಗಿಣಿ ದ್ವಿವೇದಿ
ನಟಿ ರಾಗಿಣಿ ದ್ವಿವೇದಿ ಇತ್ತೀಚೆಗೆ ಈ ವರ್ಷ ಕನಿಷ್ಠ ಆರರಿಂದ ಎಂಟು ಸಿನಿಮಾಗಳಿಗೆ ಸಹಿ ಹಾಕುವುದಾಗಿ ಹೇಳಿದ್ದರು. ಇದಾಗಲೇ ಅವರು ತಮ್ಮ ಎರಡನೇ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. "ಕರ್ವ 3" ನಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಇದೀಗ "ಜಾನಿ ವಾಕರ್" ಸಿನಿಮಾಗಾಗಿ ತಯಾರಿ ನಡೆಸಿದ್ದಾರೆ.
ಇದು ಆಕ್ಷನ್ ಕ್ರೈಮ್ ಥ್ರಿಲ್ಲರ್ ಆಗಿದ್ದು, ಇದರಲ್ಲಿ ತನಿಖಾ ಅಧಿಕಾರಿಯ ಪಾತ್ರದಲ್ಲಿ ರಾಗಿಣಿ ಕಾಣಿಸಿಕೊಳ್ಳಲಿದ್ದಾರೆ. ಅಭಯ್ ವೀರ್ ಎದುರು ಜೋಡಿಯಾಗಲಿರುವ ನಟಿಯ ಪಾತ್ರ ವಿವಿಧ ಛಾಯೆಗಳನ್ನು ಹೊಂದಿರಲಿದೆ.
"ಸನಿಹ" ಚಿತ್ರದ ಮೂಲಕ ಸುಆಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದ ನಟ ಪ್ರಜ್ವಲ್ ದೇವರಾಜ್ ಅವರೊಂದಿಗೆ "ಸವಾಲ್" ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.ಅವರು ಬ್ರಹ್ಮಪುತ್ರ, ರೈತ ರಾಜ್ಯ, 90 ಹೋಡಿ ಮನೆಗೆ ನಡಿ, ಹೊಯ್ಸಳ ಚಿತ್ರಗಳಲ್ಲಿ ಸಹ ಕೆಲಸ ಮಾಡಿದ್ದಾರೆ ಮತ್ತು ಈಗ ತಮ್ಮ ಎಂಟನೇ ಚಿತ್ರದ ಪ್ರಾರಂಭಕ್ಕೆ ಸಿದ್ದವಾಗುತ್ತಿದ್ದಾರೆ.
"ಮುಫ್ತಿ"ಯಲ್ಲಿ ನರ್ತನ್ ಅವರೊಂದಿಗೆ ಸಹಕಲಾವಿದನಾಗಿ ಕೆಲಸ ಮಾಡಿದ ಅನುಭವವಿರುವ ವೇದಿಕ್ ಜಾನಿ ವಾಕರ್ ಚಿತ್ರದ ಮೂಲಕ ನಿರ್ದೇಶಕರ ಕ್ಯಾಪ್ ಧರಿಸುತ್ತಿದ್ದಾರೆ.
ಯೋಜನೆಯ ಬಗ್ಗೆ ಅಧಿಕೃತ ಪ್ರಕಟಣೆ ಇಂದು ಆನಂದ್ ಆಡಿಯೊದಲ್ಲಿ ಹೊರಬೀಳುವುದರಲ್ಲಿದೆ. ಕುತೂಹಲಕಾರಿ ಸಂಗತಿಯೆಂದರೆ, ಇದು ಬಹುಭಾಷಾ ಚಿತ್ರವಾಗಲಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.